ಸರಕಾರಿ ಆಸ್ಪತ್ರೆಗೆ ರೂ. 50ಸಾವಿರ ಮೌಲ್ಯದ ಅಗತ್ಯ ಪರಿಕರಗಳ ಪೂರೈಕೆ | ಆಸ್ಪತ್ರೆಯ ಸರ್ಜನ್ ಡಾ. ಗೌತಮ್‌ರವರ ಸ್ನೇಹಿತರಿಂದ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್-19 ಸೋಂಕಿಗೆ ಸಂಬಂಧಿಸಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ ವೈದ್ಯರ ಉಪಯೋಗಕ್ಕೆ ಬರುವಂತಹ ರೂ. 50ಸಾವಿರ ಮೌಲ್ಯದ ಅಗತ್ಯ ಪರಿಕರಗಳನ್ನು ಆಸ್ಪತ್ರೆಯ ಸರ್ಜನ್ ಡಾ. ಗೌತಮ್ ಅವರ ವಿದೇಶದಲ್ಲಿರುವ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಸ್ನೇಹಿತರು ಕೊಡುಗೆಯಾಗಿ ನೀಡಿದ್ದಾರೆ.

ಕೋವಿಡ್‌ಗಳ ಉಪಚಾರಕ್ಕೆ ಬೇಕಾಗುವಂತಹ ಎನ್.95 ಮಾಸ್ಕ್, ಸರ್ಜಿಕಲ್ ಮಾಸ್ಕ್, ಪಲ್ಸ್‌ಆಕ್ಸಿಮೀಟರ್, ಪೇಸ್‌ಶೀಲ್ಡ್, ಬಿ.ಪಿ.ಅಪ್ಪರಟಸ್ ಸೇರಿದಂತೆ ಒಟ್ಟು ರೂ.50ಸಾವಿರ ಮೌಲ್ಯದ ಸಾಮಾಗ್ರಿಗಳನ್ನು ವಿತರಣೆಯನ್ನು ಆಸ್ಪತ್ರೆಯ ಡಾ. ಗೌತಮ್ ಅವರ ಅಮೇರಿಕಾ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಸ್ನೇಹಿತರಾದ ಡಾ. ಸಮರ್ಥ್, ಡಾ.ಮೇಘ, ಪೃಥ್ವಿಶೆಟ್ಟಿ, ದೀಫಾಸ್ಮರಣಿತ, ಅಮಿತ್, ಶ್ರೀದೀಪ್‌ರವರು ಕೊಡುಗೆಗಳನ್ನು ನೀಡಿದವರಾಗಿದ್ದು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾಜ್ಯೋತಿ ಪುತ್ತೂರಾಯ ಅವರು ಕೊಡುಗೆಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಡಾ. ಜಯದೀಪ್ ಅವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.