ಪುತ್ತೂರು ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಕೃಷ್ಣವೇಣಿ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಕೃಷ್ಣವೇಣಿರವರು ಮೇ 31ರಂದು ನಿವೃತ್ತರಾಗುತ್ತಿದ್ದಾರೆ.

ಲೀಲಾವತಿ ಡಿ. ನಾಯಕ್‌ ಮತ್ತು ದೇವಪ್ಪ ನಾಯಕ್ರವರ ಐದು ಮಕ್ಕಳಲ್ಲಿ ಮೂರನೇ ಪುತ್ರಿಯಾಗಿರುವ ಕೃಷ್ಣವೇಣಿ ಯವರು 1984ರಲ್ಲಿ ಎಲ್.ಎಲ್.ಬಿ. ಪದವಿ ಪೂರೈಸಿದ್ದು ಪ್ರಥಮವಾಗಿ ವಕೀಲ ವೃತ್ತಿಯನ್ನು ಮಂಗಳೂರಿನ ವೈ.ಟಿ ಹೆಗ್ಡೆಯವರ ಜೂನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು. 

1986ರಲ್ಲಿ ಪುತ್ತೂರಿನ ಮಂಜಲ್ಪಡ್ಪು ನಿವಾಸಿ ಉದ್ಯಮಿ ಎಂ. ವಿಶ್ವನಾಥ ನಾಯ್ಕ್ ರನ್ನು ವಿವಾಹವಾದ ಮೇಲೆ ಪುತ್ತೂರಿನಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿ ಆರಂಭಿಸಿದ ಕೃಷ್ಣವೇಣಿರವರು ಜನವರಿ 2000ರಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ನಿಯುಕ್ತಿಗೊಂಡು ಹಾಸನ, ಸುಳ್ಯ, ಸಕಲೇಶಪುರ ಮತ್ತು ಬೆಳ್ತಂಗಡಿ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸಿದ್ದರು. 2013ರಲ್ಲಿ ಭಡ್ತಿ ಹೊಂದಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕರಾಗಿ ಮಂಗಳೂರು, 2015ರಲ್ಲಿ ಸರಕಾರಿ ಅಭಿಯೋಜಕರಾಗಿ ಭಡ್ತಿ ಹೊಂದಿ ಉಡುಪಿ ನ್ಯಾಯಾಲಯದಲ್ಲಿ ನಂತರ  ವರ್ಗಾವಣೆಗೊಂಡು ಮಡಿಕೇರಿಯಲ್ಲಿ ಹಾಗೂ  08-05-2020ರಿಂದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜತೆಗೆ ಪುತ್ತೂರು ವಿವೇಕಾನಂದ ಪದವಿ ಕಾಲೇಜು ಹಾಗೂ ಕಾನೂನು ಮಹಾ ವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸರಕಾರಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಸೇವಾವಧಿಯಲ್ಲಿ ಆರೋಪಿತರಿಗೆ 150 ಪ್ರಕರಣಗಳಲ್ಲಿ ಸಜೆ , 50ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ, ಒಂದು ಪ್ರಕರಣದಲ್ಲಿ ಮರಣ ದಂಡನೆಗೆ  ಕಾರಣಕರ್ತರಾಗಿರುವ ಕೃಷ್ಣವೇಣಿರವರು ಇದೀಗ ಸೇವಾ ನಿವೃತ್ತಿ ಹೊಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.