ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ವತಿಯಿಂದ ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಅಂತ್ಯಕ್ರಿಯೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಕೋವಿಡ್‌ನಿಂದ ಮೃತಪಟ್ಟ ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ಉಡ್ಯೆರೆ ನಿವಾಸಿ ಪದ್ಮಯ ಗೌಡರ ಪತ್ನಿ ಕುಸುಮಾವತಿಯವರ ಅಂತ್ಯಕ್ರಿಯೆಯನ್ನು ಅವರ ಮಕ್ಕಳ ಜೊತೆಗೆ ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ಕಾರ್ಯಕರ್ತರು ನೆರವೇರಿಸಿದರು.

ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ಸದಸ್ಯರಾದ ಕೃಷ್ಣಪ್ಪ ಕಟ್ಟೆಮಜಲು, ಕುಶಾಲಪ್ಪ ನೆಲ್ಯಾಡಿ, ಲೋಕೇಶ್ ಕೊಲ್ಯೊಟ್ಟು ಹಾಗೂ ಅನಿಲ್ ರೈ ಹಾರ್ಪಳ ಅವರು ಪಿ.ಪಿ.ಇ ಕಿಟ್ ಧರಿಸಿ, ಹಿಂದೂ ಧರ್ಮದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಿದರು. ಸಂಘಟನೆಯ ಮುಖಂಡರಾದ ರವಿಪ್ರಸಾದ್ ಶೆಟ್ಟಿ ರಾಮನಗರ, ಪ್ರಹ್ಲಾದ್ ಶೆಟ್ಟಿ, ಸುದೀಪ್ ಶೆಟ್ಟಿ ಪಟ್ಟೆ, ದಿನೇಶ್ ನಾಯ್ಕ್, ನಿತಿನ್ ಮಕ್ಕಿಗದ್ದೆಯವರು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸುವಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.