ಸೌದಿ ಅರೇಬಿಯಾದ ಜಿದ್ದಾದಲ್ಲಿ ಎಂ.ಪಿ.ಎಲ್ ಕ್ರಿಕೆಟ್ – ನಮ್ಮ ಕುಡ್ಲ ವಾರಿಯರ್ಸ್ ಚಾಂಪಿಯನ್ ; ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ರನ್ನರ್ಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅನಿವಾಸಿ ಉದ್ಯಮಿ, ಕ್ರೀಡಾ ಪ್ರೋತ್ಸಾಹಕ ಸಲೀಂ ಅಬ್ದುಲ್ ಘನಿ ಅವರ ಮುಂದಾಳತ್ವದಲ್ಲಿ, ಟಾರ್ಗೆಟ್ ಗೈಸ್ ತಂಡದ ಸಹಕಾರದೊಂದಿಗೆ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಮಂಗಳೂರು ಪ್ರೀಮಿಯರ್ ಲೀಗ್ (ಎಂ.ಪಿ.ಎಲ್-೨೦೨೧) ಕ್ರಿಕೆಟ್ ಪಂದ್ಯಾಟದಲ್ಲಿ `ನಮ್ಮ ಕುಡ್ಲ ವಾರಿಯರ್ಸ್‌ʼ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ಹುರೈಸ್ ಪುತ್ತೂರು ನಾಯಕತ್ವದ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ತಂಡ ರನ್ನರ್‍ಸ್ ಸ್ಥಾನ ಪಡೆದುಕೊಂಡಿದೆ.

ಹೊನಲು ಬೆಳಕಿನ ಪಂದ್ಯಾಟದಲ್ಲಿ ಇತರ ಬಲಿಷ್ಠ ತಂಡಗಳಾದ ಎ.ಟಿ.ಎಸ್ ವಾರಿಯರ್‍ಸ್, ಶಾಕ್ಸ್ ಇಲೆವೆನ್, ಫೈವ್ ಸ್ಟಾರ್ ಅಡೂರು ಭಾಗವಹಿಸಿತ್ತು.

ಕ್ವಾಲಿಫಯರ್ ಪಂದ್ಯಾಟದಲ್ಲಿ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ತಂಡವು ನಮ್ಮ ಕುಡ್ಲ ವಾರಿಯರ್‍ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಎಲಿಮಿನೇಟರ್ ಪಂದ್ಯಾಟದಲ್ಲಿ ನಮ್ಮ ಕುಡ್ಲ ವಾರಿಯರ್‍ಸ್ ತಂಡ ಎ.ಟ.ಎಸ್ ವಾರಿಯರ್‍ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿತ್ತು.

ಫೈನಲ್ ಪಂದ್ಯ:
ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ತಂಡ ೭ ಓವರುಗಳಲ್ಲಿ ೫೩ ರನ್ ಕಲೆ ಹಾಕಿತು. ಗುರಿ ಬೆಂಬತ್ತಿದ ನಮ್ಮ ಕುಡ್ಲ ವಾರಿಯರ್‍ಸ್ ತಂಡ ೬.೩ ಓವರ್‌ಗಳಲ್ಲಿ ಗುರಿ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ನಮ್ಮ ಕುಡ್ಲ ತಂಡದ ಹೈದರ್ ಅಲಿ ಉಚ್ಚಿಲ ಪರ್ಪಲ್ ಕ್ಯಾಪ್, ಎಟಿಎಸ್ ವಾರಿಯರ್‍ಸ್‌ನ ಶಂಸುದ್ದೀನ್ ಬಂಟ್ವಾಳ ಆರೆಂಜ್ ಕ್ಯಾಪ್‌ನ್ನು ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಪಡೆದುಕೊಂಡರು. ಸರಣಿಯುದ್ದಕ್ಕೂ ಮಿಂಚಿದ ಹೈದರ್ ಆಲಿ ಉಚ್ಚಿಲ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.