ಬೀದಿ ನಾಯಿಗಳ ಅನ್ನದಾತ ರಾಜೇಶ್ ಬನ್ನೂರು ಅವರ ಮೂಲಕ ಬೀದಿ ನಾಯಿಗಳ ಹಸಿವು ನೀಗಿಸಿದ ಬಿಜೆಪಿ ಒಬಿಸಿ ಮೋರ್ಚಾದ ಸೇವಾ ಹೀ ಸಂಘಟನ್ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ 7 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದವತಿಯಿಂದ ಸೇವಾ ಹೀ ಸಂಘಟನ್ ಕಾರ್ಯಕ್ರಮದ ಅಡಿಯಲ್ಲಿ ಬೀದಿ ನಾಯಿಗಳ ಹಸಿವು ನೀಗಿಸಲು ಬೀದಿ ನಾಯಿಗಳ ಅನ್ನದಾತ ರಾಜೇಶ್ ಬನ್ನೂರು ಅವರಿಗೆ 1 ಕಿಂಟ್ವಾಳ್ ಅಕ್ಕಿಯನ್ನು ಹಸ್ತಾಂತರಿಸಲಾಯಿತು.
ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್ .ಸಿ.ನಾರಾಯಣ್ ಅವರು ಅಕ್ಕಿಯನ್ನು ಕೊಂಬೆಟ್ಟು ತಾಲೂಕು ಕ್ರೀಡಾಂಗಣದ ಬಳಿ ಬೀದಿ ನಾಯಿಗಳ ಅನ್ನದಾತ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕರ ವಾರ್ ರೂಮ್ ನ ತುರ್ತು ಸೇವಾ ಕಾರ್ಯದ ಪ್ರಮುಖ್ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಸಮಿತಿ ಸದಸ್ಯ ಕಿರಣ್ ಶಂಕರ್ ಮಲ್ಯ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಸೂರ್ಯ ಕುಮಾರ್ , ರಿಸರ್ವ್ ಬ್ಯಾಂಕ್ ನಿವೃತ ಅಧಿಕಾರಿ ಶೀನ ನಾಯ್ಕ ದಂಪತಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.