ಸುದ್ದಿಯಿಂದ ಜನಾಧಿಕಾರದ ಅನಾವರಣ: ಕಡಬ ತಹಶೀಲ್ದಾರ್ ಜೊತೆ ನೇರ ಸಂವಾದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಸುದ್ದಿಯಿಂದ ಜನಾಧಿಕಾರದ ಅನಾವರಣ ಸರಣಿ ಕಾರ್ಯಕ್ರಮದ ಅಂಗವಾಗಿ ಕಡಬ ತಹಶೀಲ್ದಾರ್ ಜೊತೆಗೆ ನೇರ ಫೋನ್ ಇನ್ ಕಾರ್ಯಕ್ರಮವು ಸುದ್ದಿ ಕೇಬಲ್ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರಗೊಂಡಿತು.

ಕಾರ್ಯಕ್ರಮದಲ್ಲಿ ಕಡಬ ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳೂ ಆಗಿರುವ ಅನಂತ ಶಂಕರ್ ಅವರು ಭಾಗವಹಿಸಿ ಮಾಹಿತಿ ನೀಡಿದರು. ಕೊರೋನಾ ಲಾಕ್‌ಡೌನ್ ಮತ್ತು ಈ ಸಂದರ್ಭದಲ್ಲಿ ಜನರ ಸಮಸ್ಯೆಗಳು, ಸೇವೆಗಳು, ಕಾರ್ಯಪಡೆಯ ಕಾರ್ಯಾಚರಣೆ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಿಂಚಣಿ, 94 ಸಿ ಮತ್ತು 94 ಸಿಸಿ, ಸಕಾಲ ಕಾಯ್ದೆ, ಕನ್ವರ್ಷನ್, ಸಕ್ರಮ ಸಕ್ರಮ, ಕಡಬ ತಾಲೂಕಿಗೆ ಸವಾಲಾಗಿರುವ ಪ್ಲಾಟಿಂಗ್ ಸಮಸ್ಯೆ ಇತ್ಯಾದಿಗಳ ಬಗ್ಗೆ ಜನರು ಕರೆ ಮಾಡಿ ತಹಶೀಲ್ದಾರ್ ಅವರಿಂದ ಉತ್ತರ ಪಡೆದುಕೊಂಡರು. ಸುದ್ದಿ ಚಾನೆಲ್‌ನ ನಿರೂಪಕ ಗೌತಮ್ ಶೆಟ್ಟಿ ಮತ್ತು ಸುದ್ದಿ ಬಿಡುಗಡೆ ಪತ್ರಿಕೆಯ ಕಡಬ ವರದಿಗಾರ ವಿಜಯ್ ಕಡಬ ಅವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.