ಪಡೀತರ ಸೌಲಭ್ಯ ಮಧ್ಯಾಹ್ನ 1 ಗಂಟೆ ತನಕ ಅವಧಿ ವಿಸ್ತರಣೆಗೆ ತಹಸೀಲ್ದಾರ್ ಗೆ ಸೂಚನೆ – ನ್ಯಾಯಬೆಲೆ ಅಂಗಡಿಗಳ ಮೇಲ್ವಿಚಾರಕರ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್ ಡೌನ್ ಸಮಯದಲ್ಲಿ ಪಡಿತರ ವಿತರಣೆ ವ್ಯವಸ್ಥಿತವಾಗಿ ನಡೆಯುವ ದೃಷ್ಟಿಯಿಂದ ಜನ ಸಂದಣಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಡಿತರ ಅಂಗಡಿಗಳ ಸಮಯವನ್ನು ಮಧ್ಯಾಹ್ನ 1 ಗಂಟೆಯ ತನಕ ವಿಸ್ತರಿಸಲು ಶಾಸಕ ಸಂಜೀವ ಮಠಂದೂರು ಅವರು ತಹಸೀಲ್ದಾರ್ ಅವರಿಗೆ ಸೂಚಿಸಿದ್ದಾರೆ.

ಮೇ 29 ರಂದು ತಹಸೀಲ್ದಾರ್ ಮಿಟಿಂಗ್ ಹಾಲ್ ನಲ್ಲಿ ನಡೆದ ಪುತ್ತೂರು ತಾಲೂಕಿನ ಎಲ್ಲಾ ನ್ಯಾಯ ಬೆಲೆ ಅಂಗಡಿಗಳ ಮೇಲ್ವಿಚಾರಕರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುತ್ತೂರು ತಾಲೂಕಿನಲ್ಲಿ 11 ನ್ಯಾಯ ಬೆಲೆ ಸಂಚಾರಿ ಅಂಗಡಿ ,79 ಪಡಿತರ ವಿತರಣಾ ಅಂಗಡಿಗಳಿದ್ದು ಪ್ರಸ್ತುತ ಬೆಳಿಗ್ಗೆ 7 ರಿಂದ ಕಾರ್ಯ ನಿರ್ವಹಿಸುತ್ತಿದೆ ಜನ ಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಮಧ್ಯಾಹ್ನದವರೆಗೆ ವಿಸ್ತರಿಸಬೇಕೆಂದು ಅಂಗಡಿ ಮೇಲ್ವಿಚಾರಕರು ಶಾಸಕರಲ್ಲಿ ವಿನಂತಿಸಿದ ಮೇರೇಗೆ ಮಧ್ಯಾಹ್ನ 1ಘಂಟೆಯವರೆಗೆ ವಿಸ್ತರಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ರಮೇಶ್ ಬಾಬು ರವರಿಗೆ ಸೂಚಿಸಿದರು. ಪಡಿತರ ಚೀಟಿ ಗೆ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಸಿಗದವರಿಗೂ ಅವಶ್ಯವುಳ್ಳವರಿಗೆ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು ಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಶ್ರೀಮತಿ ಸರಸ್ವತಿ ,ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ, ನ್ಯಾಯ ಬೆಲೆ ಅಂಗಡಿಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.