ಅನಾಥ ನಾಗರ ಹಾವಿನ ಮೊಟ್ಟೆಗಳ ರಕ್ಷಣೆ ಮಾಡಿದ ವನ್ಯಜೀವಿ ಪ್ರೇಮಿ ತೇಜಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅನಾಥವಾಗಿದ್ದ ನಾಗರ ಹಾವಿನ ಮೊಟ್ಟೆಗಳಿಗೆ ವನ್ಯ ಜೀವಿ ಪ್ರೇಮಿ ಯುವಕನೋರ್ವ ಕೃತಕ ಶಾಖ ನೀಡಿ ಮರಿ ಮಾಡಿ ಅರಣ್ಯಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

ಬನ್ನೂರು ಕರ್ಮಲ ನಿವಾಸಿ ಯುವಕ ತೇಜಸ್ ಹಲವು ವರ್ಷಗಳಿಂದ ಪ್ರಾಣಿ- ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದು, ಇತ್ತೀಚೆಗೆ ನಗರಸಭೆ ವ್ಯಾಪ್ತಿಯ ಡಾ. ರಮೇಶ್ ಎಂಬವರ ಮನೆ ಪರಿಸರದಲ್ಲಿ ನಾಗರ ಹಾವಿನ 8 ಮೊಟ್ಟೆಗಳು ಪತ್ತೆಯಾಗಿತ್ತು. ಈ ಸಂದರ್ಭ ತೇಜಸ್ ಅವರು ಮೊಟ್ಟೆಗಳಿಗೆ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡು ಮನೆಯಲ್ಲೇ ಕೃತಕ ಕಾವು ಕೊಟ್ಟು ಮರಿಗಳನ್ನು ಮಾಡಿ ಬಳಿಕ ಪುತ್ತೂರು ಉಪವಲಯ ಅರಣ್ಯಾಧಿಕಾರಿ ಶಿವಾನಂದ ಅವರ ನೇತೃತ್ವದಲ್ಲಿ ಪುತ್ತೂರು ಕಟಾರದ ಹೊಳೆಯ ಬದಿಯಲ್ಲಿ ಬಿಡುವ ಮೂಲಕ ಹಾವಿನ ರಕ್ಷಣೆ ಮಾಡಿದ್ದಾರೆ. ಈಗಾಗಲೇ ಸುಮಾರು ೫ ಸಾವಿರಕ್ಕೂ ಮಿಕ್ಕಿ ನಾಗರಹಾವುಗಳನ್ನು ರಕ್ಷಿಸಿ ಸುರಕ್ಷಿತ ತಾಣಕ್ಕೆ ಅವುಗಳನ್ನು ಸೇರಿಸುವ ಕೆಲಸ ಮಾಡಿರುವ ತೇಜಸ್ ಅವರು ಅರಣ್ಯ ಇಲಾಖೆಯೊಂದಿಗೆ ಪರಿಸರ ಪ್ರೇಮಿಯಾಗಿ ತನ್ನಿಂದಾದ ಸೇವೆ ನೀಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.