ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಲ್ಲಿನ ಬಲ್ನಾಡು ಕೋವಿಡ್ ಕೇರ್ ಸೆಂಟರ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ – ಸೋಂಕಿತರಿಂದ ಮಾಹಿತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಗೊಂಡಿರುವ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಸೋಂಕಿತರಿಗೆ ಉತ್ತಮ ವ್ಯವಸ್ಥೆಗಳಿದ್ದು, ಸಮಯಕ್ಕೆ ಸರಿಯಾಗಿ ಬಿಸಿನೀರು ಸಹಿತ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಈ ನಡುವೆ ಅಲ್ಲಿರುವ ಕೋವಿಡ್ ಸೋಂಕಿತರು ನಾವಿಲ್ಲಿ ಹ್ಯಾಪಿಯಾಗಿದ್ದೇವೆ. ಯಾವುದೇ ಸಮಸ್ಯೆಗಳಿಲ್ಲದೆ ಗುಣಮುಖರಾಗುತ್ತಿದ್ದೇವೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

 

ತಹಸಿಲ್ದಾರ್ ರಮೇಶ್ ಬಾಬು ಅವರ ಜೊತೆಯಲ್ಲಿ ಪತ್ರಕರ್ತರು ಬಲ್ನಾಡು ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದಾಗ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ನಮಗೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಉತ್ತಮ ಪೌಷ್ಠಿಕ ಆಹಾರ ನೀಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಿಸಿ ನೀರು, ಬೆಡ್ ಸೇರಿದಂತೆ ಉತ್ತಮ ಮೂಲಭೂತ ಸೌಲಭ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಹುತೇಕ ಮಂದಿ ಗುಣಮುಖ:
ಬಲ್ನಾಡು ಮೊರಾರ್ಜಿ ದೇಸಾಯಿ ಶಾಲೆ, ಸರ್ಕಾರಿ ಆಸ್ಪತ್ರೆ ಹಾಗೂ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆ ಕೊವಿಡ್ ಕೇರ್ ಸೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ಈ ಪೈಕಿ ಪ್ರಸ್ತುತ ಬಲ್ನಾಡುವಿನಲ್ಲಿ 28 ಮಂದಿ, ಪುತ್ತೂರಿನಲ್ಲಿ 12 ಮಂದಿ ಮತ್ತು ಉಪ್ಪಿನಂಗಡಿಯಲ್ಲಿ 3 ಮಂದಿ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲ್ನಾಡುವಿನಲ್ಲಿ 43 ಮಂದಿ ಕೋವಿಡ್ ಸೋಂಕಿತರಾಗಿ ದಾಖಲಾತಿಗೊಂಡಿದ್ದು, 15 ಮಂದಿ ಗುಣಮುಖರಾಗಿ ಹಿಂದಿರುಗಿದ್ದಾರೆ. 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರಿನಲ್ಲಿ 34 ಮಂದಿ ದಾಖಲಾಗಿದ್ದು, 4 ಮಂದಿ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. 30 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಉಪ್ಪಿನಂಗಡಿಯಲ್ಲಿ 3 ಮಂದಿ ದಾಖಲಾಗಿದ್ದು ಮೂವರೂ ಚಿಕಿತ್ಸೆಯಲ್ಲಿದ್ದಾರೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಸಕಾಲದಲ್ಲಿ ಪೌಷ್ಠಿಕ ಆಹಾರ
ಕೋವಿಡ್ ಪೀಡಿತರಿಗೆ ಔಷಧಿಗಿಂತಲೂ ಪೌಷ್ಠಿಕ ಆಹಾರ ಒದಗಿಸುವುದು ಮುಖ್ಯವಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿರುವವರಿಗೆ ಬೆಳಗ್ಗೆ ತಿಂಡಿ ಚಹಾ, ಮದ್ಯಾಹ್ನ ಊಟ ಜೊತೆಗೆ ಮೊಟ್ಟೆ, ಫ್ರುಟ್ಸ್, ಸಂಜೆ ಕಷಾಯ, ರಾತ್ರಿ ಚಪಾತಿ, ಊಟ ನೀಡಲಾಗುತ್ತಿದೆ. ಅಲ್ಲದೆ ನಿರಂತರ ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಕೋವಿಡ್ ಕೇರ್ ಸೆಂಟರ್‌ನ ನೋಡಲ್ ಅಧಿಕಾರಿಯಾಗಿರುವ ಪ್ರಾಂಶುಪಾಲ ಸುಬ್ರಹ್ಮಣ್ಯ ನಾಯಕ್ ತಿಳಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.