ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ 1 ಕೆ.ಜಿ ಅಕ್ಕಿಯನ್ನು ನೀಡದ ಶಕುಂತಳಾ ಶೆಟ್ಟಿಯವರು ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ವಾಸ್ತವ ವಿಚಾರ ಅರಿತು ಮಾತನಾಡಲಿ-ಕೆ.ಜೀವಂಧರ್ ಜೈನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಸರಬರಾಜಿನ ಲೆಕ್ಕದಲ್ಲಿ ವ್ಯತ್ಯಾಸ ಬಂದಿರುವುದನ್ನು ಗಮನಿಸಿದ ಶಾಸಕ ಸಂಜೀವ ಮಠಂದೂರು ಅವರು ನೈಜ ಮತ್ತು ದುರ್ಬಲ ವರ್ಗದವರಿಗೆ ಆಹಾರ ಸಿಗಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ಗೆ ಬೇಟಿ ನೀಡಿ ಪರಿಶೀಲಿಸಿದ್ದಾರೆ ಹೊರತು ಯಾವ ಉದ್ದೇಶವಿರಲಿಲ್ಲ. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ೧ ಕೆ.ಜಿ ಅಕ್ಕಿಯನ್ನು ನೀಡದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಇದೇ ವಿಚಾರಕ್ಕೆ ಆಕ್ಷೇಪಿಸುವುದನ್ನು ನೋಡಿದಾಗ ಇಂದಿರಾ ಕ್ಯಾಂಟೀನ್‌ನ ಗುತ್ತಿಗೆದಾರರು ಶಕುಂತಳಾ ಶೆಟ್ಟಿಯವರ ಆಪ್ತರೇ ಎಂಬ ಗುಮಾನಿ ಮೂಡುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.

ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಇಂದಿರಾ ಕ್ಯಾಂಟೀನ್‌ನ ಮೇಲುಸ್ತುವಾರಿಯನ್ನು ನಗರಸಭೆ ನೋಡಿಕೊಳ್ಳುತ್ತಿದ್ದು, ಲಾಕ್‌ಡೌನ್ ಆರಂಭವಾಗಿದ್ದಲ್ಲಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಆಹಾರ ಪಾರ್ಸೆಲ್ ಕೊಡುವ ಕುರಿತು ಸರಕಾರದ ಸೂಚನೆಯಂತೆ ಕ್ಯಾಂಟೀನ್‌ನಿಂದ ಪಾರ್ಸೆಲ್ ಕೊಡುತ್ತಿದ್ದರೂ ದಿನಕ್ಕೊಂದು ಪಟ್ಟಿಯನ್ನು ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಶಾಸಕರು ಮತ್ತು ನಾವು ಭೇಟಿ ನೀಡಿದ್ದೆವು. ಅಲ್ಲಿ ಕ್ಯಾಂಟೀನ್‌ಗೆ ಬಂದು ಹೋದವರ ಸಂಖ್ಯೆ ಮತ್ತು ಆಹಾರದ ಪಾರ್ಸೆಲ್ ಪಟ್ಟಿಯಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದ ಶಾಸಕರು ಅರ್ಹ ಫಲಾನುಭವಿಗೆ ಆಹಾರ ಸಿಗುತ್ತಿದೆಯೋ ಇಲ್ಲವೋ ಎಂಬ ಕುರಿತು ಪರಿಶೀಲನೆ ಮಾಡುವಂತೆ ತಿಳಿಸಿದ್ದರು. ಇಲ್ಲಿ ೮ ಊಟ ಕೋಂಡು ಹೋಗುವುದು ಮುಖ್ಯವಲ್ಲ. ಆದರೆ ಸುಳ್ಳು ಲೆಕ್ಕಾಚಾರ ಯಾಕೆ ರಿಜಿಸ್ಟ್ರಾರ್ ಬರೆಯಾಬಾರದು ಎಂಬ ಸಂಶಯಕ್ಕೆ ಎಡೆ ಮಾಡಿತ್ತು. ಅದೇ ರೀತಿ ಪರಿಶೀಲಿಸಿದಾಗ ವ್ಯತ್ಯಾಸ ಕಂಡು ಬಂದಿತ್ತು. ಜೊತೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ನಗರಸಭೆಯಿಂದ ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿತ್ತು. ಮೇ ೨೫ರಂದು ೩೦೮ ಆಹಾರದ ಪಾರ್ಸೆಲ್ ಹೋಗಿದ್ದು, ನಗರಭೆಯಿಂದ ಮಾರ್ಷಲ್‌ಗಳನ್ನು ಅಲ್ಲಿಗೆ ಹಾಕಿದ ಬಳಿಕ ಮೇ ೨೬ಕ್ಕೆ ಕೇವಲ ೧೭೬ ಆಹಾರದ ಪಾರ್ಸೆಲ್ ಹೋಗಿರುವುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಒಟ್ಟು ಸರಕಾರದ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು. ಅರ್ಹ ಫಲಾನುಭವಿಗೆ ಆಹಾರ ಸಿಗಬೇಕೆಂಬುದು ನಮ್ಮ ಉದ್ದೇಶ. ಆದರೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ರಾಜಕೀಯಗೊಳಿಸುವುದು ಗಮನಿಸಿದಾಗ ಶಕುಂತಳಾ ಶೆಟ್ಟಿಯವರು ತಮ್ಮ ಅಧಿಕಾರ ಅವಧಿಯಲ್ಲಿ ತಮ್ಮ ಆಪ್ತರೊಬ್ಬರಿಗೆ ಇದರ ಗುತ್ತಿಗೆ ನೀಡಿರುವುದು ಸಾರ್ವಜನಿಕರು ಮಾಡುತ್ತಿರುವ ಆರೋಪಗಳಿಗೆ ಪುಷ್ಠಿ ಸಿಕ್ಕಿದಂತಾಗಿದೆ ಎಂದರು. ಕಳೆದ ಬಾರಿ ಕರೋನಾ ಸಂಕಷ್ಟ ಕಾಲದಲ್ಲಿ ಸಮಾಜದ ವಿವಿಧ ವರ್ಗಗಳ ಅರ್ಹರಿಗೆ ಆಹಾರ ಕಿಟ್ ವಿತರಣೆಯಂತಹ ಮಾನವೀಯ ಸೇವಾ ಕಾರ್ಯವನ್ನು ದಾನಿಗಳ ನೆರವಿನಿಂದ ಶಾಸಕ ಸಂಜೀವ ಮಠಂದೂರು ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ, ಇದೇ ರೀತಿ ಪುತ್ತೂರಿಗೆ ವಿಕಟಪೂರ್ವ ಶಾಸಕಿ ಯಾಗಿರುವ ಶಕುಂತಳಾ ಶೆಟ್ಟಿಯವರು ಪುತ್ತೂರಿನಿಂದ ದೂರವಿರುವ ಕುತಾರಿನಲ್ಲಿ ಕುಳಿತುಕೊಂಡು ಒರ್ವ ಬಡವನಿಗೆ ಒಂದು ಕೆಜಿ ಅಕ್ಕಿಯನ್ನು ಕೂಡ ನೀಡದೇ ಇದ್ದ ವಿಚಾರವನ್ನು ಈ ಸಂದರ್ಭದಲ್ಲಿ ಅವರಿಗೆ ನೆನಪಿಸಬೇಕಾಗುತ್ತದೆ. ಜನಪರ ಕಾಳಜಿಯಿಂದ ಅಭಿವೃದ್ಧಿ ಕೆಲಸಗಳ ಜೊತೆಗೆ, ಈ ಬಾರಿಯ ಕೊರೋನಾ ೨ನೇ ಅಲೆಯ ಸಂದರ್ಭದಲ್ಲಿ ಜನರನ್ನು ಕೊರೋನಾ ಮಹಾಮಾರಿಯಿಂದ ರಕ್ಷಿಸಲು ಕ್ಷೇತ್ರದ ಗ್ರಾಮ ಗ್ರಾಮಗಳಲ್ಲಿ ಕಾರ್ಯಪಡೆಯನ್ನು ರಚಿಸುವ ಮೂಲಕ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಅಲ್ಲದೇ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಆಕ್ಸಿಜನ್ ಬೆಡ್ ಸಮೇತ ಚಿಕಿತ್ಸಾ ವ್ಯವಸ್ಥೆ, ಕೋಟೆಡ್ ಕೇರ್ ಸೆಂಟರ್‌ಗಳ ಮೂಲಕ ಕೊಠನಾ ಪೀಡಿತರಿಗೆ ಆರೈಕೆ, ಕೊರೋನಾ ಪೀಡಿತರಾಗಿ ದಾಖಲಾದವರಿಗೆ ಉತ್ತಮ ಆಹಾರ ಮತ್ತು ಉತ್ತಮ ವಸತಿ ವ್ಯವಸ್ಥೆ ಮಾಡಿರುತ್ತಾರೆ, ಶಾಸಕ ಸಂಜೀವ ಮಠಂದೂರು, ಅವರ ಕಾರ್ಯವನ್ನು ಕೊರೋನಾದಿಂದ ಗುಣಮುಖ ಹೊಂದಿದವರು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಈ ಸಂದರ್ಭದಲ್ಲಿ ಬಿಜೆಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅ‍ಧ್ಯಕ್ಷ ಭಾಮಿ ಅಶೋಕ್‌ ಶೆಣೈ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ ಉಪಸ್ಥಿತರಿದ್ದರು.

2018ರ ಚುನಾವಣೆಯಲ್ಲಿ ಯಾರು ನಾಲಾಯಕ್ ಎಂದು ಮತದಾರರು ತೀರ್ಮಾನಿಸಿದ್ದಾರೆ:
ವಾಸ್ತವ ವಿಚಾರ ಹೀಗಿದ್ದರೂ ಶಾಸಕ ಸಂಜೀವ ಮಠಂದೂರು ಅವರ ಸೇವಾ ಕಾರ್ಯವನ್ನು ಮತ್ತು ಜನಪರ ಕಾಳಜಿಯನ್ನು ಹಾಗು ಜನಪ್ರಿಯತೆಯನ್ನು ಸಹಿಸಲಾಗದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಶಾಸಕ ಸಂಜೀವ ಮಠಂದೂರು ಅವರನ್ನು ನಾಲಾಯಕ್ ಶಾಸಕ ಎಂದು ಹೇಳುತ್ತಿರುವುದು ಖಂಡನೀಯ. 2018ರ ವಿಧಾನಸಭಾ ಚುನಾವಣೆಯಲ್ಲಿ ಯಾರು ನಾಲಾಯಕ್ ಶಾಸಕರು ಎಂದು ಮತದಾರರು ತೀರ್ಮಾನಿಸಿದ್ದಾರೆ. ಶಕುಂತಳಾ ಶೆಟ್ಟಿಯವರು ತಮ್ಮ ಕುತ್ತಾರು ಟೂಲ್‌ಕಿಟ್ ರಾಜಕೀಯವನ್ನು ಮಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದವಾಗಿರುತ್ತದೆ ಎಂದು ಕೆ.ಜೀವಂಧರ್ ಜೈನ್ ಹೇಳಿದರು.

ಇಂದಿರಾ ಕ್ಯಾಂಟೀನ್ ಆಹಾರ ಸರಬರಾಜು ಲೆಕ್ಕದಲ್ಲಿ ವ್ಯತ್ಯಾಸ ಬೆಳಕಿಗೆ:
ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಪಾರ್ಸೆಲ್ ನಿಜವಾದ ಫಲಾನುಭವಿಗೆ ಸಿಗಬೇಕು. ಆದರೆ ಇಲ್ಲಿ ಪಾರ್ಸೆಲ್ ಕೊಂಡು ಹೋದವರ ಮೊಬೈಲ್ ನಂಬರ್ ದಾಖಲಿಸಿದ್ದರೂ ಎಲ್ಲಾ ಮೊಬೈಲ್ ನಂಬರ್ ಸ್ಪಷ್ಟವಿರಲಿಲ್ಲ. ಯಾರೋ ಬೆಂಗಳೂರಿನಲ್ಲಿ ಕೂತು ಗುತ್ತಿಗೆ ಪಡೆದು ಕೊಂಡವ ಇಲ್ಲಿ ಯಾರಿಗೋ ಒಳಗುತ್ತಿಗೆ ಕೊಟ್ಟಿದ್ದು ಅವರು ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ. ಜಿಲ್ಲೆಯಿಂದ ಕ್ಯಾಂಟೀನ್‌ನ ಮೇಲುಸ್ತುವಾರಿಯನ್ನು ನಗರಸಭೆಗೆ ನೀಡಿದೆ. ಹಾಗಾಗಿ ನಗರಸಭೆ ಮಾರ್ಷಲ್‌ಗಳನ್ನು ಬಿಟ್ಟು ಪರಿಶೀಲಿಸಿದಾಗ ಲೆಕ್ಕದಲ್ಲಿ ವ್ಯತ್ಯಾಸ ಬೆಳಕಿಗೆ ಬಂದಿದೆ. ಮೇ.25ರಂದು 308 ಮಂದಿಯ ಲೆಕ್ಕವಿದ್ದು, ಮೇ 26ಕ್ಕೆ ನಗರಸಭೆ ಮಾರ್ಷಲ್‌ಗಳು ಪರಿಶೀಲಿಸಿದಾಗ ಏಕಾಏಕಿ 176ಕ್ಕೆ ಸಂಖ್ಯೆ ಇಳಿದಿದೆ. ಹಾಗಾಗಿ ಈ ಕುರಿತು ತನಿಖೆ ಆಗಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.