ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಕೋವಿಡ್ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ 19 ಕಾರ್ಯಪಡೆ ಸಭೆ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ಮೇ.27 ರಂದು ಶ್ರೀಕೃಷ್ಣ ಭಜನಾ ಮಂದಿರದ ಸಭಾ ಭವನದಲ್ಲಿ ನಡೆಯಿತು. ಕೋವಿಡ್ ೧೯ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರರವರು ಮಾತನಾಡಿ, ಕೌಡಿಚ್ಚಾರು ಸಿ.ಆರ್.ಸಿ ಕಾಲೋನಿಯಲ್ಲಿ 19 ಜನರಿಗೆ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆದುದರಿಂದ ಜನರು ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರ ಬರಬೇಕು, ಜ್ವರ ಬಂದಾಗ ಯಾರು ಕೂಡ ತಾತ್ಸಾರ ಮಾಡದೆ ಪರೀಕ್ಷೆ ಮಾಡಿಕೊಳ್ಳಬೇಕು. ರೇಶನ್ ಸರಿಯಾಗಿ ವಿತರಣೆಯಾಗಬೇಕು, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಮಾತಾಡಿ, ನಮ್ಮಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ, ತಂಬು ಇಲ್ಲದೆ ರೇಷನ್ ಸಿಗುವುದಿಲ್ಲ, ಇದರಿಂದ ಸ್ವಲ್ಪ ಸಮಸ್ಯೆಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ನೋಡೆಲ್ ಅಧಿಕಾರಿ ವಿದ್ಯಾ ರಾಣಿ, ಕಿರಿಯ ಆರೋಗ್ಯ ಸಹಾಯಕಿ ನವ್ಯಾ ಎ,ಪಿ.ಡಿ.ಓ ಪದ್ಮಾ ಕುಮಾರಿ, ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕಾವು,ವಿಜೀತ್ ಕಾವು, ಮೀನಾಕ್ಷಿ ಪಾಪೆಮಜಲು, ನಾರಾಯಣ ನಾಯ್ಕ ಚಾಕೋಟೆ, ಹೇಮಾವತಿ ಚಾಕೊಟೆ, ಅನಿತಾ ಆಚಾರಿ ಮೂಲೆ, ಜಯಂತಿ ಪಟ್ಟು ಮೂಲೆ,ಕೋರೊನ ವಾರಿಯರ್ಸ್ ತಂಡದ ಸದಸ್ಯರಾದ ಸಚಿನ್ ರೈ ಪಾಪೆಮಜಲು, ರಾಜೇಶ್ ಗೋಳ್ತಿಲ, ಸುನೀಲ್ ಎಂಡಸಾಗು, ಪ್ರಮೋದ್ ರೈ ಪನೆಕ್ಕಲ, ಗಣೇಶ್ ಶೇಖಮಲೆ, ನವೀನ್ ಎಂ ಪಟ್ಟಾಜೆ, ಗಂಗಾಧರ ನಾಯ್ಕ ಮಡ್ಯಂಗಳ, ಅಪ್ಪಯ್ಯನಾಯ್ಕ ಬಪ್ಪುಪುಂಡೇಲು, ದಿವ್ಯ ಪ್ರಸಾದ್, ವಿ.ಆರ್.ಡಬ್ಲ್ಯ್ ಮಲ್ಲ ಎಂ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಕಾರ್ಯದರ್ಶಿ ಶಿವರಾಮ್ ಸ್ವಾಗತಿಸಿ, ವಂದಿಸಿದರು.

ಇಂದು ಬೆಳಿಗ್ಗೆ 1೦ ಗಂಟೆಗೆ ಅರಿಯಡ್ಕ ಪಂಚಾಯತ್ ವ್ಯಾಪ್ತಿಯ ೧೮ ರಿಂದ ೪೪ ವರ್ಷ ವಯೋಮಿತಿಯ ವಿಕಲಚೇತನರಿಗೆ ಪುತ್ತೂರು ಪುರಭವನದಲ್ಲಿ ಕೊವೀಡ್ ಲಸಿಕೆ ನೀಡಲಾಗುವುದು.
ಪದ್ಮ ಕುಮಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ.

ಈ ತಿಂಗಳಲ್ಲಿ ಅರಿಯಡ್ಕ ಗ್ರಾಮದಲ್ಲಿ ಒಟ್ಟು 26 ಕೊರೋನ ಆಕ್ಟೀವ್ ಕೇಸು ದಾಖಲಾಗಿದೆ. ಮಾಡ್ನೂರು ಗ್ರಾಮದಲ್ಲಿ ಯಾವುದೇ ಆಕ್ಟೀವ್ ಕೇಸು ದಾಖಲಾಗಿಲ್ಲ- ನವ್ಯಾ ಎ., ಕಿರಿಯ ಆರೋಗ್ಯ ಸಹಾಯಕಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.