ಪಾಣಾಜೆ ಗ್ರಾ.ಪಂ. ವ್ಯಾಪ್ತಿಯ ಕೋಳಿ   ಫಾರಂ ಮಾಲಕರ ತುರ್ತು ಸಭೆ- ಶುಚಿತ್ವ ಕಾಪಾಡುವ ಬಗ್ಗೆ ನಿರ್ಣಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ;  ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಕೋಳಿ ಫಾರಂಗಳ ಪೈಕಿ ಕೆಲವು ಫಾರ್ಮ್ ಗಳಲ್ಲಿ ನೊಣಗಳು ವಿಪರೀತವಾಗಿದ್ದು ಹತ್ತಿರದ ಮನೆಗಳಲ್ಲಿ ನೊಣಗಳ ಕಾಟದಿಂದಾಗಿ ತೊಂದರೆಗೊಳಗಾದ ಮನೆಯವರು ದೂರು ನೀಡಿದ ಕಾರಣ  ಪಾಣಾಜೆ ಗ್ರಾಮ ಪಂಚಾಯತ್  ವ್ಯಾಪ್ತಿಯ ಕೋಳಿ ಸಾಕಾಣಿಕೆಗಾರರ ಹಾಗೂ ಕೋಳಿ ಮಾರಾಟದ  ಅಂಗಡಿಯವರ ಮತ್ತು  ದೂರುದಾರರ ಸಭೆ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ರವರ ಅಧ್ಯಕ್ಷತೆಯಲ್ಲಿ ಮೆ 26 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. 
     ಕೋಳಿ ಫಾರ್ಮನ್ನು ಸರಿಯಾದ ರೀತಿಯಲ್ಲಿ  ಸ್ವಚ್ಛಗೊಳಿಸಿ ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ನೊಣಗಳು ಜಾಸ್ತಿಯಾಗುತ್ತದೆ. ನೊಣ, ಸೊಳ್ಳೆ ಜಾಸ್ತಿಯಾಗಿ ರೋಗ ಹರಡದಂತೆ ಗಮನಹರಿಸುವಂತೆ ಹಾಗೂ ಕೋಳಿ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ  ಸಂಬಂಧಿಸಿದ ಎಲ್ಲಾ ಸಾಕಾಣಿಕೆ ಕೇಂದ್ರ ಮತ್ತು ಅಂಗಡಿ ಮಾಲಕರಿಗೆ ತಿಳಿಸಲಾಯಿತು.
    ಕೋಳಿ ವ್ಯಾಪಾರದಲ್ಲಿ  ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೋಳಿ ಫಾರ್ಮನ್ನು ನಡೆಸಿ ಅನುಭವವಿರುವ  ಹಮೀದ್ ಎಣ್ಣೆಗದ್ದೆಯವರಲ್ಲಿ ಸಲಹೆ ಸೂಚನೆಗಳನ್ನು ಪಡೆದುಕೊಂಡು ಸಮಸ್ಯೆ ಇರುವ ಫಾರ್ಮ್ನವರಿಗೆ ಸರಿಯಾದ ಮಾರ್ಗದರ್ಶನ ನೀಡುವಂತೆ ಅವರನ್ನು ಕೇಳಿ ಕೊಳ್ಳಲಾಯಿತು. ಕೋಳಿ ಸಾಕಾಣಿಕೆಗಾರರ ಕೋರಿಕೆ ಮೇರೆಗೆ ಕೋಳಿ ಫಾರ್ಮಲ್ಲಿ  ನೊಣಗಳ ಸಮಸ್ಯೆ ಬರಲು ಕಾರಣವೇನು ಎಂಬುದರ ಬಗ್ಗೆ ಪರಿಶೀಲನೆ ನಡೆಸಿ  ಅದಕ್ಕೆ ಸರಿಯಾದ ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯವರನ್ನು ಕೇಳಿಕೊಳ್ಳುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
     ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್.ಕೆ, ಸದಸ್ಯರಾದ ಸುಭಾಷ್ ರೈ, ನಾರಾಯಣ ನಾಯಕ್, ಜಯಶ್ರೀ. ಡಿ, ಕೃಷ್ಣಪ್ಪ ಪೂಜಾರಿ,  ಮೈಮುನಾತುಲ್ ಮೆಹ್ರಾ, ವಿಮಲಾ, ಸುಲೋಚನ, ಮೋಹನ ನಾಯ್ಕ, ಸಿಬ್ಬಂದಿ ವಿಶ್ವನಾಥ ಮತ್ತು ಕೋಳಿ ಫಾರ್ಮ್ ಮಾಲಕರು, ಅಂಗಡಿ ಮಾಲಕರು ಮುಂತಾದವರು ಉಪಸ್ಥಿತರಿದ್ದರು. ಪಿಡಿಒ ಚಂದ್ರಮತಿ ಸ್ವಾಗತಿಸಿ ವಂದಿಸಿದರು. 
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.