ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಕೂಪನ್ ಪಡೆಯಲು ನೂಕು ನುಗ್ಗಲು, ಅಂತರ ಮರೆತ ಸಾರ್ವಜನಿಕರು..!!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

  • ಟೋಕನ್ ದೊರಕದೆ ಮರಳಿ ಹೋದ ಸಾರ್ವಜನಿಕರಿಂದ ಆಕ್ರೋಶ
  • ಸಂಘ ಸಂಸ್ಥೆಯ ಹೆಸರಿನಲ್ಲಿ ಲಸಿಕೆ ಕೊಡುವುದರಲ್ಲೂ ರಾಜಕೀಯ?

ಉಪ್ಪಿನಂಗಡಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇ. 24ರಂದು ಬೆಳಿಗ್ಗೆ ಲಸಿಕೆ ಬರುವ ಮಾಹಿತಿ ತಿಳಿದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಲಸಿಕೆ ಪಡೆಯುವ ಸಲುವಾಗಿ ನೀಡುವ ಕೂಪನ್ ಪಡೆಯಲು ಆರೋಗ್ಯ ಕೇಂದ್ರಕ್ಕೆ ಧಾವಿಸಿ ಬಂದು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ನೂಕು ನುಗ್ಗಲು ನಡೆಯುತ್ತಿದ್ದ ದೃಶ್ಯ ಕಂಡು ಬಂತು.

ಆರೋಗ್ಯ ಕೇಂದ್ರಕ್ಕೆ 100 ಡೋಸ್ ಲಸಿಕೆ ಬರಲಿದೆ ಎಂದು ಭಾನುವಾರ ಗೊತ್ತಾಗುತ್ತಲೇ ಪಂಚಾಯಿತಿ ಸದಸ್ಯರು, ಕಾರ್‍ಯಪಡೆ ಸದಸ್ಯರು ತಮ್ಮ ಮೊಬೈಲ್ ವಾಟ್ಸಪ್ ಸ್ಟೇಟಸ್‌ನಲ್ಲಿ ಲಸಿಕೆ ಬರುವ ಬಗ್ಗೆ ಮಾಹಿತಿ ಹಾಕಿದ್ದು, ಇದರಿಂದಾಗಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದಲೇ ಆರೋಗ್ಯ ಕೇಂದ್ರದತ್ತ ಜನ ಬರಲಾರಂಭಿಸಿದ್ದು, ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಜಮಾಯಿಸಿ, ಕೆಲವರು ಜಮಾಯಿಸಿ ನಿಂತಿದ್ದರೆ, ಇನ್ನೂ ಕೆಲವರು ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ ಆರೋಗ್ಯ ಕೇಂದ್ರದ ಮುಂದೆ ಜನ ಜಾತ್ರೆಯಂತೆ ಸೇರಿರುವುದು ಕಂಡು ಬಂದಿದೆ.

ಹೀಗೆ ನಿಂತಿರುವಾಗ ಟೋಕನ್ ಕೊಡಲು ಆರಂಭಿಸಿದ್ದು, ಕೇವಲ 10 ನಿಮಿಷದಲ್ಲಿ ಟೋಕನ್ ಮುಗಿಯಿತು ಎಂದು ಘೋಷಿಸಲಾಯಿತು. ಇದರಿಂದಾಗಿ ಬೆಳಿಗ್ಗೆ ಬಂದು ಸರತಿ ಸಾಲಿನಲ್ಲಿ ನಿಂತ ಬಹಳಷ್ಟು ಮಂದಿಗೆ ಟೋಕನ್ ದೊರಕದಂತಾಯಿತು. ಇದರಿಂದ ಅಸಮಾಧಾನಗೊಂಡ ಸಾರ್ವಜನಿಕರು ವ್ಯವಸ್ಥೆಯ ಬಗ್ಗೆ ತೀರಾ ಆಕ್ರೋಶ ವ್ಯಕ್ತಪಡಿಸಿದ್ದು, ಲಸಿಕೆ ಸಿಗುವ ಬಗ್ಗೆ ತಿಳಿಸಲಾಗಿ, ನಮ್ಮನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಇದೀಗ ಈ ರೀತಿಯಾಗಿ ನಮ್ಮನ್ನು ಹಾಗೇ ಕಳುಹಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ವ್ಯಕ್ತವಾಯಿತು.

ಸಂಘ ಸಂಸ್ಥೆಯ ಹೆಸರಿನಲ್ಲಿ ಲಸಿಕೆ ಕೊಡುವುದರಲ್ಲೂ ರಾಜಕೀಯ?
ಲಸಿಕೆಯ ಕೂಪನ್ ಕೊಡುವ ಸ್ಥಳದಲ್ಲಿ ಕಾರ್‍ಯಪಡೆಯ ಸದಸ್ಯರು ನಿಂತಿದ್ದು, ಅವರು ಬೇರೆ ಬೇರೆ ಸಂಘಟನೆಯಲ್ಲಿ ತೊಡಗಿಸಿಕೊಂಡವರಾಗಿದ್ದು, ಅವರು ತಮಗೆ ಬೇಕಾದವರಿಗೆ ಲಸಿಕೆ ಸಿಗುವ ಬಗ್ಗೆ ಮಾಹಿತಿ ನೀಡಿ ಬರ ಹೇಳಿದ್ದು, ಇಲ್ಲಿ ಕೂಪನ್ ಕೊಡುವಾಗಲೂ ತಮ್ಮವರಿಗೆ ಸಿಗುವಂತೆ ನೋಡಿಕೊಳ್ಳುತ್ತಿದ್ದು, ಮತ್ತು ಆ ರೀತಿ ಪಡೆದುಕೊಂಡವರು 1ಕ್ಕಿಂತಲೂ ಅಧಿಕ ಟೋಕನ್ ಪಡೆದು ಇಟ್ಟುಕೊಳ್ಳುತ್ತಿದ್ದಾರೆ, ಇಲ್ಲಿಯೂ ರಾಜಕೀಯ ನಡೆಯಲಾರಂಭಿಸಿದೆ ಎಂಬ ಗಂಭೀರ ಆರೋಪ ಸರತಿ ಸಾಲಿನಲ್ಲಿ ಕಾದು ನಿಂತಿದ್ದ ವ್ಯಕ್ತಿಗಳಿಂದ ವ್ಯಕ್ತವಾಗಿದ್ದು, ಈ ರೀತಿ ಆಗದಂತೆ ಇಲಾಖೆ ಗಮನ ಹರಿಸುವಂತೆ ಆಗ್ರಹ ವ್ಯಕ್ತವಾಗಿದೆ.

100 ಡೋಸ್ ಲಸಿಕೆ ಬಂದಿದ್ದು, ನಿಯಮಾನುಸಾರ ನೀಡುತ್ತಿದ್ದೇವೆ-ಡಾ| ಝರಿನಾ
ಇಂದು ಆರೋಗ್ಯ ಕೇಂದ್ರಕ್ಕೆ 45 ವರ್ಷ ಮೇಲ್ಪಟ್ಟವರಿಗೆ ಕೊಡಲು 100 ಡೋಸ್ ಕೋವಿ ಶೀಲ್ಡ್ ಲಸಿಕೆ ಬಂದಿರುತ್ತದೆ, ಅದರಲ್ಲಿ ಇಲಾಖೆ ಸೂಚನೆ ಮೇರೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಪೊಲೀಸ್, ಆರೋಗ್ಯ ಕಾರ್‍ಯಕರ್ತೆಯರಿಗಾಗಿ 30 ಮೀಸಲು ಇಡಲಾಗಿದೆ. ಉಳಿದವನ್ನು ನಿಯಮಾನುಸಾರ ನೀಡುತ್ತಿದ್ದೇವೆ. ಆದರೆ ಬಹಳಷ್ಟು ಮಂದಿ ನೋಂದಣಿಯೂ ಮಾಡದೆ ಬಂದು ಇಲ್ಲಿ ಜಮಾಯಿಸಿದ್ದಾರೆ. ಅವರಿಗೆ ಮನವರಿಕೆ ಮಾಡಲಾಗಿದ್ದು, ಹಂತ ಹಂತವಾಗಿ ಎಲ್ಲರಿಗೂ ಸಿಗುವಂತೆ ಮಾಡಲಾಗುವುದು ಎಂದು ಕರ್ತವ್ಯ ನಿರತ ವೈದ್ಯೆ ಡಾ| ಝರಿನಾ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.