ಕೋವಿಡ್ ಸೋಂಕಿತರಿಗೆ ಅಗತ್ಯ ವಸ್ತುಗಳನ್ನು ನೀಡಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ದಂಪತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ -19 ಸಂದರ್ಭದಲ್ಲಿ ಡೆಂಗ್ಯೂ ಮಲೇರಿಯ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಾರದು ಎಂದು ಕೋವಿಡ್ ಸೋಂಕಿತರಿಗೆ ಸೊಳ್ಳೆ ಪರದೆಯನ್ನು ಪುತ್ತೂರು ಶಾಸಕರ ವಾರ್ ರೂಮ್ ಮೂಲಕ ನೀಡಿದ ರಿಸರ್ವ್ ಬ್ಯಾಂಕ್ ನಿವೃತ ಅಧಿಕಾರಿ ಮೂಲತಃ ಪುಣಚ ನಿವಾಸಿ ಸಾಮೆತ್ತಡ್ಕ ಆರಾಧ್ಯ ಲೇ ಔಟ್ ನಿವಾಸಿ ಶೀನ ನಾಯ್ಕ್ ದಂಪತಿ ತಮ್ಮ 39 ನೇ ವಿವಾಹ ವಾರ್ಷಿಕೋತ್ಸವ ವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.

ಮೇ 31 ರಂದು ಅವರು ಬಲ್ನಾಡು ಕೋವಿಡ್ ಕೇರ್ ಸೆಂಟರ್ ಗೆ 25 ಸೊಳ್ಳೆ ಪರದೆಯನ್ನು ಶೀನ ನಾಯ್ಕ್ ಮತ್ತು ಅವರ ಪತ್ನಿ ಸರೋಜ ಅವರು ಶಾಸಕ ಸಂಜೀವ ಮಠಂದೂರು ಅವರಿಗೆ ಶಾಸಕರ ವಾರ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕರ ವಾರ್ ರೂಮ್ ನ ತುರ್ತು ಸೇವಾ ವಿಭಾಗದ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ಸದಸ್ಯೆ ಪೂರ್ಣಿಮ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪುರುಷೋತ್ತಮ ಮುಂಗ್ಲಿಮನೆ, ಹರಿಪ್ರಸಾದ್ ಯಾದವ್, ಯುವರಾಜ್ ಪೆರಿಯತ್ತೋಡಿ, ಕಿರಣ್ ಶಂಕರ್ ಮಲ್ಯ, ಕೋವಿಡ್ ಕೇರ್ ಸೆಂಟರ್ ನ ಉಸ್ತುವಾರಿ ಸುಬ್ರಹ್ಮಣ್ಯ, ಡಾ. ಆಶಾ, ಬಿಜೆಪಿ ಮಂಡಲದ ಕಾರ್ಯದರ್ಶಿ ಪ್ರಕಾಶ್ ಕೆಲಾಡಿ, ವಿಶ್ವನಾಥ ಕುಲಾಲ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.