ಸುದ್ದಿಯಿಂದ ಜನಾಧಿಕಾರದ ಅನಾವರಣ: ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ಜೊತೆ ಸಂವಾದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸುದ್ದಿಯಿಂದ ಜನಾಧಿಕಾರದ ಅನಾವರಣ ಸರಣಿ ಕಾರ್ಯಕ್ರಮದ ಅಂಗವಾಗಿ ಮೆಸ್ಕಾಂನ ಅಧಿಕಾರಿಗಳ ಜೊತೆಗೆ ನೇರ ಫೋನ್ ಇನ್ ಕಾರ್ಯಕ್ರಮವು ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಕೇಬಲ್ ಚಾನೆಲ್‌ನಲ್ಲಿ ಪ್ರಸಾರಗೊಂಡಿತು. ಕಾರ್ಯಕ್ರಮದಲ್ಲಿ ಮೆಸ್ಕಾಂ ಪುತ್ತೂರು ನಗರ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಿಲ್ಪಾ ಶೆಟ್ಟಿ ಮತ್ತು ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ಭಾಗವಹಿಸಿ ವಿದ್ಯುತ್ ಕುರಿತಂತೆ ಜನರ ಸಮಸ್ಯೆಗಳಿಗೆ ಉತ್ತರಿಸಿದರು. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ, ಸಮಸ್ಯೆಗಳು, ಕೃಷಿ, ಕೈಗಾರಿಕೆಗೆ ವಿದ್ಯುತ್ ಬಳಕೆ, ಟ್ರಾನ್ಸ್ಫಾರ್ಮರ್‌ಗಳ ಅಳವಡಿಕೆಗೆ ಬೇಡಿಕೆ, ಸೋಲಾರ್ ಅಳವಡಿಕೆಯ ಮಾಹಿತಿ, ಸರಕಾರದ ಸವಲತ್ತು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಜನರು ಕರೆಮಾಡಿ ಉತ್ತರಗಳನ್ನು ಪಡೆದುಕೊಂಡರು. ಪೂರಕವಾಗಿ ಸ್ಪಂದಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ನಿರೂಪಕ ಗೌತಮ್ ಶೆಟ್ಟಿ ಮತ್ತು ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಯತೀಶ್ ಉಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.