ಅರ್ಕೆಚ್ಚಾರು – ನೇರ್ಲಾಜೆ ರಸ್ತೆ ತಡೆಗೋಡೆ ಕುಸಿತ ಇಡ್ಕಿದು ಗ್ರಾ.ಪಂ ಅಧ್ಯಕ್ಷರು, ಪಿಡಿಒರಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೆಲ ಸಮಯಗಳ ಹಿಂದೆ ತಡೆಗೋಡೆ ಕುಸಿತಕ್ಕೊಳಗಾಗಿದ್ದ ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕೆಚ್ಚಾರು – ನೇರ್ಲಾಜೆ ರಸ್ತೆಯನ್ನು ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯವರು ಪರಿಶೀಲನೆ ನಡೆಸಿದರು.

ಅರ್ಕೆಚ್ಚಾರು – ನೇರ್ಲಾಜೆ ತೆರಳುವ ರಸ್ತೆ ಇದಾಗಿದ್ದು, ಈ ರಸ್ತೆಯಿಂದಾಗಿ ದಿನಂಪ್ರತಿ ಹಲವಾರು ಜನರು ವಾಹನದ ಮೂಲಕ ಪ್ರಯಾಣಿಸುತ್ತಿದ್ದಾರೆ. ಇದು ಕಂಬಳಬೆಟ್ಟು – ಮಿತ್ತೂರು ಸಂಪರ್ಕ ರಸ್ತೆಯೂ ಆಗಿದೆ. ಈ ಭಾಗದಲ್ಲಿ ಹಲವು ಮನೆಗಳಿದ್ದು, ರಸ್ತೆಯ ತಡೆಗೋಡೆ ಕುಸಿತದಿಂದಾಗಿ ಜನ ಕಷ್ಟ ಅನುಭವಿಸುವಂತಾಗಿದೆ.

ಘಟನೆ ನಡೆದ ಹಲವಾರು ದಿನ ಕಳೆದರೂ ಯಾವುದೇ ಪರ್ಯಾಯ ವ್ಯವಸ್ಥೆ ಆಗದಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಾಗರೀಕರು ಒಟ್ಟಾಗಿ ಗ್ರಾ.ಪಂ.ಗೆ ಮನವಿ ಮಾಡಿದರು. ಕೂಡಲೇ ಸ್ಪಂದಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಸದಸ್ಯರಾದ ತಿಲಕ್‌ರಾಜ್ ಶೆಟ್ಟಿ, ಪದ್ಮನಾಭ ಸಪಲ್ಯ ರವರು ಸ್ಥಳಕ್ಕಾಗಮಿಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ದಿವಾಕರ್ ದಾಸ್ ನೇರ್ಲಾಜೆ, ಗಣೇಶ್ ಆಚಾರ್ಯ, ಮನೋಜ್, ಯತೀಶ್ ಮೊದಲಾದವರು ಈ ಕುರಿತಾಗಿ ಮಾಹಿತಿ ನೀಡಿದರು. ತಡೆಗೋಡೆಯನ್ನು ನಿರ್ಮಿಸಿ ರಸ್ತೆಯನ್ನು ಸರಿಪಡಿಸಿಕೊಡುವಂತೆ ಅಲ್ಲಿ ಸೇರಿದ್ದವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಶೀಘ್ರ ಪರಿಹಾರದ ವ್ಯವಸ್ಥೆ
ಪ್ರಕೃತಿ ವಿಕೋಪದಿಂದಾಗಿ ರಸ್ತೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರುರವರಿಗೆ ಮನವಿಯನ್ನು ಸಲ್ಲಿಸಲಾಗುವುದು. ಅದಷ್ಟು ಶೀಘ್ರದಲ್ಲಿ ಪರಿಹಾರ ನೀಡುವ ವ್ಯವಸ್ಥೆ ಯನ್ನು ಮಾಡಲಾಗುವುದು-ಎಂ.ಸುಧೀರ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಇಡ್ಕಿದು ಗ್ರಾಮ ಪಂಚಾಯತ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.