ಪೊಲೀಸ್ ಕಾನ್ಸ್ಟೇಬಲ್, ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ವಿದ್ಯಾಮಾತಾದಲ್ಲಿ ಉಚಿತ ಆನ್ಲೈನ್ ತರಬೇತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕರ್ನಾಟಕ ಪೊಲೀಸ್ ಇಲಾಖೆಯ ಸಬ್‌ಇನ್‌ಸ್ಪೆಕ್ಟರ್ (545+402 ಸಿವಿಲ್ ಹುದ್ದೆಗಳು) ಮತ್ತು ಕಾನ್‌ಸ್ಟೇಬಲ್ ಹುದ್ದೆಗಳಿಗೆ (3553 ಸಿವಿಲ್ ಹುದ್ದೆಗಳು)2021ರ ಸಾಲಿನ ನೇಮಕಾತಿಗೆ ನಡೆಯಲಿರುವ ಲಿಖಿತ ಪರೀಕ್ಷೆಗಳಿಗೆ ವಿದ್ಯಾಮಾತ ಅಕಾಡೆಮಿಯ ವತಿಯಿಂದ ತರಬೇತಿ ತರಗತಿಗಳು ಆನ್ಲೈನ್ ಮುಖಾಂತರ ನಡೆಯಲಿದೆ. ದಿನಂಪ್ರತಿ 2 ಗಂಟೆಗಳಂತೆ 2 ತಿಂಗಳು ತರಬೇತಿ ನಡೆಯಲಿದೆ. ಪಿಯುಸಿ/ಪದವಿಯಲ್ಲಿ ಶೇ.90 ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿರುವ ಬಿಪಿಎಲ್/ ಅಂತ್ಯೋದಯ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ತರಬೇತಿಯನ್ನು ನೀಡಲಾಗುತ್ತದೆ. ಉಳಿದಂತೆ ಗ್ರಾಮೀಣ ಪ್ರದೇಶದ ಅಥವಾ ಕನ್ನಡ ಮಾಧ್ಯಮ/ನಗರ ಪ್ರದೇಶಗಳಲ್ಲಿ ಇದ್ದರೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಾಗಿದ್ದರೆ ತರಬೇತುದಾರರ ವೇತನದ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ತರಬೇತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯು ವಿದ್ಯಾಮಾತ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆಯಲಿದ್ದು 2 ತಿಂಗಳ ತರಬೇತಿಯನ್ನು ಆಸಕ್ತ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ತರಬೇತಿ ಪ್ರವೇಶಾತಿ ಪಡೆದುಕೊಳ್ಳುವ ಅಭ್ಯರ್ಥಿಗಳಿಗೆ ಯಾವುದೇ ಸೇವಾಶುಲ್ಕವಿಲ್ಲದೆ ವಿದ್ಯಾಮಾತ ಅಕಾಡೆಮಿ ಮೂಲಕ ಆನ್ಲೈನ್ ಅರ್ಜಿ ಹಾಕಿ ಕೊಡಲಾಗುತ್ತದೆ. ಇದಕ್ಕೆ ಸೂಕ್ತ ದಾಖಲಾತಿಗಳನ್ನು ಒದಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತ ಅಕಾಡೆಮಿ 9148935808, 8590773486 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.