ಮೇ.31: ಆಲಂಕಾರು ಶ್ರೀ ದುರ್ಗಾಂಬಾ ಪ್ರೌಡ ಶಾಲಾ ಮುಖ್ಯಗುರು ಸತ್ಯನಾರಾಯಣ ಭಟ್.ಯು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಪ್ರೌಡಶಾಲಾ ವಿಭಾಗದ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಸತ್ಯನಾರಾಯಣ ಭಟ್.ಯು ರವರು ಮೇ.31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.

 

ಪುತ್ತೂರು ತಾಲೂಕು ಗ್ರಾಮದ ನಿಡ್ಪಳ್ಳಿ ಗ್ರಾಮದ ಉಳಯ ಮನೆಯ ಯು.ರಾಮ ಭಟ್ ಮತ್ತು ಸೀತಮ್ಮ ದಂಪತಿಗಳ ಪುತ್ರನಾದ ಇವರು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಮುಂಡೂರುನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ , ಪ್ರೌಡಶಾಲಾಶಿಕ್ಷಣವನ್ನು ನವೋದಯ ಪ್ರೌಡಶಾಲೆ ಬೆಟ್ಟಂಪಾಡಿಯಲ್ಲಿ ಮುಗಿಸಿ,ಪಿ.ಯು.ಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜ್ ಕೊಂಬೆಟ್ಟು ನಲ್ಲಿ ಮುಗಿಸಿ, ಬಿ.ಎಸ್ಸಿ ಶಿಕ್ಷಣವನ್ನು ಸಂತಫಿಲೋಮಿನಾ ಕಾಲೇಜ್ ಪುತ್ತೂರಿನಲ್ಲಿ ,ಬಿ.ಎಸ್ಸಿ ,ಬಿ.ಎಡ್ ಶಿಕ್ಷಣವನ್ನು ಸರಕಾರಿ ಶಿಕ್ಷಕ- ಶಿಕ್ಷಣ ಮಹಾವಿದ್ಯಾಲಯ ಮಂಗಳೂರಿನಲ್ಲಿ ಶಿಕ್ಷಣವನ್ನು ಮುಗಿಸಿ 1983 ರಲ್ಲಿ ಶ್ರೀ ದುರ್ಗಾಂಬಾ ಫ್ರೌಡಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿ, ಶಿಕ್ಷಕರಾಗಿ, ಪ್ರಾಂಶುಪಾಲರಾಗಿ, ಮುಖ್ಯಗುರುಗಳಾಗಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ  ಮೇ.31ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.

ಆಲಂಕಾರು ಕಯ್ಯಾಪೆ ಎಂಬಲ್ಲಿ ಸ್ವಸ್ತಿಕ ನಿಲಯದಲ್ಲಿ ವಾಸವಾಗಿದ್ದು,  ಪತ್ನಿ ಕನಕಲತಾ ಎಸ್.ಎನ್.ಭಟ್ ರವರು ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಮಾತಾಜಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.