ಪುತ್ತೂರು ರೇಂಜ್ ಮಟ್ಟದ ಮದ್ರಸ ಅಧ್ಯಾಪಕ-ಆಡಳಿತ ಸಮಿತಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮದ್ರಸ ಆನ್ಲೈನ್ ತರಗತಿ ಆರಂಭಿಸಲು ತೀರ್ಮಾನ

ಪುತ್ತೂರು : ಸಮಸ್ತದ ಅಧೀನದ ಪುತ್ತೂರು ರೇಂಜ್ ವ್ಯಾಪ್ತಿಯ ಮದ್ರಸಗಳ ಅಧ್ಯಾಪಕರು ಮತ್ತು ಆಡಳಿತ ಸಮಿತಿಯ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಮತ್ತು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಜಂಟಿ ಸಭೆಯು ಗೂಗಲ್ ಮೀಟ್ ಮೂಲಕ ನಡೆಸಲಾಯಿತು. ಕೋವಿಡ್-೧೯ ಕಾರಣವಾಗಿ ಸದ್ಯ ಮದ್ರಸ ತೆರೆಯಲು ಅಸಾಧ್ಯವಾಗಿರುವುದರಿಂದ ಆಯಾ ಮದ್ರಸಗಳ ಅಧ್ಯಾಪಕರ ಮೂಲಕ ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಆನ್ಲೈನ್ ತರಗತಿಯನ್ನು ಮುಂದಿನ ತಿಂಗಳಿನಿಂದ ಆರಂಭಿಸಲಿದ್ದು, ಆಯಾ ಮದ್ರಸದ ಅಧ್ಯಾಪಕರು ಮಕ್ಕಳಿಗೆ ತರಗತಿಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳುವುದು, ಆನ್ಲೈನ್ ಮೂಲಕವೇ ಹೋಂವರ್ಕ್‌ಗಳನ್ನು ನೋಡುವುದು ಹಾಗೂ ಆಯಾ ಮದ್ರಸ ಆಡಳಿತ ಸಮಿತಿಗಳು ಮತ್ತು ಪೋಷಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಸಮಸ್ತದ ನಿರ್ದೇಶನದಂತೆ ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ಆನ್ಲೈನ್ ತರಗತಿಗೆ ನೇತೃತ್ವ ನೀಡುವ ಎಲ್ಲಾ ಅಧ್ಯಾಪಕರಿಗೆ ಪೂರ್ಣವಾಗಿ ಸಂಬಳವನ್ನು ಆಡಳಿತ ಸಮಿತಿಗಳು ನೀಡಬೇಕೆಂದು ನಿರ್ಧರಿಸಲಾಯಿತು.

‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ ಆದ್ಯಕ್ಷತೆ ವಹಿಸಿದ್ದರು. ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಆಸಿಫ್ ಅಝ್ಹರಿ ಕಾರ್ಯಕ್ರಮ ಉದ್ಗಾಟಿಸಿದರು. ರೇಂಜ್ ಮ್ಯಾನೆಜ್ ಮೆಂಟ್ ಅಧ್ಯಕ್ಷರೂ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರೂ ಆದ ರಫೀಕ್ ಹಾಜಿ ನೇರಳಕಟ್ಟೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯಭಾಷಣ ನಡೆಸಿದ ಮುಫತ್ತಿಷ್ ಅಬ್ದುಲ್ ಹಮೀದ್ ದಾರಿಮಿ ಆನ್ಲೈನ್ ತರಗತಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು.

ಕಾರ್ಯದರ್ಶಿ ಹಮೀದ್ ಕಂದಕ್ ಮಿತ್ತೂರ್, ಕೋಶಾಧಿಕಾರಿ ಶರೀಫ್ ಸಾಲ್ಮರ, ರೇಂಜ್ ಪರೀಕ್ಷಾ ಬೋರ್ಡ್ ಚೆಯರ್ ಮೆನ್ ಶಾಫಿ ಮುಸ್ಲಿಯಾರ್, ಐಟಿ ಕೋಡಿನೇಟರ್ ಮುಸ್ತಫಲ್ ಫೈಝಿ, ಅಬ್ದುಲ್ ಕರೀಂ ದಾರಿಮಿ ಬೊಳ್ವಾರ್, ಸುಲೈಮಾನ್ ದಾರಿಮಿ ಮಂಜ, ಅಬ್ದುಲ್ ಮಜೀದ್ ದಾರಿಮಿ ಮಿತ್ತೂರು, ಅಬ್ದುಲ್ ಜಲೀಲ್ ದಾರಿಮಿ ಕೋಡಿಂಬಾಡಿ, ಅಬ್ದುರ್ರಝಾಕ್ ಮುಸ್ಲಿಯಾರ್ ಸಾಲ್ಮರ, ಫಯಾಝ್ ಅಝ್ಹರಿ ಬಪ್ಪಳಿಗೆ, ಅಬ್ದುಲ್ ಸತ್ತಾರ್ ಮುಸ್ಲಿಯಾರ್ ಮಂಜ, ಸ್ವಾಲಿಹ್ ಕೌಸರಿ ವಲತ್ತಡ್ಕ, ಮ್ಯಾನೇಜ್ ಮೆಂಟ್ ಪ್ರತಿನಿಧಿಗಳಾದ ಎಲ್.ಟಿ.ಅಬ್ದುರ್ರಝಾಕ್ ಹಾಜಿ ಪುತ್ತೂರು, ಆರ್.ಪಿ.ಅಬ್ದುರ್ರಝಾಕ್ ಪಡೀಲ್, ಶೇಕ್ ಝೈನುದ್ದೀನ್, ರಿಯಾಝ್ ವಳತ್ತಡ್ಕ, ಅಬೂಬಕ್ಕರ್ ಬೊಳ್ವಾರ್, ಇಸ್ಮಾಯಿಲ್ ಬೀಟಿಗೆರವರು ಮಾತನಾಡಿದರು. ಜಂಇಯ್ಯತ್ತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್ ಮೆಂಟ್ ಪ್ರತಿನಿಧಿಗಳು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ರೇಂಜ್ ಕಾರ್ಯದರ್ಶಿ ಹನೀಫ್ ದಾರಿಮಿ ಪಡೀಲ್ ಸ್ವಾಗತಿಸಿದರು. ರೇಂಜ್ ರಿಲೀಫ್ ಸೆಲ್ ಚೆಯರ್ ಮೇನ್ ಕೆ.ಎಂ.ಎ.ಕೊಡುಂಗಾಯಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.