ವಕೀಲರ ಕಚೇರಿ ತೆರೆಯಲು ಅನುಮತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೇಸಿಗೆ ರಜೆ ಬಳಿಕ ಪ್ರಾರಂಭಗೊಂಡಿರುವ ನ್ಯಾಯಾಲಯಗಳ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ವಕೀಲರಿಗೆ ಸಂಚರಿಸಲು ಹಾಗೂ ಕಚೇರಿ ತೆರೆಯಲು ಅವಕಾಶ ನೀಡುವಂತೆ ಕೋರಿದ್ದ ವಕೀಲರ ಸಂಘದ ಮನವಿಗೆ ಸರಕಾರ ಸ್ಪಂದಿಸಿ ಅನುಮತಿ ನೀಡಿದೆ ಎಂದು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ತಿಳಿಸಿದ್ದಾರೆ.

ನ್ಯಾಯಾಲಯಗಳು ಕಾರ್ಯನಿರ್ವಹಿಸುವ ದಿನಗಳೆಂದು ವಕೀಲರು ಕಚೇರಿಯನ್ನು ತೆರೆಯಲು, ಶೇ.೫೦ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಹಾಗೂ ವಕೀಲರು, ಅವರ ಸಹಾಯಕರು, ವಕೀಲರ ಕ್ಲರ್ಕ್‌ಗಳು ಐಡಿ ಕಾರ್ಡ್‌ಗಳನ್ನು ತೋರಿಸಿ ತಮ್ಮ ಕಚೇರಿಗಳಿಗೆ ಹೋಗಿ ಬರಲು ಅನುಮತಿ ನೀಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ನ್ಯಾಯಾಲಯಗಳಿಗೆ ಬೇಸಿಗೆ ರಜೆ ಇದ್ದ ಸಂದರ್ಭ ಸಾಕಷ್ಟು ವಕೀಲರು ತಮ್ಮ ಊರುಗಳಿಗೆ ತೆರಳಿದ್ದಾರೆ. ಮೇ 24ರಿಂದ ಮತ್ತೆ ಕೋರ್ಟ್ ಕಲಾಪಗಳು ಆರಂಭವಾಗಿದ್ದು, ಅವರು ತಮ್ಮ ಕಚೇರಿಗಳಿಗೆ ವಾಪಸ್ಸಾಗಬೇಕಿದೆ. ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಅಂತರ್‌ಜಿಲ್ಲಾ ಪ್ರಯಾಣ ನಿರ್ಬಂಧಿಸಲಾಗಿದೆ. ಹೀಗಾಗಿ ವಕೀಲರ ಸಂಚಾರಕ್ಕೆ ಹಾಗೂ ಕಚೇರಿ ತೆರೆಯಲು ಅನುಕೂಲವಾಗುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬೆಂಗಳೂರು ವಕೀಲರ ಸಂಘ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಸರಕಾರ ವಕೀಲರ ಸಂಚಾರಕ್ಕೆ, ಕಚೇರಿ ತೆರೆಯಲು ಅನುಮತಿಸಿದೆ ಎಂದು ಮನೋಹರ್ ಕೆ.ವಿ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.