ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿ ಚರಂಡಿ ಕಾಮಗಾರಿ | ಜೂನ್ ಆರಂಭದಲ್ಲೇ ಕೆಲಸ ಆರಂಭಿಸಿ ಮಾದರಿಯಾದ ಪಿಡಬ್ಲ್ಯೂಡಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಈ ಹಿಂದೆಯೆಲ್ಲಾ ಅರ್ಧ ಮಳೆಗಾಲ ಕಳೆದು ಜನರು ಸಮಸ್ಯೆಯನ್ನು ಅನುಭವಿಸಿದ ಬಳಿಕ ಎಚ್ಚೆತ್ತುಕೊಂಡು ಪುತ್ತೂರು- ಉಪ್ಪಿನಂಗಡಿ ರಸ್ತೆ ಬದಿಯ ಚರಂಡಿ ನಿರ್ವಹಣೆಗೆ ಮುಂದಾಗುತ್ತಿದ್ದ ಲೋಕೋಪಯೋಗಿ ಇಲಾಖೆಯು ಈ ವರ್ಷ ಜೂನ್ ಆರಂಭದಲ್ಲೇ ಚರಂಡಿ ನಿರ್ವಹಣೆ ಕಾರ್ಯಕ್ಕೆ ಮುಂದಾಗಿದೆ.

ಪುತ್ತೂರು- ಉಪ್ಪಿನಂಗಡಿ ರಸ್ತೆ ಬದಿಯಲ್ಲಿ ಚರಂಡಿಗಳಿದ್ದರೂ, ಅದು ಮಣ್ಣು ತುಂಬಿ, ಗಿಡ- ಗಂಟಿಗಳಿಂದ ಆವೃತವಾಗಿ ಮಳೆಗಾಲ ಮುಗಿಯುವಾಗ ಮುಚ್ಚಿ ಹೋಗುತ್ತಿತ್ತು. ಮತ್ತೆ ಮಳೆಗಾಲ ಆರಂಭವಾಗುವಾಗ ಚರಂಡಿಗಳ ಹೂಳೆತ್ತುವುದು ಅನಿವಾರ್ಯವಾಗಿತ್ತು. ಆದರೆ ಈ ಹಿಂದೆಲ್ಲಾ ಲೋಕೋಪಯೋಗಿ ಇಲಾಖೆ ಸಕಾಲದಲ್ಲಿ ಈ ಕೆಲಸವನ್ನು ಮಾಡುತ್ತಿರಲಿಲ್ಲ. ಇದರಿಂದ ರಸ್ತೆಯ ಮೇಲೆಲ್ಲಾ ಮಳೆ ನೀರು ಹರಿದು ಸಂಚಾರಕ್ಕೆ ಅಡಚಣೆಯಾಗುವುದಲ್ಲದೆ, ರಸ್ತೆಯೂ ಹಾಳಾಗಲು ಕಾರಣವಾಗಿತ್ತು. ಆದರೆ ಈ ಬಾರಿ ಮಾತ್ರ ಸರಿಯಾಗಿ ಮಳೆಗಾಲ ಆರಂಭವಾಗುವ ಮುಂಚೆಯೇ ಲೋಕೋಪಯೋಗಿ ಇಲಾಖೆ ಈ ರಸ್ತೆಯ ಬದಿಯ ಚರಂಡಿ ನಿರ್ವಹಣೆಗೆ ಹೊರಟಿದೆ. ಜೆಸಿಬಿ ಮೂಲಕ ಚರಂಡಿಯ ಹೂಳೆತ್ತುವ ಕೆಲಸ, ಚರಂಡಿ ಇಲ್ಲದಲ್ಲಿ ಚರಂಡಿ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಈಗಾಗಲೇ ೩೪ ನೆಕ್ಕಿಲಾಡಿಯಿಂದ ಕೆಲಸ ಆರಂಭವಾಗಿದ್ದು, ಇದು ಪಡೀಲ್ ತನಕ ನಡೆಯಲಿದೆ. ಸಕಾಲದಲ್ಲಿ ಚರಂಡಿ ನಿರ್ವಹಣೆ ಕೆಲಸಕ್ಕೆ ಕೈ ಹಾಕಿದ ಲೋಕೋಪಯೋಗಿ ಇಲಾಖೆಯ ಕಾರ್ಯವು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿ ೩೪ ನೆಕ್ಕಿಲಾಡಿಯಿಂದ ಪಡೀಲ್‌ನವರೆಗೆ ಚರಂಡಿ ನಿರ್ವಹಣೆ ಕಾಮಗಾರಿ ನಡೆಯಲಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಅಗತ್ಯವಿರುವಲ್ಲಿ ಎರಡೂ ಕಡೆ ಚರಂಡಿ ಕೊಡಲು ತಿಳಿಸಿದ್ದೇವೆ. ಆದರೆ ಇತ್ತೀಚೆಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆದ ಕಡೆ ಅವರದ್ದೇ ಕೆಲಸಗಳು ಬಾಕಿಯಿದ್ದು, ಆದ್ದರಿಂದ ಅಲ್ಲಿ ಈಗ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಉಳಿದ ಎಲ್ಲಾ ಕಡೆ ಕಾಮಗಾರಿ ನಡೆಸುತ್ತೇವೆ. ಇದಕ್ಕೆ ಅನುದಾನವನ್ನು ಲೋಕೋಪಯೋಗಿ ಇಲಾಖೆಯೇ ಭರಿಸಲಿದೆ – ಪ್ರಮೋದ್ ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

ಮೊದಲೆಲ್ಲಾ ಅರ್ಧ ಮಳೆಗಾಲ ಮುಗಿದರೂ ಚರಂಡಿ ನಿರ್ವಹಣೆ ಕಾಮಗಾರಿಗಳು ಆಗುತ್ತಿರಲಿಲ್ಲ. ಇದರಿಂದ ಜನರಿಗೂ ತೊಂದರೆಗಳಾಗುತ್ತಿತ್ತು. ಅಲ್ಲದೇ, ಮಳೆಗಾಲ ಸರಿಯಾಗಿ ಆರಂಭವಾದ ಬಳಿಕ ಕೆಲಸ ಆರಂಭಿಸುವುದರಿಂದ ಚರಂಡಿ ನಿರ್ವಹಣೆ ಕೆಲಸಗಳೂ ಸರಿಯಾಗುತ್ತಿರಲಿಲ್ಲ. ಮತ್ತೊಂದೆಡೆ ರಸ್ತೆ ಬದಿ ಕೆಸರು ಮಣ್ಣು ನಿಂತು ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿತ್ತು. ಆದರೆ ಇದೀಗ ಜೂನ್ ಆರಂಭದಲ್ಲೇ ಲೋಕೋಪಯೋಗಿ ಇಲಾಖೆ ಪುತ್ತೂರು- ಉಪ್ಪಿನಂಗಡಿ ರಸ್ತೆ ಬದಿ ಚರಂಡಿ ನಿರ್ವಹಣೆಗೆ ಮುಂದಾಗಿರುವುದು ಉತ್ತಮ ಕಾರ್ಯ. ಗ್ರಾ.ಪಂ.ಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳೂ ಕೂಡಾ ತಮ್ಮ ತಮ್ಮ ವ್ಯಾಪ್ತಿಗೆ ಬರುವ ಚರಂಡಿ ನಿರ್ವಹಣೆ ಕೆಲಸಗಳನ್ನು ಇದೇ ಸಮಯಕ್ಕೆ ಮಾಡಿದಾಗ ಮಾತ್ರ ಕೆಲಸವೂ ಉತ್ತಮವಾಗುವುದಲ್ಲದೆ, ಜನರಿಗೂ ಸಮಸ್ಯೆ ತಪ್ಪಿದಂತಾಗುತ್ತದೆ – ಶಬೀರ್ ಅಹಮ್ಮದ್ ನೆಕ್ಕಿಲಾಡಿ ಸಾಮಾಜಿಕ ಕಾರ್ಯಕರ್ತ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.