ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ವತಿಯಿಂದ “ನಾವೂ ಬದುಕಬೇಕು” ಜನಾಗ್ರಹ ಆಂದೋಲನ, ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಖಾಲಿ ತಟ್ಟೆ, ಚೀಲಗಳನ್ನು ಪ್ರದರ್ಶಿಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ

ಪುತ್ತೂರು: `ನಾವೂ ಬದುಕಬೇಕು’ ಎನ್ನುವ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಜನಾಂದೋಲನದ ಭಾಗವಾಗಿ ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ವತಿಯಿಂದ ಸಾಂಕೇತಿಕ ಪ್ರತಿಭಟನೆ ಸಂಟ್ಯಾರ್ ಶಾಲಾ ಬಳಿ ಮೇ.೨೪ರಂದು ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದವರು ಖಾಲಿ ತಟ್ಟೆ ಹಾಗೂ ಚೀಲಗಳನ್ನು ಹಿಡಿದು, ಬಿತ್ತಿ ಪತ್ರ ಪ್ರದರ್ಶಿಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಡಿ.ಟಿ.ಯು ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಬಳಕ್ಕ ಮಾತನಾಡಿ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್ ಜನರ ಕಣ್ಣಿಗೆ ಮಣ್ಣೆರಚುವಂತಹ ನಾಟಕದ ಪ್ಯಾಕೇಜ್ ಆಗಿದ್ದು ಬಡವರ ಪಾಲಿಗೆ ಉಪಕಾರವಿಲ್ಲದ ಪ್ಯಾಕೇಜ್ ಅದಾಗಿದೆ. ರಾಜ್ಯ ಸರಕಾರವು ಎಲ್ಲರಿಗೂ ಉಚಿತ ಚಿಕಿತ್ಸೆ, ವ್ಯಾಕ್ಸಿನ್ ವ್ಯವಸ್ಥೆ, ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಬಡವರಿಗೆ ಸಮಗ್ರ ಪಡಿತರ ಮತ್ತು ಆರ್ಥಿಕ ವ್ಯವಸ್ಥೆ ಒದಗಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಆರ್ಯಾಪು ವಲಯ ಕಾರ್ಯದರ್ಶಿ ಝಕರಿಯಾ ಸಂಟ್ಯಾರ್, ಸಂಟ್ಯಾರ್ ಬ್ರಾಂಚ್ ಅಧ್ಯಕ್ಷ ಸಮೀರ್ ಎಚ್.ಇ, ಪಿ.ಎಫ್.ಐ ಸಂಟ್ಯಾರ್ ಘಟಕ ಅಧ್ಯಕ್ಷ ಹನೀಫ್ ಕಲ್ಲರ್ಪೆ ಹಾಗೂ ಪಕ್ಷದ ಕಾರ್ಯಕರ್ತರು, ಊರವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.