ಕೆಯ್ಯೂರು: ರೇಷನ್ ಕಾರ್ಡ್ ಇದ್ದರೂ ಅಕ್ಕಿ ಸಿಗುತ್ತಿಲ್ಲ..!? ಬಡಕುಟುಂಬದ ಅಳಲು ಕೇಳುವವರೇ ಇಲ್ಲ…

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆ ಮೂರು ಬಡಕುಟುಂಬಗಳಿಗೆ ರೇಷನ್ ಸಿಗದೇ ವರ್ಷಗಳೇ ಆಗಿವೆ. ಕೆಯ್ಯೂರು ಗ್ರಾಮದ ಜನತಾ ಕಾಲನಿಯಲ್ಲಿರುವ ತೀರಾ ಬಡಕುಟುಂಬಗಳು ರೇಷನ್ ಕಾರ್ಡ್ ಇದ್ದರೂ ಅಕ್ಕಿಯಿಂದ ವಂಚನೆಗೊಳಗಾಗಿವೆ. ಕಾರ್ಡ್ ರಿನಿವಲ್ ಆಗದೇ ಇರುವುದೇ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಕೊರೋನಾದಂತಹ ಸಂಕಷ್ಟದ ಕಾಲದಲ್ಲಿಯೂ ರೇಷನ್ ಸಿಗದೇ ಇರುವುದರಿಂದ ಈ ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ.

ವಿಕಲಚೇತನ ಕುಟುಂಬ
ತೀರಾ ಬಡವರಾಗಿರುವ ಇವರಿಗೆ ಒಂದು ತುತ್ತಿನ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಳ್ಳು, ಶೋಭಾ ಮತ್ತು ಚನಿಯ ಎಂಬ ಮೂವರ ಕುಟುಂಬಗಳು ಇಲ್ಲಿವೆ. ಇದರಲ್ಲಿ ಶೋಭಾ ಅವರಿಗೆ ಕಣ್ಣು ಕಾಣುವುದಿಲ್ಲ, ಚನಿಯ ಮತ್ತು ಅಂಗಾರೆ ಇವರಿಬ್ಬರೂ ವಿಕಲಚೇತನರಾಗಿದ್ದಾರೆ.

ರೇಷನ್ ಕಾರ್ಡ್ ನವೀಕರಣ ಆಗಿಲ್ಲ
ಈ ಮೂರು ಕುಟುಂಬದ ರೇಷನ್ ಕಾರ್ಡ್‌ಗಳು ನವೀಕರಣ ಆಗಿಲ್ಲ. ನವೀಕರಣ ಮಾಡಲು ಹೋದಾಗ ಆಗುವುದಿಲ್ಲ, ಲಾಕ್‌ಡೌನ್ ಮುಗಿದ ಮೇಲೆ ಸರಿ ಮಾಡುವ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನುತ್ತಾರೆ. ಒಟ್ಟಿನಲ್ಲಿ ಲಾಕ್‌ಡೌನ್‌ನಂತಹ ಸಂಕಷ್ಟದ ಸಮಯದಲ್ಲೂ ಒಂದು ತುತ್ತಿನ ಅನ್ನಕ್ಕೂ ಕಷ್ಟಪಡುತ್ತಿರುವಾಗ ರೇಷನ್ ಕಾರ್ಡ್ ರಿನಿವಲ್ ಆಗಿಲ್ಲ ಎಂಬ ಕಾರಣ ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಬಗ್ಗೆ ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ ಕಿಟ್ಟ ಅಜಿಲ ಕಣಿಯಾರುರವರು ತಹಶೀಲ್ದಾರ್‌ರವರಿಗೆ ಮನವಿ ಮಾಡಿಕೊಂಡಿದ್ದು ಈ ಕೂಡಲೇ ಈ ಮೂರು ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕೆಯ್ಯೂರು ಗ್ರಾಮದ ಜನತಾ ಕಾಲನಿಯಲ್ಲಿರುವ ಈ ಮೂರು ಬಡಕುಟುಂಬಗಳಿಗೆ ಕಾರ್ಡ್ ರಿನಿವಲ್ ಆಗಿಲ್ಲ ಎಂಬ ಕಾರಣಕ್ಕೆ ಅಕ್ಕಿ ಸಿಗುತ್ತಿಲ್ಲ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ರಿನಿವಲ್ ನೆಪ ಇಟ್ಟುಕೊಂಡು ಅಕ್ಕಿ ವಿತರಿಸದೇ ಇರುವುದು ಸರಿಯಲ್ಲ ಆದ್ದರಿಂದ ತಹಶೀಲ್ದಾರ್‌ರವರಿಗೆ ಈ ಬಗ್ಗೆ ಪರಿಶೀಲನೆ ಮಾಡಿ ರೇಷನ್ ಒದಗಿಸಿಕೊಡಬೇಕಾಗಿ ವಿನಂತಿ – ಕಿಟ್ಟ ಅಜಿಲ ಕಣಿಯಾರು, ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.