ಕೊರೋನಾದಂತೆ ಡೆಂಗ್ಯೂ ಬಗ್ಗೆಯೂ ಅರಿವು ಮೂಡಿಸುವ ಕಾರ್ಯವಾಗಬೇಕು – ನರಿಮೊಗರು ಗ್ರಾ.ಪಂ ಕೊರೋನಾ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಯೂಸುಫ್ ರೆಂಜಲಾಡಿ

ಪುತ್ತೂರು: ನರಿಮೊಗರು ಗ್ರಾ.ಪಂ ಕೊರೋನಾ ಕಾರ್ಯಪಡೆ ಸಭೆ ಮೇ.೨೮ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಹರಡದಂತೆ ಕೈಗೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ನೋಡೆಲ್ ಅಧಿಕಾರಿ, ಸಿಡಿಪಿಓ ಶ್ರೀಲತಾ ಎಸ್, ಫ್ಲೈಯಿಂಗ್ ಸ್ಕ್ವಾಡ್, ಮೆಸ್ಕಾಂ ಎಇಇ ಶಿಲ್ಪಾ ಎಸ್ ಶೆಟ್ಟಿ ಮಾಹಿತಿ ನೀಡಿದರು. ಕೊರೋನಾ ವೈರಸ್ ನಿಯಂತ್ರಣ, ಸೋಂಕಿತರ ಮನೆಗಳಿಗೆ ಆಹಾರ ಪೂರೈಕೆ ಮುಂತಾದ ವಿಚಾರಗಳ ಬಗ್ಗೆ ಕೆಲ ಗ್ರಾ.ಪಂ ಸದಸ್ಯರು ಅಭಿಪ್ರಾಯ ಮಂಡಿಸಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ಜತೆಗೆ ಡೆಂಗ್ಯೂ ಕೂಡಾ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಗ್ರಾ.ಪಂಗೆ ಅಧಿಕಾರಿಗಳು ಸೂಚಿಸಿದರು.

ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಕಾರ್ಯದರ್ಶಿ ಶೇಕ್ ಖಲಂದರ್ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಆಶಾ ಕಾರ್ಯಕರ್ತೆಯರು, ಕೊರೋನಾ ವಾರಿಯರ್‍ಸ್‌ಗಳು ಉಪಸ್ಥಿತರಿದ್ದರು. ಪಿಡಿಒ ರವಿಚಂದ್ರ ಸ್ವಾಗತಿಸಿ ವಂದಿಸಿದರು. ಗ್ರಾ.ಪಂ ಸಿಬ್ಬಂದಿ ಮಾಧವ ಹಾಗೂ ಮತ್ತಿತರರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.