ಎಟಿಎಂನಲ್ಲಿ ಡ್ರಾ ಮಾಡಿದ ಹಣವನ್ನು ವೃದ್ಧನಿಗೆ ಮೋಸ ಮಾಡಿ ಎಗರಿಸಿದ ಯುವಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಟಿಎಂನಲ್ಲಿ ಡ್ರಾ ಮಾಡಿ ಇನ್ನೇನು ಪಡೆದುಕೊಳ್ಳಬೇಕಿದ್ದ ಹಣವನ್ನು ಯುವಕನೋರ್ವ ಎಗರಿಸಿಕೊಂಡು ಹೋಗಿ ವೃದ್ಧರೋರ್ವರಿಗೆ ಮೋಸ ಮಾಡಿ ಪರಾರಿಯಾಗಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

 

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಸವಣೂರು ನಿವಾಸಿ ವೃದ್ಧರೋರ್ವರು ಎರಡು ದಿನಗಳ ಹಿಂದೆ ಅರುಣಾ ಚಿತ್ರ ಮಂದಿರದ ಬಳಿಯಿರುವ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದಿದ್ದರು. ಅವರು ಎಟಿಎಂನಲ್ಲಿ ರೂ.10000ನ್ನು ಡ್ರಾ ಮಾಡಿ ಯಂತ್ರದಲ್ಲಿ ಹಣ ಎಣಿಕೆಯಾಗುತ್ತಿರುವ ಶಬ್ದವನ್ನೂ ಕೇಳಿಸಿಕೊಂಡಿದ್ದರು. ಆದರೆ ಹಣ ಬರಲು ಕೊಂಚ ವಿಳಂಬವಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಯುವಕನೋರ್ವ ‘ನಿಮ್ಮ ಕೆಲಸ ಪೂರ್ಣವಾಗಿದೆ ’ ಎಂದು ಹೇಳಿ, ವೃದ್ಧ ಡ್ರಾ ಮಾಡಿ ಮೆಶಿನ್‌ನಲ್ಲಿ ಬರುತ್ತಿದ್ದ ನಗದನ್ನು ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ, ಎಟಿಎಂನಲ್ಲಿ ತನ್ನ ಹಣ ಬರಲಿಲ್ಲವೆಂದು ತಿಳಿದು ವೃದ್ಧ ತಮ್ಮ ಮನೆಗೆ ವಾಪಸ್ಸಾಗಿದ್ದರು. ಎರಡು ದಿನದ ಬಳಿಕ ಬ್ಯಾಂಕ್‌ಗೆ ಬಂದು ಪಾಸ್‌ಬುಕ್ ಎಂಟ್ರಿ ಮಾಡುವ ಸಂದರ್ಭದಲ್ಲಿ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ.ಈ ಕುರಿತು ಎಟಿಎಂನ ಸಿಸಿ ಕ್ಯಾಮರಾವನ್ನು ಬ್ಯಾಂಕಿನ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ, ಡ್ರಾ ಆಗಿರುವ ಹಣವನ್ನು ಯುವಕನೋರ್ವ ತೆಗೆದುಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ. ಘಟನೆಯ ಕುರಿತು ನಗರ ಠಾಣೆಗೆ ಮೌಖಿಕ ದೂರು ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.