ಕೋವಿಡ್ ಸೋಂಕಿತರ ಆರೈಕೆಗೆ ಪೇಸ್ ವತಿಯಿಂದ ಸರಕಾರಿ ಆಸ್ಪತ್ರೆಗೆ ರೂ. 40 ಸಾವಿರ ಮೌಲ್ಯದ ಅಗತ್ಯ ವಸ್ತುಗಳ ಪೂರೈಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಟ್ಟಡ ಮಾತ್ರವಲ್ಲ ಸಮಾಜದ ನಿರ್ಮಾಣದಲ್ಲೂ ಪೇಸ್ ಮುಂದಿದೆ – ಸಂಜೀವ ಮಠಂದೂರು

ಪುತ್ತೂರು: ಕೋವಿಡ್ ಸೋಂಕಿತರ ಆರೈಕೆಗಾಗಿ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್ ವತಿಯಿಂದ ರೂ. 40 ಸಾವಿರ ಮೌಲ್ಯದ ಅಗತ್ಯ ವಸ್ತುಗಳನ್ನು ಮತ್ತು ಹಣ್ಣು ಹಂಪಲುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಮೇ.24ರಂದು ವಿತರಣೆ ಮಾಡಲಾಯಿತು.

ರೂ. 40 ಸಾವಿರ ಮೌಲ್ಯದ 100 ಬೆಡ್‌ಶೀಟ್, 50 ಬಟ್ಟಲು, 50 ಲೋಟ, 5 ಬಿ.ಪಿ.ಚೆಕ್‌ಅಪ್ ಸಲಕರಣೆ ಸೇರಿದಂತೆ ಹಣ್ಣು ಹಂಪಲುಗಳನ್ನು ಶಾಸಕ ಸಂಜೀವ ಮಠಂದೂರು ಮತ್ತು ಸೇವಾ ಭಾರತಿ ಪುತ್ತೂರು ಇದರ ಪ್ರಮುಖ್ ರವೀಂದ್ರ ಪಿ ಅವರ ಮೂಲಕ ಆಸ್ಪತ್ರೆ ರೋಗಿಳಗಿಗೆ ನೀಡಲೆಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರಿಗೆ ಹಸ್ತಾಂತರಿಸಲಾಯಿತು.

ಕಟ್ಟಡ ಮಾತ್ರವಲ್ಲ ಸಮಾಜದ ನಿರ್ಮಾಣದಲ್ಲೂ ಪೇಸ್ ಮುಂದಿದೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ದೇಶವೇ ಕೋವಿಡ್ ಸಂಕಷ್ಟದಲ್ಲಿರುವಾಗ ಪ್ರತಿಯೊಬ್ಬರ ಜೀವ ರಕ್ಷಣೆ, ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿಯವರ ಕಾಳಜಿಗೆ ತಕ್ಕಂತೆ ಬಹಳಷ್ಟು ಸಂಘ ಸಂಸ್ಥೆಗಳು ಸರಕಾರದ ಜೊತೆ ಕೈ ಜೋಡಿಸಿದೆ. ಪುತ್ತೂರಿನಲ್ಲಿ ನಾವು ಕಟ್ಟಡ ಮಾತ್ರವಲ್ಲ ಸಮಾಜವನ್ನೂ ಕೂಡಾ ನಿರ್ಮಾಣ ಮಾಡುತ್ತೇವೆ ಎಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್‌ನವರು ಸರಕಾರಿ ಆಸ್ಪತ್ರೆಗೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಬೇಡಿಕೆಗಳನ್ನು ಈಡೇರಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್‌ನ ಅಧ್ಯಕ್ಷ ರಮೇಶ್ ಭಟ್ ಅವರು ಸಂಸ್ಥೆಯ ವತಿಯಿಂದ ನೀಡುವ ಹಲವು ಯೋಜನೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್,ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ,ಪೇಸ್‌ನ ನಿಕಟಪೂರ್ವ ಅಧ್ಯಕ್ಷ ಹರೀಶ್ ಪುತ್ತೂರಾಯ, ವಸಂತ್ ಭಟ್, ಸತ್ಯನಾರಾಯಣ ಭಟ್, ಪ್ರವೀಣ್, ರಾಜಶೇಖರ್, ರಾಘವೆಂದ್ರ ಭಟ್, ದಿನೇಶ್ ವಿ ಭಟ್, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ. ಕೃಷ್ಣಪ್ರಸನ್ನ, ರಫೀಕ್ ದರ್ಬೆ, ತಾ.ಪಂ ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಶಾಸಕರ ವಾರ್‌ರೂಮ್ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು. ಶಂಕರ್ ಭಟ್ ಅವರು ಸ್ವಾಗತಿಸಿ, ಆಸ್ಪತ್ರೆಯ ಡಾ. ಜಯದೀಪ್ ವಂದಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.