ಪುಣಚ ಗ್ರಾ.ಪಂ. ನಲ್ಲಿ ಕೋವಿಡ್ -19 ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾವೆಲ್ಲ ಜೊತೆಯಾಗಿ ಕೆಲಸ‌ನಿರ್ವಹಿಸಬೇಕು: ಮಠಂದೂರು

ವಿಟ್ಲ: ಕೋವಿಡ್ -19 ಎರಡನೇ ಅಲೆಯ  ನಿಯಂತ್ರಣದ ಉದ್ದೇಶದಿಂದ ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಮಟ್ಟದ ಕಾರ್ಯಪಡೆಯ ಸಭೆಯು ಜೂ.೧ರಂದು ಶಾಸಕರಾದ ಸಂಜೀವ ಮಠಂದೂರುರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕೋವಿಡ್ ನಿವಾರಣೆ ಮತ್ತು ನಿರ್ವಹಣೆಯ ದೃಷ್ಟಿಯಿಂದ ನಾವೆಲ್ಲರೂ ಜತೆ ಜತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಪಡಿತರ ವ್ಯವಸ್ಥೆ,ನರೆಗಾ ಯೋಜನೆಯ ಯಶಸ್ಸಿಗಾಗಿ ಪ್ರಯತ್ನ ಮಾಡಬೇಕಾಗಿದೆ ಕೊರೋನಾ ಮುಕ್ತ  ಯೋಚನೆ ಜತೆಗೆ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು  ಜನರನ್ನು ಭಾಧಿಸದಂತೆ ಕ್ರಮ ಕೈಗೊಳ್ಳುವಂತೆ  ಶಾಸಕರು ಸೂಚಿಸಿದರು. ಸಭೆಯಲ್ಲಿ ಪುಣಚ ಗ್ರಾ.ಪಂ. ಅಧ್ಯಕ್ಷ  ರಾಮಕೃಷ್ಣ ಮೂಡಂಬೈಲು, ಶಾಸಕರ ವಾರ್ ರೂಂ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಪುಣಚ ಸೇವಾ ಸಹಕಾರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ, ಹರಿಕೃಷ್ಣ  ಶೆಟ್ಟಿ ಮೂಡಂಬೈಲು, ಗ್ರಾ.ಪಂ. ಉಪಾಧ್ಯಕ್ಷರಾದ  ಪ್ರತಿಭಾ ಜಗನ್ನಾಥ ಗೌಡ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಲಾವಣ್ಯ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.