ಕೋವಿಡ್ ಸೋಂಕಿತರಿಗೆ ಜಿ.ಎಸ್.ಬಿ ಸಮಾಜದಿಂದ ಔಷಧಿ – ಶಾಸಕರ ವಾರ್ ರೂಮ್‌ಗೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜಿಎಸ್‌ಬಿ ಸಮಾಜದಿಂದ ಮಾದರಿ ಕಾರ್ಯಕ್ರಮ – ಸಂಜೀವ ಮಠಂದೂರು

ಪುತ್ತೂರು: ಕೋವಿಡ್ ಸೋಂಕಿತರ ಆರೈಕೆಗಾಗಿ ಜಿ.ಎಸ್.ಬಿ ಸಮಾಜದ ವತಿಯಿಂದ ರೂ. 10ಸಾವಿರ ಮೌಲ್ಯದ ಔಷಧಿಯನ್ನು ಶಾಸಕರ ವಾರ್ ರೂಮ್‌ಗೆ ಹಸ್ತಾಂತರ ಮಾಡಲಾಯಿತು. ಶಾಸಕರು ಔಷಧಿ ಕಿಟ್‌ಗಳನ್ನು ಸ್ವೀಕರಿಸಿ ಆಸ್ಪತ್ರೆಗಳಿಗೆ ವಾರ್‌ರೂಮ್‌ಮೂಲಕ ನೀಡಲಿದ್ದೇವೆ ಎಂದರು.

ಜಿಎಸ್‌ಬಿ ಸಮಾಜದಿಂದ ಮಾದರಿ ಕಾರ್ಯಕ್ರಮ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜಿಎಸ್‌ಬಿ ಸಮಾಜದವರು ವ್ಯಾಪಾರ ವ್ಯವಹಾರ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೋವಿಡ್‌ನಂತಹ ಮಾರಾಣಾಂತಿಕ ಕಾಯಿಲೆಯಲ್ಲಿ ಮಾದರಿ ಕಾರ್ಯಕ್ರಮ ಮಾಡಿದ್ದಾರೆ. ಇವರ ಈ ಕಾರ್ಯಕ್ರಮ ಇತರರಿಗೆ ರೋಲ್ ಮೋಡೆಲ್ ಆಗಲಿದೆ ಎಂದರು. ಜಿಎಸ್‌ಬಿ ಸಮಾಜದ ಸದಸ್ಯರಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ, ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸದಸ್ಯ ವಾಮನ್ ಪೈ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅಚ್ಚುತ ಪ್ರಭು, ಗುರುಪ್ರಸಾದ್ ಶೆಣೈ, ನರಸಿಂಹ ಹೆಗ್ಡೆ, ಬಿಜೆಪಿ ನಗರ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ ಅವರು ಔಷಧಿ ಕಿಟ್‌ಗಳನ್ನು ಶಾಸಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಗಸರಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತ ಮಧು ಎಮ್.ಎಸ್, ನ್ಯಾಯವಾದಿ ಶಂಭು ಭಟ್, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಆರ್.ಸಿ.ನಾರಾಯಣ್, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.