ಸಾರ್ವಜನಿಕರ ಸೇವೆಗೆ ತೆರೆದಿದ್ದ ದ್ವಿಚಕ್ರ ವಾಹನ ಶೋರೂಂ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ-ಬಂದ್ ಮಾಡಲು ಅಧಿಕಾರಿಗಳ ಸೂಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಅಗತ್ಯ ಸೇವೆಯ ಸಿಬ್ಬಂದಿಗಳ ದ್ವಿಚಕ್ರ ವಾಹನಗಳ ದುರಸ್ತಿಗಾಗಿ ಸರ್ವೀಸ್ ವಿಭಾಗವನ್ನು ತೆರೆಯಲು ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಅವರು ಪುತ್ತೂರು, ಕಡಬ, ನೆಲ್ಯಾಡಿಯಲ್ಲಿ ಕಾರ್‍ಯಚರಿಸುತ್ತಿರುವ ದ್ವಿಚಕ್ರ ವಾಹನ ಶೋರೂಮ್ ಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಕಡಬ ಶೋರೂಮ್‌ನಲ್ಲಿ ಸರ್ವಿಸ್‌ಗಾಗಿ ತೆರೆದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಗಳು ವ್ಯಕ್ತವಾದ ಹಿನ್ನಲೆಯಲ್ಲಿ ಶೊರೂಮ್ ಬಂದ್ ಮಾಡುವಂತೆ ಕಡಬ ತಹಸೀಲ್ದಾರ್ ಆದೇಶ ನೀಡಿದ್ದು ಅದರಂತೆ ಶೋರೂಮ್‌ನ ಸರ್ವಿಸ್ ವಿಭಾಗವನ್ನು ಬಂದ್ ಮಾಡಲಾದ ಘಟನೆ ಮೇ.27ರಂದು ನಡೆದಿದೆ.

ಈಗಾಗಲೇ ಅಗತ್ಯ ಸೇವೆಗಳನ್ನು ಮಾಡುತ್ತಿರುವ ಇಲಾಖಾ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರ ದ್ವಿಚಕ್ರ ವಾಹನಗಳು ಕೆಟ್ಟು ಹೋಗುತ್ತಿದ್ದು ಕೆಲವರದ್ದು ದಾರಿ ಮಧ್ಯದಲ್ಲಿ ಇನ್ನೂ ಹಲವಾರು ಮಂದಿಯ ದ್ವಿಚಕ್ರ ವಾಹನಗಳು ಕೆಟ್ಟು ಹೋಗಿರುವುದರಿಂದ ಅವರು ಅಗತ್ಯ ವಸ್ತುಗಳಿಗಾಗಿ ಪೇಟೆಗೆ ಬರಲು ತೊಂದರೆ ಅನುಭವಿಸುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸೀಮಿತ ಸಿಬ್ಬಂದಿಗಳನ್ನೊಳಗೊಂಡು ದ್ವಿಚಕ್ರ ವಾಹನದ ಸರ್ವಿಸ್ ಮಾಡಲು ಅವಕಾಶ ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದ್ದು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಕೇವಲ ಒಂದೇ ಶೋರೂಮ್ ಗೆ ಅನುಮತಿ ನೀಡಿರುವುದು ಸರಿಯಾ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಶೋರೂಮ್‌ನ ಸರ್ವಿಸ್ ವಿಭಾಗ ತೆರೆದಿರುವುದರಿಂದ ಸಾರ್ವಜನಿಕರಿಗೆ ಲಾಭವೇ ವಿನಾಃ ನಷ್ಟ ಇಲ್ಲ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.