ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಮುಂದುವರಿದ ಆರೋಪ ಪ್ರತ್ಯಾರೋಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಳೆಗಾದಲ್ಲಿ ಕಪ್ಪೆ ವಟಾವಟಾ ಮಾಡಿದಂತೆ ಕಾಂಗ್ರೆಸ್‌ನ ಟೂಲ್ ಕಿಟ್ ಪ್ರಯೋಗ ನಡೆಯದು- ಆರ್.ಸಿ.ನಾರಾಯಣ್

ಪುತ್ತೂರು: ಮಳೆಗಾದಲ್ಲಿ ಕಪ್ಪೆ ವಟಾವಟಾ ಮಾಡಿದಂತೆ ಕಾಂಗ್ರೆಸ್‌ನ ಟೂಲ್ ಕಿಟ್ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಚುನಾವಣೆಯಲ್ಲಿ ಜನರು ಸಂಜೀವ ಮಠಂದೂರು ಅವರನ್ನು ಶಾಸಕರನ್ನಾಗಿ ಮಾಡಿರುವುದನ್ನು ನೋಡಿ ಯಾರು ನಾಲಾಯಕ್, ಯಾರು ಲಾಯಕ್ ಎಂದು ತಿಳಿದುಕೊಂಡು ಮಾತನಾಡುವಂತೆ ದ.ಕಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ್ ಅವರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಸವಾಲು ಹಾಕಿದ್ದಾರೆ.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಅನ್ಯ ಕಾರ್ಯದ ನಿಮಿತ್ತ ಶಾಸಕರು ಇಂದಿರಾ ಕ್ಯಾಂಟೀನ್ ಭೇಟಿ ನೀಡಿದ ವೇಳೆ ಅಲ್ಲಿ ಒಂದಷ್ಟು ದಾಖಲೆ ಪರಿಶೀಲಿಸಿದಾಗ ಲೋಪ ಆಗಿದ್ದರೆ ಅದನ್ನು ಸರಿಪಡಿಸಬೇಕೆಂದು ಹೇಳಿದ್ದಾರೆ ಹೊರತು ಯಾವುದೇ ಬಡವರಿಗೆ ಅಲ್ಲಿರುವ ವ್ಯವಸ್ಥೆಗಳಿಂದ ತೊಂದರೆ ಆಗಬೇಕೆಂದು ಹೇಳಿಲ್ಲ. ಲೋಪವನ್ನು ಸರಿಪಡಿಸುವ ಸೂಚನೆಯನ್ನು ಶಾಸಕರು ನೀಡಿರುವುದನ್ನು ವೈಭವಿಕರಿಸುವ ಕೆಲಸವನ್ನು ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿ ಅವರು ಮಾಡುವ ಮೂಲಕ ಕೀಳು ಮಟ್ಟದ ಹೇಳಿಕೆಯನ್ನು ನೀಡಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಅವರು ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ನಾಲಾಯಕ್ ಎಂದು ಹೇಳಿರುವುದು ಖಂಡನೀಯ. ಕಳೆದ ಮೂರು ವರ್ಷಗಳ ಹಿಂದೆ ಚುನಾವಣೆ ನಡೆದಾಗ ಜನರು ಶಕುಂತಳಾ ಶೆಟ್ಟಿಯವರನ್ನು ತಿರಸ್ಕಾರ ಮಾಡಿ ಸಂಜೀವ ಮಠಂದೂರು ಅವರನ್ನು ಶಾಸಕರನ್ನಾಗಿ ಮಾಡಿದಾಗ ಯಾರು ನಾಲಾಯಕ್ ಯಾರು ಲಾಯಕ್ ಎಂದು ತಿಳಿದು ಕೊಳ್ಳಬೇಕಾಗಿತ್ತು. ಪುತ್ತೂರಿನ ಪ್ರಜ್ಞಾವಂತ ಮತದಾದರು ನಿಶ್ಚಿತವಾಗಿ ಬಿಜೆಪಿ ಶಾಸಕರ ಹಿಂದೆ ನಿಂತಿರುವುದಲ್ಲದೆ ಆಗಿರುವ ಕೆಲಸವನ್ನು ಗಟ್ಟಿತನ ಮಾಡುವಲ್ಲಿ ಬಿಜೆಪಿ ಕಾರ್ಯಕರ್ತರ ಆಶಯಗಳಿಗೆ ಸ್ಪಂಧಿಸುವ ಕೆಲಸವನ್ನು ಪುತ್ತೂರಿನ ಜನತೆ ಮಾಡಿದೆ. ಆದರೆ ಕಾಂಗ್ರೆಸ್‌ನಲ್ಲಿ ಟೂಲ್ ಕಿಟ್ ಸಂಸ್ಕೃತಿ ಬೆಳೆಯುತ್ತಿದೆ. ಯಾವುದೋ ಸಣ್ಣ ಆರೋಪವನ್ನು ದೊಡ್ಡ ಮಾಡುವ ಮೂಲಕ ರಾಜ್ಯ, ರಾಷ್ಟ್ರದಲ್ಲಿ ಟೂಲ್ ಕಿಟ್ ಪ್ರಯೋಗ ಮಾಡಲಾಗುತ್ತಿದೆ. ಪುತ್ತೂರಿನಲ್ಲಿ ಅವರಿಗೆ ಸಣ್ಣ ಟೂಲ್ ಕಿಟ್ ಸಿಕ್ಕಿದೆ. ಇಲ್ಲಿ ಲೋಪ ಇಲ್ಲದಿದ್ದರೂ ಅದನ್ನು ಲೋಪವೆಂದು ಬಿಂಬಿಸುವ ಕೆಲಸ ಆಗುತ್ತಿದೆ. ಆದರೆ ಇದರಿಂದ ಬಿಜೆಪಿ ಜನಪ್ರಿಯತೆಯನ್ನು ಕುಗ್ಗಿಸಲು ಅವರಿಂದ ಸಾಧ್ಯವಿಲ್ಲ ಎಂದು ಹೇಳಿದ ಆರ್.ಸಿ ನಾರಾಯಣ್ ಅವರು ಪುತ್ತೂರಿನಲ್ಲಿ ಯಾವ ಟೂಲ್ ಕಿಟ್ ಪ್ರಯೋಗ ನಡೆಯಲು ಬಿಡುವುದಿಲ್ಲ, ನಿಮ್ಮ ಟೂಲ್ ಕಿಟ್ ಸ್ಪೇನರ್ ಅನ್ನು ನಿಮ್ಮ ಚೀಲದಲ್ಲಿ ತುಂಬಿಸಿಕೊಂಡು ಹೋಗಬಹುದು ಎಂದು ಎಚ್ಚರಿಕೆ ನೀಡಿದರು.

ಶಕುಂತಳಾ ಶೆಟ್ಟಿಯವರ ಕೀಳು ಮಟ್ಟದ ರಾಜಕೀಯ:
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯ 7 ಶಾಸಕರು, ಸಂಸದರು ಸೇರಿಕೊಂಡು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ ಕಾರಣ ಜಿಲ್ಲೆಯಲ್ಲಿ ಶೇ.80ಕ್ಕೂ ಅಧಿಕ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಬಿಜೆಪಿ ಆಡಳಿತ ಇದ್ದಾಗಲೂ ಇಲ್ಲದಿದ್ದಾಗಲೂ ಜನರೊಂದಿಗೆ ಇದೆ. ಜನರ ನೋವು, ಕಷ್ಟಗಳಿಗೆ ಸ್ಪಂಧಿಸುವ ಕೆಲಸ ಮಾಡಿದೆ. ಶಾಸಕರ ವಾರ್‌ರೂಮ್ ಮೂಲಕ ಸಾಕಷ್ಟು ಸ್ಪಂದನೆಗಳನ್ನು ಮಾಡಲಾಗಿದೆ. ಪುತ್ತೂರು ಶಾಸಕರ ಕ್ಷೇತ್ರದಲ್ಲಿ ಗ್ರಾ.ಪಂ ಚುನಾವಣೆಯಲ್ಲಿ 25 ಪಂಚಾಯತ್ ಸೀಟ್ ಬಿಜೆಪಿ ಬೆಂಬಲಿತರಿಗೆ ಬರುವ ಮೂಲಕ ಜನರು ಗ್ರಾಮೀಣ ಭಾಗದಲ್ಲೂ ಕಾಂಗ್ರೆಸ್ ಅನ್ನು ನಾಲಯಕ್ ಎಂದು ತೋರಿಸಿಕೊಟ್ಟಿದ್ದಾರೆ. ಗ್ರಾಮೀಣ ಮಟ್ಟದಲ್ಲೂ ಗ್ರಾ.ಪಂ ಚುನಾವಣೆಯಲ್ಲಿ 25 ಪಂಚಾಯತ್ ಬಿಜೆಪಿ ಬೆಂಬಲತರಿಗೆ ಬರುವ ಮೂಲಕ ಜನರು ಗ್ರಾಮೀಣ ಭಾಗದಲ್ಲೂ ಕಾಂಗ್ರೆಸ್‌ನ್ನು ನಾಲಯಾಕ್ ಎಂದು ತೋರಿಸಿಕೊಟ್ಟಿದೆ.ನಗರಸಭಾ ವ್ಯಾಪ್ತಿಯಲ್ಲಿ ಹಿಂದೆ ಮಾಜಿ ಶಾಸಕರು ಸಂಪೂರ್ಣ ರಾಜಕಾರಣ ಮಾಡಿದರು. ಸಂಜೀವ ಮಠಂದೂರು ಬಂದ ಬಳಿಕ ಸುಮಾರು 7 ಕೋಟಿ ಅನುದಾನವನ್ನು ಮತ್ತು ವಿಶೇಷ ಪ್ಯಾಕೇಜ್ ಅನ್ನು ಎಲ್ಲಾ ವಾರ್ಡ್‌ಗಳಿಗೂ, ಗ್ರಾಮೀಣ ಭಾಗದಲ್ಲೂ ಹಂಚಿ ಅಭಿವೃದ್ಧಿಯ ಹರಿಕಾರರಾಗಿ ಕೆಲಸ ಮಾಡಿದ್ದಾರೆ. ಇದಾವುದನ್ನೂ ಮಾಡದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಕೀಳು ರಾಜಕೀಯ ಮಾಡುತ್ತಿದ್ದಾರೆ. ಇವರ ರಾಜಕೀಯ ಗ್ರಹಣ ಬಂದಂತೆ, ನಮ್ಮ ಕಾರ್ಯಕರ್ತರು ಸೂರ್ಯ ಚಂದ್ರ ಇರುವ ತನಕ ಜನರ ಸೇವೆ ಮಾಡುತ್ತಾರೆ. ಆದರೆ ಕಾಂಗ್ರೆಸ್‌ನವರು ಗ್ರಹಣ ಬಂದಾಗ, ಚುನಾವಣೆ ಬಂದಾಗ, ಕ್ಷುಲ್ಲಕ ಕಾರಣಕ್ಕೆ ಮಾತ್ರ ಪತ್ಯಕ್ಷ ಆಗುವವರು. ಆದರೆ ಆ ರೀತಿಯ ರಾಜಕಾರಣ ಬಿಜೆಪಿ ಮಾಡಿಲ್ಲ. ರಾಜಧರ್ಮ ಗೌರವ ಇಟ್ಟು ಕೊಂಡು ಬಿಜೆಪಿ ರಾಜಕಾರಣ ಮಾಡುತ್ತದೆ ಎಂದು ಆರ್.ಸಿ.ನಾರಾಯಣ್ ಆರೋಪಿಸಿದರು.

ಕಾಂಗ್ರೆಸ್‌ನಲ್ಲಿ 6 ಬಣ ಮಾಡಿದ ಕೀರ್ತಿ ಶಕುಂತಳಾ ಶೆಟ್ಟಿಯವರದ್ದು:
ಶಕುಂತಳಾ ಶೆಟ್ಟಿಯವರು ಬಿಜೆಪಿ ಶಾಸಕರಾಗಿದ್ದ ಸಮಯ ಒಂದಷ್ಟು ಬಣರಾಜಕಾರಣ ಮಾಡಲು ಹೊರಟಾಗ ಅದು ಯಶಸ್ವಿಯಾಗಿಲ್ಲ ಎಂದು ಬಿಜೆಪಿಯಿಂದ ಹೊರಟು ಸ್ವಾಭಿಮಾನಿ ಮಾಡಿ ಹಲವರನ್ನು ಕರೆದು ಕೊಂಡರು. ಬಳಿಕ ಅದೆಲ್ಲವನ್ನು ಬಿಟ್ಟು ಕಾಂಗ್ರೆಸ್‌ಗೆ ಹೋಗಿ ಅಲ್ಲಿದ್ದ ಎರಡು ಮೂರು ಬಣಗಳನ್ನು 6ಕ್ಕೆ ಏರಿಸಿದಕೀರ್ತಿ ಇದ್ದರೆ ಅದು ಶಕುಂತಳಾ ಶೆಟ್ಟಯವರಿಗೆ. ಇದರ ಜೊತೆ ಆ ಬಣದಲ್ಲೂ ಬಣ ಬಣದ ರಾಜಕೀಯ ಮಾಡುವವರಿದ್ದರೆ ಅದು ಶಕುಂತಳಾ ಶೆಟ್ಟಿಯವರು ಮಾತ್ರ. ಇದನ್ನು ಅರಿತ ಕಾಂಗ್ರೆಸ್ ನಾಯಕರು ಅವರನ್ನು ನಮಗೆಯಾಕೆ ಕಳುಹಿಸಿಕೊಟ್ಟಿದ್ದೀರಿ ಎಂದು ನಮ್ಮಲ್ಲಿ ಕೇಳುತ್ತಿದ್ದಾರೆ. ಇದೆಲ್ಲ ಅವರ ಪ್ರಾಯದ ದೋಷ ಎಂದು ನಾವು ಅರಿತು ಕೊಂಡಿದ್ದೇವೆ.

ತನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸದೆ ಜನರಿಗೆ ಅನ್ಯಾಯ ಎಸಗಿರುವ ಶಕುಂತಳಾ ಶೆಟ್ಟಿ ಅವರು ಇದೀಗ ಅವರಿಗೆ ಮತ ಹಾಕಿರುವ ಮತದಾರರ ಋಣವನ್ನೂ ತೀರಿಸಿಲ್ಲ. ಹೆಲ್ತ್ ಎಮರ್ಜಿನ್ಸಿ ಸಂದರ್ಭದಲ್ಲಿ ಎಲ್ಲರೂ ಕೂಡಾ ಕೂಡಿ ಕೆಲಸ ಮಾಡಬೇಕು. ಕೊರೊನಾ ಸಂಕಷ್ಟದಲ್ಲಿ ಮತದಾರರಿಗೆ ಸಹಾಯ ಮಾಡಿಲ್ಲ. ಕಳೆದ 3 ವರ್ಷಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದೆ ಮಂಗಳೂರಿನ ಕುತ್ತಾರಿನಲ್ಲಿರುವ ಮನೆಯಲ್ಲಿ ಕುಳಿತುಕೊಂಡು ಇದೀಗ ಇಲ್ಲ ಸಲ್ಲದ ಕಾರಣಗಳನ್ನು ಮುಂದಿಟ್ಟು ವಟಗುಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ಪಲ್ಪವಾದರೂ ಜನರ ಬಗ್ಗೆ ಕಾಳಜಿಯಿದ್ದಲ್ಲಿ ಜವಾಬ್ದಾರಿಯುತ ಪ್ರತಿಪಕ್ಷದವರಾಗಿ ಕೆಲಸ ಮಾಡಲಿ ಎಂದು ಆರ್.ಸಿ.ನಾರಾಯಣ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ಹಿಂದುಳಿದ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಹೆಚ್.ಉದಯ, ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೆಂದ್ರ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.