ಕೋವಿಡ್ ಸೆಂಟರ್‌ಗೆ ಆಹಾರ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ: ಮಹಮ್ಮದ್ ಆಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಬಿಜೆಪಿಯಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಡೆಯುತ್ತಿದೆ
  • ಶಕುಂತಳಾ ಶೆಟ್ಟಿಯವರ ತೇಜೋವಧೆ ಮಾಡುವುದನ್ನು ಕಾಂಗ್ರೆಸ್ ಖಂಡಿಸುತ್ತದೆ

ಪುತ್ತೂರು:ಕೋವಿಡ್ ಸೆಂಟರ್‍ನಲ್ಲಿ ಕೋವಿಡ್ ರೋಗಿಗಳಿಗೆ ನೀಡುವ ಆಹಾರ ಸರಬರಾಜಿನ ವಿಚಾರದಲ್ಲಿ ದೊಡ್ಡ ಮಟ್ಟಿನ ಅವ್ಯವಹಾರ ನಡೆದಿದೆ.ಪುತ್ತೂರಿನಲ್ಲಿ ಎರಡು ಕೋವಿಡ್ ಸೆಂಟರ್‌ಗಳಿದ್ದು ಅಲ್ಲಿನ ಕೋವಿಡ್ ಸೋಂಕಿತರಿಗೆ ಸರ್ಕಾರದ ವತಿಯಿಂದ ದಿನಕ್ಕೆ ೨೨೫ ರೂ.ಗಳ ಪೌಷ್ಠಿಕಾಂಶವುಳ್ಳ ಆಹಾರ ನೀಡುವ ಆದೇಶ ಮಾಡಲಾಗಿದೆ.ಆದರೆ ಇಲ್ಲಿ ಯಾವುದೇ ಟೆಂಡರ್ ಕರೆಯದೆ,ಪತ್ರಿಕಾ ಪ್ರಕಟನೆ ನೀಡದೆ ನೇರವಾಗಿ ಬಿಜೆಪಿಯ ನಗರಸಭಾ ಸದಸ್ಯೆ ದೀಕ್ಷಾ ಪೈಯವರ ಮಾಲಕತ್ವದ ಪೈ ಕ್ಯಾಟರರ್‍ಸ್‌ಗೆ ಆಹಾರ ಸರಬರಾಜಿನ ಜವಬ್ದಾರಿ ನೀಡಲಾಗಿದೆ,ಆದರೆ ಇವರು ರೋಗಿಗಳಿಗೆ ೨೨೫ ರೂಗಳ ಗುಣಮಟ್ಟದ ಆಹಾರ ನೀಡದೆ ನೂರು ರೂಪಾಯಿಯಷ್ಟರ ಆಹಾರ ನೀಡಿ ದಿನವೊಂದಕ್ಕೆ ಒಬ್ಬ ರೋಗಿಯಿಂದ ಉಳಿದ ನೂರಿಪ್ಪತೈದು ರೂಪಾಯಿಗಳನ್ನು ಅವ್ಯವಹಾರ ಮಾಡುವ ವಿಚಾರಗಳು ನಡೆಯುತ್ತಿದೆ.ಇದನ್ನು ನೇರವಾಗಿ ಬಿಜೆಪಿ ಮಾಡುತ್ತಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಗಂಭೀರ ಆರೋಪ ಮಾಡಿದ್ದಾರೆ.

ಅವರು ಮೇ.೨೮ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.’ಒಂದೆಡೆ ಇಂದಿರಾ ಕ್ಯಾಂಟೀನ್ ಎಂಟು ಊಟದ ಬಗ್ಗೆ ಗದ್ದಲ ಎಬ್ಬಿಸುತ್ತಿರುವ ಬಿಜೆಪಿ ಯವರು ಇನ್ನೊಂದೆಡೆ ಯಾವುದೇ ನಿಯಮಗಳನ್ನು ಪಾಲಿಸದೇ ತನ್ನದೇ ಪಕ್ಷದ ನಗರಸಭಾ ಸದಸ್ಯೆಯ ಪೈ ಕ್ಯಾಟರರ್‍ಸ್‌ಗೆ ಆಹಾರ ಸರಬರಾಜಿನ ವ್ಯವಸ್ಥೆ ನೀಡಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ನಾವು ನೇರ ಆರೋಪ ಮಾಡುತ್ತಿದ್ದೇವೆ.ಈ ಕುರಿತು ನಿಜಾಂಶ ಬಯಲಾಗಬೇಕು ಎಂದು ಆಗ್ರಹಿಸುತ್ತೇವೆ.ಜೊತೆಗೆ ಪುತ್ತೂರಿನಲ್ಲಿ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಬಗ್ಗೆ ಬಿಜೆಪಿಯವರು ಬಹಳಷ್ಟು ಗದ್ದಲ ಎಬ್ಬಿಸಿ ಕೇವಲ ಎಂಟು ಊಟದ ವಿಚಾರದಲ್ಲಿ ಮಾತನಾಡುತ್ತಿದ್ದಾರೆ. ಬಿಜೆಪಿಗರಿಗೆ ಇಂದಿರಾ ಕ್ಯಾಂಟೀನ್ ಅಂದರೆ ಮೊದಲೇ ಅಲರ್ಜಿ,ಆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯವರು ಅಲ, ಹೀಗಾಗಿ ತುಂಡು ಆರೋಪ ಮಾಡಿ ಇಂದಿರಾ ಕ್ಯಾಂಟಿನ್ ಮುಚ್ಚುವ ಹುನ್ನಾರ ಅವರಿಂದ ನಡೆಯುತ್ತಿದೆ’ಎಂದು ಅವರು ಹೇಳಿದರು. ಶಕುಂತಳಾ ಶೆಟ್ಟಿಯ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಇಂದಿರಾ ಕ್ಯಾಂಟಿನ್ ಪರಿಶೀಲನೆ ಆರೋಪ ಪ್ರತ್ಯಾರೋಪದ ಕುರಿತು ಮಹಮ್ಮದ್ ಆಲಿ ಮಾತನಾಡಿ.ಶಕುಂತಳಾ ಶೆಟ್ಟಿಯವರು ಬಡವರ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಅವರು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ಪ್ರಚಾರ ಮಾಡದೆ ಕೆಲಸ ಮಾಡಿದರೆ.ಬಿಜೆಪಿ ಕೆಲಸ ಮಾಡದೆ ಪ್ರಚಾರ ಪಡೆಯುತ್ತಿದೆ.ಬಡವರಿಗೆ ಕೊಡುವ ಆಹಾರದಲ್ಲೂ ಹುಳುಕು ಹುಡುಕುವ ಹುನ್ನಾರ ನಡೆಯುತ್ತಿದೆ.ಜೊತೆಗೆ ಕುತ್ತಾರು ಟೂಲ್ ಕಿಟ್ ರಾಜಕಾರಣ ಎಂಬಿತ್ಯಾದಿಯಾಗಿ ಹೇಳಿ ಶಾಸಕರ ನಡೆಯನ್ನು ಪ್ರಶ್ನಿಸಿದಕ್ಕಾಗಿ ಸಾಮಾಜಿಕ ಜಾಲತಾಣದ ಮೂಲಕ ಪತ್ರಿಕಾಗೋಷ್ಠಿಗಳ ಮೂಲಕ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ತೇಜೋವಧೆ ಮಾಡುವ ಪ್ರಯತ್ನ ಬಿಜೆಪಿಯವರು ಮಾಡುತ್ತಿದ್ದಾರೆ.ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಗರಸಭೆ ಅಧ್ಯಕ್ಷರು ಮಾಜಿ ಶಾಸಕಿ ಬಡವರಿಗೆ ಏನು ಸಹಾಯ ಮಾಡಲಿಲ್ಲ ಎನ್ನುತ್ತಾರೆ ಆದರೆ ಅಧ್ಯಕ್ಷರ ವಾರ್ಡ್‌ನಲ್ಲೇ ಆಶಾ ಕಾರ್ಯಕರ್ತೆಯೋರ್ವರಿಗೆ ಕೊರೋನ ಸೋಂಕು ಬಂದಾಗ ಯಾವುದೇ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಅವರ ಮನೆಗೆ ತೆರಳಿಲ್ಲ ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಸಹಾಯ ಮಾಡಿದ್ದಾರೆ.ಅಲ್ಲದೆ ನಗರಸಭೆ ಅಧ್ಯಕ್ಷರಿಗೆ ಇಂದಿರಾ ಕ್ಯಾಂಟಿನ್ ತಮ್ಮ ಆಡಳಿತಕ್ಕೆ ಒಳಪಟ್ಟಿದೆ ಎಂದು ಗೊತ್ತಾಗಿದ್ದು ಇತ್ತೀಚೆಗೆ ಹಾಗೂ ಈ ಕುರಿತು ಅವರಲ್ಲಿ ಕನಿಷ್ಟ ಮಾಹಿತಿಯೂ ಇಲ್ಲ.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರು ಆರಿಸ್ ಎಂದು ಹೇಳಿದ್ದರು ಆದರೆ ನಿಜವಾದ ಗುತ್ತಿಗೆದಾರರು ಭಾರತೀಯ ಕಲ್ಯಾಣ ಪರಿಷತ್ ಬೆಂಗಳೂರು ಆಗಿರುತ್ತಾರೆ,ಅದರ ಎಂ.ಡಿ ಶಶಿಕುಮಾರ್ ಹಾಗಾಗಿ ಮಾತನಾಡುವಾಗ ಸರಿಯಾದ ಮಾಹಿತಿ ಇಟ್ಟುಕೊಂಡು ಅಧ್ಯಕ್ಷರು ಮಾತನಾಡಲಿ.ಇಂದಿರಾ ಕ್ಯಾಂಟೀನ್ನಿಂದ ಗೋಣಿಯಲ್ಲಿ ಆಹಾರ ಕೊಂಡುಯ್ಯುತ್ತಿದ್ದರು ಅನ್ನುವ ಇವರು ನಗರಸಭೆಯಲ್ಲಿ ಪೌರಾಯುಕ್ತೆ ವರ್ಗಾವಣೆ ಆಗಿ ಹೋಗುವಾಗ ಅಕ್ರಮವಾಗಿ ಗೋಣಿಯಲ್ಲಿ ಲಂಚ ಕೊಂಡುಯ್ಯುವಾಗ ಯಾಕೆ ಸುಮ್ಮನಿದ್ದರು ಮೊದಲು ನಗರಸಭೆಯ ಒಳಗಿನ ಅವ್ಯವಹಾರ ಸರಿಪಡಿಸಲಿ.ಮೊಸರಲ್ಲಿಕಲ್ಲು ಹುಡುಕುವ ಕೆಲಸ ಬಿಟ್ಟುಬಿಡಲಿ ಎಂದರು.

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ.ರೈ ಮಾತನಾಡಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ನಾಯಕತ್ವದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ಅನೇಕ ಸಹಾಯ ಮಾಡುವ ವಿಚಾರಗಳು ನಡೆದಿದೆ.ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಪ್ರತೀ ಗ್ರಾಮಕ್ಕೆ ಮುನ್ನೂರು ಆಹಾರದ ಸಾಮಾಗ್ರಿ ಕಿಟ್ ನೀಡಿದ್ದೇವೆ,ಈ ಬಾರಿಯೂ ಎರಡು ಉಚಿತ ಆಂಬುಲೆನ್ಸ್ ಮೂಲಕ ಹಾಗೂ ಕಾಂಗ್ರೆಸ್ ರಕ್ತ ನಿಧಿ ಸ್ಥಾಪಿಸಿ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿದೆ.ಆದರೆ ಶಕುಂತಳಾ ಶೆಟ್ಟಿಯವರ ಏಳಿಗೆ ಸಹಿಸದ ಬಿಜೆಪಿಯವರು ಶಕುಂತಳಾ ಶೆಟ್ಟಿಯವರ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಜೊತೆಗೆ ನಾವು ಗ್ರಾಮೀಣ ಪ್ರದೇಶಕ್ಕೆ ತೆರಳಿ ವ್ಯಾಕ್ಸಿನೇಶನ್ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ ಇವರು ಸಾಧ್ಯವಿದ್ದರೆ ಆ ಸಂದರ್ಭದಲ್ಲಿ ಲಸಿಕೆ ಪೂರೈಕೆ ಮಾಡುವ ಕಾರ್ಯ ಮಾಡಲಿ ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಮಾತನಾಡಿ ಶಕುಂತಲಾ ಶೆಟ್ಟಿಯವರು ಈ ವಿಚಾರ ಎತ್ತಿರುವುದು ಸರಿಯಾಗಿದೆ ಇದರಿಂದ ಅನೇಕರ ಬಣ್ಣ ಬಯಲಾಗಲಿದೆ.ಊಟ ನೀಡುವವರ ವಿರುದ್ದದ ತನಿಖೆ ಎಂದಾದರೆ ಶಕುಂತಳಾ ಶೆಟ್ಟಿಯವರು ಮಾತನಾಡುತ್ತಿರಲಿಲ್ಲ.ಆದರೆ ಊಟ ಕೊಂಡುಹೋಗುವವರ ತನಿಖೆ ಮಾಡಲಾಗುವುದು ಅಂದರೆ ಯಾರು ತಾನೆ ಊಟಕ್ಕಾಗಿ ಬಂದಾರೂ ಇವರ ಬೆದರಿಕೆಯ ಮಾತುಗಳಿಂದಲೇ ಜನ ಶಾಸಕರು ಪರಿಶೀಲನೆ ನಡೆಸಿದ್ದಂದಿನಿಂದ ಕಡಿಮೆ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಹೋಗುತ್ತಿದ್ದಾರೆ.ಹಾಗಾಗಿ ಮಾಜಿ ಶಾಸಕರು ಬಡವರ ಪರವಾಗಿ ಮಾತನಾಡಿದ್ದಾರೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ನ ಪ್ರಧಾನ ಕಾರ್ಯದಶಿ ಭಾಸ್ಕರ್ ಗೌಡ ಉಪಸ್ಥಿತರಿದ್ದರು.

ತಮ್ಮ ವ್ಯವಸ್ಥೆಯನ್ನು ತಾವೇ ಪರಿಶೀಲಿಸುತ್ತಿದ್ದಾರೆ:
ಶಾಸಕ ಸಂಜೀವ ಮಠಂದೂರು ಇಂದಿರಾ ಕ್ಯಾಂಟಿನ್ ಆಹಾರ ಸರಬರಾಜಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದ ಕಂಡಾಗ ಅವರ ವ್ಯವಸ್ಥೆಗಳ ಬಗೆಗೆ ಅವರಿಗೇ ಸಂಶಯವಿರುವುದು ಸ್ಪಷ್ಟವಾಗುತ್ತದೆ.ಯಾಕೆಂದರೆ ಇಂದಿರಾ ಕ್ಯಾಂಟೀನ್ ನಗರಸಭೆ ಆಡಳಿತಕ್ಕೆ ಒಳಪಡುತ್ತದೆ.ನಗರಸಭೆ ಸರಿಯಾದ ವ್ಯವಸ್ಥೆಗಳನ್ನು ಅಲ್ಲಿ ನೋಡಬೇಕಾಗುತ್ತದೆ ಆ ರೀತಿಯ ವ್ಯವಸ್ಥೆಗಳನ್ನು ಮಾಡಿಲ್ಲವಾದ್ದರಿಂದ ಶಾಸಕರು ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಬಂದೊದಗಿದೆ ಇದು ಅವರ ವ್ಯವಸ್ಥೆಯನ್ನು ಅವರೇ ಮುಟ್ಟಿ ನೋಡಿಕೊಳ್ಳುವಂತೆ ಆಗಿದೆ ಅವರ ತಪ್ಪುಗಳನ್ನು ಮುಚ್ಚಿ ಹಾಕುವುದಕ್ಕಾಗಿ ಶಕುಂತಳಾ ಶೆಟ್ಟಿಯವರ ಮೇಲೆ ಆರೋಪ ಮಾಡುವುದು ಸರಿಯಲ್ಲ.ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.