ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕೋವಿಡ್- 19 ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಟ್ಟದ ಕೋವಿಡ್ ಕಾರ್ಯಪಡೆ ಸಭೆ ಮೆ.24 ರಂದು   ಪಂಚಾಯತ್ ಉಪಾಧ್ಯಕ್ಷ ವಿನೋದ್ ರೈ ಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಪಡೆ ಸಭೆಗೆ ಮೇಲಾಧಿಕಾರಿಗಳು ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ನೊಡೆಲ್ ಅಧಿಕಾರಿಯವರಿಗೆ ಬರಲು ಅನಾನುಕೂಲವಾದರೆ ಮಾಹಿತಿಯಿರುವ ಬದಲಿ ಅಧಿಕಾರಿಯನ್ನಾದರೂ ಕಳುಹಿಸ ಬೇಕಿತ್ತು. ಯಾವುದೇ ಮಾಹಿತಿ ಇಲ್ಲದೆ ನಾವು ಸಭೆ ನಡೆಸಿ ಏನೂ ಪ್ರಯೋಜನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.             
ಇದಕ್ಕೆ ಉತ್ತರಿಸಿದ ಕಾರ್ಯದರ್ಶಿಯವರು ನೊಡೆಲ್ ಅಧಿಕಾರಿಯವರು ವ್ಯಾಕ್ಸಿನ್ ಕೇಂದ್ರದಲ್ಲಿ ಇರುವುದರಿಂದ ಸಭೆಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.
 

ಕಾರ್ಯಪಡೆ ಸಭೆ ಕೇವಲ ಪಂಚಾಯತ್ ಸದಸ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಇಲ್ಲಿ ಶಾಲಾ ಮುಖ್ಯ ಗುರುಗಳು, ಸಂಬಂಧ ಪಟ್ಟ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗುತ್ತಿಲ್ಲ. ಅವರಿಗೆ ಎನೂ  ಜವಾಬ್ದಾರಿ ಇಲ್ಲದಂತೆ ಕಾಣುತ್ತಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಯಾವುದೇ ಕಾರ್ಯಕ್ರಮ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಅದಕ್ಕೆ ಸ್ಪಂದಿಸಿದರೆ ಮಾತ್ರ ಯಶಸ್ವಿ ಕಾಣಲು ಸಾಧ್ಯ ಎಂದು ಸದಸ್ಯರು ಅಭಿಪ್ರಾಯ ಪಟ್ಟರು.ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ

ಸಂದರ್ಭದಲ್ಲಿ ಆ ವಾರ್ಡ್ ಸದಸ್ಯರು ಕೂಡ ಜೊತೆಯಲ್ಲಿ ಹೋದರೆ ಜನರಿಗಿರುವ ಸಮಸ್ಯೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ಪಡಲಾಯಿತು.
ಪ್ರಸ್ತುತ ಬೆಟ್ಟಂಪಾಡಿ ಗ್ರಾಮದಲ್ಲಿ ನಾಲ್ಕು ಮತ್ತು ಇರ್ದೆ ಗ್ರಾಮದಲ್ಲಿ ಎರಡು ಒಟ್ಟು ಆರು ಸಕ್ರೀಯ ಪ್ರಕರಣ ಇದೆ ಎಂದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಶೋಧ ಮಾಹಿತಿ ನೀಡಿದರು.
ಆಕ್ಸಿಮೀಟರ್ ಪಂಚಾಯತಿಗೆ ಹಸ್ತಾಂತರ– ಮೈಸೂರು ಖುರ್ಷಿದಾ ಫೌಂಡೇಶನ್ ಇದರ ಸಲಿಮುಲ್ಲಾಖಾನ್ ಇಕ್ಬಾಲ್ ಬದ್ರುಜಾಮ ಖಾನುಮ್ ಇವರು ಕೊಡುಗೆಯಾಗಿ ನೀಡಿದ ಎರಡು ಆಕ್ಸಿಮೀಟರನ್ನು ಪಂಚಾಯತ್ ಸದಸ್ಯ ನವೀನ್ ಕುಮಾರ್ ರೈ ಚೆಲ್ಯಡ್ಕ ಪಂಚಾಯತ್ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಮೂಲಕ ಪಂಚಾಯತಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಪವಿತ್ರ. ಡಿ,   ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಉಮಾವತಿ ಸುಬ್ಬಪ್ಪ ಮಣಿಯಾಣಿ, ಬೇಬಿ ಜಯರಾಮ್, ಲಲಿತಾ,ಮೊಯಿದು ಕುಂಞ,  ಚಂದ್ರಶೇಖರ ರೈ, ಗಂಗಾಧರ ಗೌಡ,ಪ್ರಕಾಶ್ ರೈ ಬೈಲಾಡಿ,    ಮಹಾಲಿಂಗ ನಾಯ್ಕ,ಮಾಜಿ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ಆಶಾ ಕಾರ್ಯಕರ್ತೆಯರಾದ ಭವಾನಿ, ಭವಾನಿ.ಕೆ, ದೇವಕಿ, ಸೀತಮ್ಮ.ಡಿ,ಮಮತಾ.ಎಸ್, ಗ್ರಾಮ ಕರಣಿಕ ಕನಕರಾಜ್, ಮಿತ್ತಡ್ಕ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ.ಸಿ.ಎಚ್, ಉಪ್ಪಳಿಗೆ ಅಂಗನವಾಡಿ ಕಾರ್ಯಕರ್ತೆ ಲಲಿತಾ.ಟಿ ಮೊದಲಾದವರು ಪಾಲ್ಗೊಂಡರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿ ಸಂದೀಪ್ ಸಹಕರಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.