ಉಪ್ಪಿನಂಗಡಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಕ್ಕೆ ವರ್ಷದ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆಶಾ ಕಾರ್‍ಯಕರ್ತೆಯರಿಗೆ, ಆರೋಗ್ಯ ಕೇಂದ್ರ ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಸ್ಯಾನಿಟೈರಿ ಪ್ಯಾಡ್ ವಿತರಣೆ

ಉಪ್ಪಿನಂಗಡಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಇರುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಕ್ಕೆ ಮೇ. ೨೬ರಂದು ವರ್ಷ ತುಂಬಿದ ಸಂಭ್ರಮದ ಸಲುವಾಗಿ ಸಂಸ್ಥೆಯ ವತಿಯಿಂದ ಆರೋಗ್ಯ ಕೇಂದ್ರ ವ್ಯಾಪ್ತಿಯ ೫೨ ಆಶಾ ಕಾರ್‍ಯಕರ್ತೆಯರು ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಸಹಿತ 70ಮಂದಿಗೆ ಸ್ಯಾನಿಟೈಸರ್ ಮತ್ತು ಜನಸ್ನೇಹಿ ಸ್ಯಾನಿಟೈರಿ ಪ್ಯಾಡ್ ವಿತರಣೆ ಮಾಡಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಮುಷಾಕಿರ್ ಹುಸೇನ್‌ರವರಿಗೆ ಸ್ಯಾನಿಟೈಸರ್ ನೀಡುವ ಮೂಲಕ ವಸ್ತುಗಳ ವಿತರಣೆಗೆ ಚಾಲನೆ ನೀಡಿದರು.

ಕೋವಿಡ್-೧೯ ನಿಯಮಾನುಸಾರ ನಡೆದ ಸರಳ ಕಾರ್‍ಯಕ್ರಮದಲ್ಲಿ ಪದ್ಮವಿದ್ಯಾ ಗ್ರೂಪ್ ಸಂಸ್ಥೆಯ ಏಕ ವಿದ್ಯಾಧರ, ಜಯಂತ ಪೊರೋಳಿ, ಸಮುದಾಯ ಆರೋಗ್ಯ ಕೇಂದ್ರದ ಡಾ| ಝರೀನಾ ಫಾತಿಮಾ, ಡಾ| ಅನೀಶ್, ಡಾ| ನಿಹಾರಿಕಾ, ನೇತ್ರಾಧಿಕಾರಿ ಶಾಂತರಾಜ್, ಚಂದ್ರಕಾಂತ, ನಿವೃತ್ತ ಸಿಬ್ಬಂದಿ ಮೌರೀಸ್, ಸ್ಥಳೀಯ ಪ್ರಮುಖರಾದ ಹರಿರಾಮಚಂದ್ರ, ಅನುದೀಪ್ ರೈ, ಸಂಸ್ಥೆಯ ಪುಷ್ಪಲತಾ, ಮಣಿಮಾಲ, ವಿನುತ್ ಕುಮಾರ್ ಉಪಸ್ಥಿತರಿದ್ದರು. ಜನ ಔಷಧಿ ಕೇಂದ್ರದ ಅನಿಲ್ ಕುಮಾರ್ ಸ್ವಾಗತಿಸಿ, ಅಭಯ್ ಎಂ. ಜೈನ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.