ಕೋಡಿಂಬಾಡಿ : ಕೃಷ್ಣಗಿರಿ ಕಾಲೋನಿಯಲ್ಲಿ ನಿರ್ಮಾಣಗೊಂಡ ಅಸಮರ್ಪಕ ಚರಂಡಿ ಸರಿಪಡಿಸುವಂತೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿಯಲ್ಲಿ ಅವೈಜ್ಞಾನಿಕ ಚರಂಡಿ ರಿಪೇರಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಹೊಸ ಚರಂಡಿ ನಿರ್ಮಾಣ ಮಾಡಬೇಕು ಎಂದು ಕೃಷ್ಣಗಿರಿ ಕಾಲೋನಿ ನಿವಾಸಿಗಳು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯರಿಗೆ ಮನವಿ ನೀಡಿದ್ದಾರೆ.

ಕೃಷ್ಣಗಿರಿ ಕಾಲೋನಿಯಲ್ಲಿ ಅಸಮರ್ಪಕವಾದ ಚರಂಡಿ ರಿಪೇರಿ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಇಂಗುಗುಂಡಿ ಮಾಡಿದಂತೆ ಆಗಿದ್ದು ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ ಮುಂತಾದ ಖಾಯಿಲೆಗಳು ಬರುಉದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಅಲ್ಲದೆ ರಸ್ತೆಯ ಬದಿಯಲ್ಲಿ ನಿರ್ಮಾಣಗೊಂಡ ಹೊಸ ತೆಗೋಡೆ ಕುಸಿತಗೊಂಡಿದೆ. ಕೃಷ್ಣಗಿರಿಯಿಂದ ಕೋಡಿ ಮೋನಡ್ಕಕ್ಕೆ ಸಂಪರ್ಕ ದಾರಿಯಲ್ಲಿ ಚರಂಡಿ ವ್ಯವಸ್ಥೆಯೂ ಅಸಮರ್ಪಕವಾಗಿದೆ. ಖಾಸಗಿ ವ್ಯಕ್ತಿಯೋರ್ವರು ಮಳೆಗಾಲದಲ್ಲಿ ಹರಿದು ಹೋಗುವ ನೀರಿನ ಚರಂಡಿಯನ್ನು ಅತಿಕ್ರಮಿಸಿ ತೆಂಗಿನ ಸಸಿಗಳನ್ನು ನೆಟ್ಟು ಬೇಲಿ ನಿರ್ಮಿಸಿದ್ದಾರೆ. ಆದುದರಿಂದ ಈ ಕೂಡಲೇ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಕಾಲೋನಿ ನಿವಾಸಿಗಳಾದ ಶಶಿದರ, ಶಶಿಕಲಾ, ಜಯಂತ, ಸಂತೋಷ್, ನಿಖಿಲ್ ಕುಮಾರ್, ಸುರೇಶ್ ಕೃಷ್ಣಗಿರಿ, ಆನಂದ ಕೃಷ್ಣಗಿರಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.