ರೋಟರಿ ಎಲೈಟ್, ಸಂಸಾರ ಜೋಡುಮಾರ್ಗದಿಂದ ಲಾಕ್‌ಡೌನ್ ವಿಡಿಯೋ ಹಾಡು ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ರೋಟರಿ ಪುತ್ತೂರು ಎಲೈಟ್ ಹಾಗೂ ಸಂಸಾರ ಜೋಡುಮಾರ್ಗ ಹೊರತಂದಿರುವ “ಲಾಕ್ ಡೌನ್ ಲಾಕ್ ಡೌನ್” ವಿಡಿಯೋ ಹಾಡನ್ನು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಲೈಬ್ರೇರಿಯನ್ ರೊ.ರಾಮ.ಕೆ. ಮಂಗಳವಾರ ಬಿಡುಗಡೆಗೊಳಿಸಿದರು.

ಮೌನೇಶ ವಿಶ್ವಕರ್ಮ ರಚಿಸಿರುವ ಈ ಹಾಡನ್ನು ಹಾಸನ ಜಿಲ್ಲೆಯ ಜನಪದ ಕಲಾವಿದ ದೊಡ್ಡಹಳ್ಳಿ ರಮೇಶ್ ರಾಗ ಸಂಯೋಜಿಸಿ ಹಾಡಿದ್ದಾರೆ. ಕೊರೋನಾ ಹರಡುವಿಕೆಯ ಸರಪಳಿ ಕಡಿಯಲೆಂದು ಜಾರಿಯಲ್ಲಿರುವ ಲಾಕ್ ಡೌನ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಕೊರೋನಾ ನಿಯಂತ್ರಣ, ನಿರ್ವಹಣೆ, ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ ಎನ್ನುವುದನ್ನು ನೆನಪಿಸುವ ಈ ವಿಡಿಯೋ ಹಾಡು , ಕೊರೋನಾ ನಿಗ್ರಹಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜೊತೆ ಸಹಕರಿಸುವಂತೆ ಮನವಿ ಮಾಡುತ್ತದೆ. ಈ ಸಂದರ್ಭ ರೋಟರಿ ಎಲೈಟ್‌ನ ಆಸ್ಕರ್ ಆನಂದ್, ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ, ಮಾ.ರಿಷಬ್ ರಾಮ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.