ಗ್ರಾಮ ಮಟ್ಟದಲ್ಲಿರುವ ಕೋವಿಡ್ ಕಾರ್ಯಪಡೆ ಪ್ರಕೃತಿ ವಿಕೋಪ ನಿರ್ವಹಣೆಯಲ್ಲೂ ಸಕ್ರಿಯವಾಗಬೇಕು – ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಳೆಗಾದಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪದಿಂದ ಹಾನಿಯಾಗದಂತೆ ಎಲ್ಲಾ ಇಲಾಖೆಗಳು ಸನ್ನಧವಾಗಿರಬೇಕು. ತಾಲೂಕಿನ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಂಡು ತಮ್ಮ ಕೆಳಗಿನ ನೌಕರರಿಗೆ ಜವಾಬ್ದಾರಿ ವಹಿಸಬೇಕು. ಗ್ರಾಮಮಟ್ಟದಲ್ಲಿರುವ ಪ್ರಸ್ತುತ ಕೋವಿಡ್ ಕಾರ್ಯಪಡೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳನ್ನು ಕೂಡಾ ನಿರ್ವಹಣೆ ಮಾಡಲು ಸಕ್ರಿಯವಾಗಬೇಕೆಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.

ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗದ ಕುರಿತು ಪುತ್ತೂರು ತಾ.ಪಂ ಸಭಾಂಗಣದಲ್ಲಿ ಮೇ.31ರಂದು ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಕೃತಿ ವಿಕೋಪ ಮತ್ತು ಕೋವಿಡ್‌ನ ಜೊತೆಗೆ ಡೆಂಗ್ಯೂ ಮಲೇರಿಯ ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಎಲ್ಲೆಲ್ಲಾ ಪ್ರತಿ ವರ್ಷ ಪ್ರಕ್ರತಿ ವಿಕೋಪ, ನೆರೆ ಬರುತ್ತದೆಯೋ ಅದನ್ನು ಗುರುತಿಸಿ, ಅಲ್ಲಿ ತಕ್ಷಣ ಸ್ಪಂಧನೆ ಕೊಡಬೇಕು. ನದಿ ಬದಿಯಲ್ಲಿರುವ ಮನೆಗಳನ್ನು ಸ್ಥಳಾಂತರಿಸಬೇಕು. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡುವ ಕೆಲಸ ಮಾಡಬೇಕು. ಕೃಷಿಗೆ ಸಂಬಂಧಿಸಿ ಕೋವಿಡ್ ಸಂದರ್ಭದಲ್ಲಿ ಎಲ್ಲರು ಮನೆಯಲ್ಲಿದ್ದಾಗ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಒಟ್ಟಿನಲ್ಲಿ ಎಲ್ಲಾ ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು.

ಗ್ರಾಮ ಬಂಧು ಯೋಜನೆಯಡಿ ಸೇತುವೆ ನಿರ್ಮಾಣ:
ಎಲ್ಲೆಲ್ಲಾ ಅಪಾಯಕಾರಿ ಸೇತುವೆಗಳಿವೆಯೋ ಅದನ್ನು ಗ್ರಾಮ ಬಂಧು ಯೋಜನೆಯಲ್ಲಿ ಸೇರಿಸಿ ಸಂಪರ್ಕ ಸೇತುವೆ ಮಾಡಬೇಕು. ಈ ಮಳೆಗಾಲದಲ್ಲಿ ಎಲ್ಲೆಲ್ಲಿ ಪಾಲ ಹಾಕಿ ನಡೆದು ಕೊಂಡು ಹೋಗುತ್ತಾರೋ ಅದನ್ನೆಲ್ಲಾ ಗ್ರಾಮ ಬಂಧು ಯೋಜನಡಿಯಲ್ಲಿ ಸಂಪರ್ಕ ಸೇತುವೆ ಮಾಡಬೇಕು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಶಾಲೆಗೆ ಹೋಗುವಲ್ಲಿ ತೊಂದರೆ ಆಗಬಾರದು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಅಪಾಯಕಾರಿ ಸೇತುವೆಗಳಿದ್ದಲ್ಲಿ ನಾಮಫಲಕ ಅಳವಡಿಸಿ:
ಮಳೆಗಾಲದ ಸಂದರ್ಭದಲ್ಲಿ ಕೆಲವೊಂದು ಸೇತುವೆಗಳು ತುಂಬಿ ಹರಿಯುವುದು. ಇದು ಹೆಚ್ಚು ಅಪಾಯಕಾರಿ. ಇಂತಹ ಸೇತುವೆಗಳಿದ್ದಲ್ಲಿ ಗುರುತಿಸಿ ಅಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಾಮಫಲಕ ಅಳವಡಿಸಬೇಕು. ಸಭೆಯಲ್ಲಿ ತಹಸೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ನಗರಭೆ ಪೌರಾಯುಕ್ತ ಮಧು ಎಮ್.ಎಸ್ ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.