ಕೋವಿಡ್ ಸಂಕಷ್ಟಕ್ಕೆ ಹೃತ್ಪೂರ್ವಕವಾಗಿ ಸ್ಪಂದಿಸಿದ ಅಮೇರಿಕದ ನವೋದಯ ಕನ್ನಡ ಕೂಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಭಾರತದಾದ್ಯಂತ ಹರಡಿರುವ ಕೊರೋನ ಪರಿಸ್ಥಿತಿ ಜನಜೀವನವನ್ನು ಅಸ್ತವ್ಯಸ್ಥ ಮಾಡಿದೆ. ಈ ಸಂದರ್ಭದಲ್ಲಿ ಅಮೆರಿಕಾದ ‘ನವೋದಯ ಕನ್ನಡ ಕೂಟ ಓಫ್ ಫಿಲಡೆಲ್ಫಿಯಾ’ ವು ಸೇವಾ ಇಂಟರ್ನ್ಯಾಷನಲ್ ಹಾಗೂ ಬೆಂಗಳೂರಿನ ಚಿನ್ಮಯ ಆಸ್ಪತ್ರೆಗೆ 5 ಲಕ್ಷ ರು. ನೆರವು ನೀಡಿ ಮಾನವೀಯತೆ ಮೆರೆದಿದೆ. ಕೂಟದ ಅಧ್ಯಕ್ಷರಾದ ಉಷಾ ದೇವಿ ಕುಳೂರ್ ಭಟ್ ಅವರು, ಉದಾರತೆಯಿಂದ ಧನ ಸಹಾಯ ಮಾಡಿದ ಕೂಟದ ಸದಸ್ಯರಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾ ಈ ಹೇಳಿಕೆಯನ್ನು ನೀಡಿರುತ್ತಾರೆ.

“ಕೂಟವು 2020  ಮಾರ್ಚ್ ನಿಂದ ಇಲ್ಲಿವರೆಗೂ ಕನ್ನಡ ನಾಡಿನ ಕೆಲವು ಕಲಾವಿದರನ್ನು ವರ್ಚುವಲ್  ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸಿದ್ದೇ ಅಲ್ಲದೆ, ಸ್ಥಳೀಯವಾಗಿ ಕೋವಿಡ್ ನೆರವಿನ ಕೆಲಸದಲ್ಲಿ ತೊಡಗಿಸಿಕೊಳ್ಳಲು 25 ಸಂಸ್ಥೆಗಳ ಜೊತೆ ಕೈಸೇರಿಸಿ ಭಾರತದಿಂದ ಬಂದು ಅಮೇರಿಕಾದಲ್ಲಿ ನೆಲೆಸಿದಂತಹ ಪ್ರಾಯಸ್ಥ ಕುಟುಂಬಗಳು, ವಿದ್ಯಾರ್ಥಿಗಳು ಹಾಗೂ  ಆಸ್ಪತ್ರೆಗಳಿಗೆ ಬೇಕಾದಂತಹ ಕೋವಿಡ್ ಸಲಕರಣೆಗಳ ಸಹಾಯ ಮಾಡಿದೆ. ಸ್ಥಳೀಯಯವಾಗಿ ವ್ಯಾಕ್ಸಿನೇಷನ್ ದೊರಕಿಸುತ್ತಿವರುವಂಥಹ ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜನ್ಸಿ, ಭಾರತೀಯ ಟೆಂಪಲ್ ಹಾಗೂ ಹೈಸ್ಕೂಲ್ ಗಳಲ್ಲಿ ಕೂಟದ ಬಹಳಷ್ಟು ಸ್ವಯಂ ಸೇವಕರು ಸಹಾಯ ಮಾಡಿರುವುದು ಕೃತಜ್ಞತೆಯ ವಿಷಯ. ನಮ್ಮ ಮಾತೃಭೂಮಿ ಹಾಗೂ  ಕರ್ಮಭೂಮಿ ಎರಡಕ್ಕೂ ನಮ್ಮ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಮುಂಬರುವ ದಿನಗಳಲ್ಲೂ ಅಗತ್ಯವಿದ್ದಲ್ಲಿ ಸಾಧ್ಯವಾದ ಸಹಾಯ ಮಾಡುತ್ತಾ ಬರುವುದೇ ನಮ್ಮ ಗುರಿ”  ಎಂದು ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.