ಮೇ.31: ಬಿಳಿನೆಲೆ ಕೈಕಂಬ ಶಾಲೆಯ ಮುಖ್ಯ ಶಿಕ್ಷಕ ತುಕರಾಮ ಗೌಡ ಎಸ್. ಕರ್ತವ್ಯದಿಂದ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಡಬ ಗ್ರಾಮದ ಬಿಳಿನೆಲೆ ಕೈಕಂಬ ಶಾಲೆಯ ಮುಖ್ಯ ಶಿಕ್ಷಕ ತುಕರಾಮ ಗೌಡ ಎಸ್.ರವರು ಮೇ.31ರಂದು ನಿವೃತ್ತಿ ಹೊಂದಲಿದ್ದಾರೆ.

೧೯೯೦ರಲ್ಲಿ ಇಡ್ಯಡ್ಕ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿದ ಇವರು ಪುತ್ತೂರಿನ ಹಲವು ಶಾಲೆಗಳಲ್ಲಿ ಸಹಶಿಕ್ಷಕರಾಗಿ, ಬಂಟ್ರ ಕ್ಲಸ್ಟರ್ ಸಿಆರ್‌ಪಿಯಾಗಿ, ಶಿಕ್ಷಕರ ಸಂಘದ ಪ್ರತಿನಿಧಿಯಾಗಿ ಕಡಬ ತಾಲೂಕು ಶಿಕ್ಷಕರ ಸಂಘದ ಗೌರವಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಬಿಳಿನೆಲೆ ಬೈಲು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಡಬ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಸುಬ್ರಹ್ಮಣ್ಯ ಎಸ್.ಎಸ್.ಪಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಬಳಿಕ ಮಂಗಳೂರು ಕೊಡಿಯಾಲಬೈಲಿನಲ್ಲಿ ಶಿಕ್ಷಕ ತರಬೇತಿ ಪೂರೈಸಿದ್ದಾರೆ. ಇವರು ಪತ್ನಿ ತೀರ್ಥಾವತಿ, ಪತ್ರ ಸೃಜನ್ ಹಾಗೂ ಪುತ್ರಿ ಸ್ಫೂರ್ತಿಯವರೊಂದಿಗೆ ಬಿಳಿನೆಲೆಯಲ್ಲಿ ವಾಸವಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.