ಮಹಾಲಿಂಗೇಶ್ವರ ದೇವಸ್ಥಾನದಿಂದ ಸಿ ಗ್ರೇಡ್ ದೇವಸ್ಥಾನದ ಅರ್ಚಕರಿಗೆ ಆಹಾರದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಡೆದ ಕಾರ್ಯಕ್ರಮ

ಪುತ್ತೂರು: ದೇವಾಲಯಗಳ ಅರ್ಚಕರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲು ಜಿಲ್ಲಾಡಳಿತ ನಿರ್ಧಾರದಂತೆ ಎ ಗ್ರೇಡ್ ದೇವಸ್ಥಾನವಾದ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ‘ ಸಿ’ ಗ್ರೇಡ್ ದೇವಸ್ಥಾನಗಳ 150 ಅರ್ಚಕರುಗಳಿಗೆ ರೂ.1500 ಮೌಲ್ಯದ ಆಹಾರದ ಕಿಟ್ ಗಳನ್ನು ಜಿಲ್ಲೇಯಲ್ಲೆ ಪ್ರಥಮ ಭಾರಿಗೆ ಪುತ್ತೂರಿನಲ್ಲಿ‌ ನೀಡುವ ಕಾರ್ಯಕ್ರಮ ನಡೆಯಿತು.

ಶಾಸಕ ಸಂಜೀವ ಮಠಂದೂರು ಅವರು ‘ಸಿ’ ಗ್ರೇಡ್ ದೇವಸ್ಥಾನದ ಕಡೆಯಿಂದ ಬಂದ ಸಮಿತಿ ಪದಾಧಿಕಾರಿಗಳಿಗೆ ಸಾಂಕೇತಿಕವಾಗಿ ಕಿಟ್ ಗಳನ್ನು ಹಸ್ತಾಂತರಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ರಾಮಚಂದ್ರ ಕಾಮತ್, ರಾಮ್ ದಾಸ್ ಗೌಡ, ವೀಣಾ ಬಿ.ಕೆ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ನಿತ್ಯ‌ಕರಸೇವಕ ಕಿರಣ್ ಶಂಕರ್‌ಮಲ್ಯ ಮತ್ತು ಸಿ ಗ್ರೇಡ್ ದೇವಸ್ಥಾನದ ಆಡಳಿತ ವರ್ಗದವರು ಉಪಸ್ಥಿತರಿದ್ದರು.

ಸೇವಾ ಭಾರತಿಯಿಂದ ಬಿಲ್ವಪತ್ರೆ ವಿತರಣೆ:
ಅರ್ಚಕರಿಗೆ ಆಹಾರದ ಕಿಟ್ ವಿತರಣೆ ಜೊತೆಗೆ ಪ್ರತಿ ದೇವಸ್ಥಾನಕ್ಕೆ ತಲಾ ಎರಡರಂತೆ ಬಿಲ್ವಪತ್ರೆ ವಿತರಣೆಯನ್ನು ಸೇವಾ ಭಾರತಿ ವತಿಯಿಂದ ವಿತರಣೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.