ಎಸ್ಕೆಎಸ್ಸೆಸೆಫ್ ವಿಖಾಯ ಕರ್ನಾಟಕ ಯುಎಇ ವತಿಯಿಂದ ಆಕ್ಸಿಜನ್ ಸಿಲಿಂಡರ್, ಮೆಡಿಕಲ್ ಕಿಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ದುಬೈ: ಅನಿವಾಸಿ ಸುನ್ನಿ ಕನ್ನಡಿಗರ ಸಂಘಟನೆಯಾದ ಎಸ್ಕೆಎಸ್ಸೆಸೆಫ್ ಕರ್ನಾಟಕ ಯುಎಇ ಹಾಗೂ ಎಸ್ಕೆಎಸ್ಸೆಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿ ವತಿಯಿಂದ ತಾಯಿನಾಡಿನಲ್ಲಿ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಗಳನ್ನು ಕಾರ್ಗೊ ಮೂಲಕ ಕಳುಹಿಸಿ ಕೊಡಲಾಯಿತು. ಇದಕ್ಕಾಗಿ ಸಮಿತಿಯು ಜಂಟಿಯಾಗಿ DONATE OXYGEN & SAVE LIVES  ಅಭಿಯಾನವನ್ನು ದುಬೈಯಲ್ಲಿ ಆನ್ಲೈನ್ ಮೂಲಕ ಆಯೋಜಿಸಿಲಾಗಿತ್ತು. ಶೆರೀಫ್ ಕಾವು ಮತ್ತು ರಫೀಕ್ ಸುರತ್ಕಲ್ ಅವರು ಅಭಿಯಾನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. SHIPWAVES DUBAI ಇದರ ಮಾಲಕರಾದ ಮುಹಮ್ಮದ್ ಹಾರಿಸ್ ಅವರು ದುಬೈಯಿಂದ ಮಂಗಳೂರಿಗೆ ಉಚಿತ ಕಾರ್ಗೊ ವ್ಯವಸ್ಥೆ ಮಾಡಿ ಸಹಕರಿಸಿದರು. ಎಸ್ಕೆಎಸ್ಸೆಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಗರ್ ಅಲೀ ತಂಙಳ್ ಕೋಲ್ಪೆ ರವರ ನೇತೃತ್ವ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲ್ಯೆಮಾನ್ ಮೌಲವಿ ಕಲ್ಲೆಗ ರವರು ದುವಾ ಮಾಡುವುದರ ಮೂಲಕ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಗಳನ್ನು ಕಾರ್ಗೊ ಮೂಲಕ ತಾಯಿನಾಡಿಗೆ ಕಳುಹಿಸಿ ಕೊಡಲಾಯಿತು.


ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸೆಫ್ ವಿಖಾಯ ಕರ್ನಾಟಕ ಯು.ಎ.ಇ. ಚೆಯರ್ಮೆನ್ ನವಾಝ್ ಬಿ.ಸಿ.ರೋಡ್, ಎಸ್ಕೆಎಸ್ಸೆಸೆಫ್ ಕರ್ನಾಟಕ ಯುಎಇ ಟ್ರೆಂಡ್ ಚೆಯರ್ಮೇನ್ ನೂರ್ ಮುಹಮ್ಮದ್ ನೀರ್ಕಜೆ, ಎಸ್ಕೆಎಸ್ಸೆಸೆಫ್ ವಿಖಾಯ ಯುಎಇ ಕಾರ್ಯದರ್ಶಿ ನಾಸಿರ್ ಬಪ್ಪಳಿಗೆ, ಕೋಶಾಧಿಕಾರಿ ಸಿರಾಜ್ ಬಿಸಿ ರೋಡ್, ಕನ್ವೀನರ್ ಅಬ್ದುಲ್ ಅಝೀಝ್ ಸೋಂಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೆರೀಫ್ ಕೊಡಿನೀರು, ಜನಾಬ್ ನಿಝಾಮ್ ತೋಡಾರು, ಶಬೀರ್ ಫರಂಗಿಪೇಟೆ, ಜೌಹರ್ ಉರುಮನೆ ಮೊದಲಾದವರು ಉಪಸ್ಥಿತರಿದ್ದರು. ಅನಿವಾಸಿ ಉದ್ಯಮಿಗಳು, ಉದಾರಿ ದಾನಿಗಳು, ಸಮಿತಿಯ ಪದಾಧಿಕಾರಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.