ಬೆಳಂದೂರು ಗ್ರಾ.ಪಂ. ಸಾಮಾನ್ಯ ಸಭೆ | ಮನೆ ತೆರಿಗೆ ಪರಿಸ್ಕರಣೆಗೆ ನಿರ್ಧಾರ – ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸದಸ್ಯರ ಒತ್ತಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

  • ಶಾಂತಿಮೊಗರು ಕ್ರಾಸಿಂಗ್ ಬಳಿ ಸರ್ಕಲ್, ಹೈ ಮಾಸ್ಟ್ ಲೈಟ್, ಸಿಸಿ ಕ್ಯಾಮರಾ ಅಳವಡಿಸಲು ಅನುಮತಿ ನೀಡಿ- ಕುದ್ಮಾರು ತಿರಂಗ ವಾರಿಯರ್ಸ್ ನಿಂದ ಮನವಿ

* ಕೆಲೆಂಬಿರಿ ರಾಜೀವ್ ಗಾಂಧಿ ಸಭಾಂಗಣದ ಜಾಗವನ್ನು ಪಂಚಾಯತ್ ಗೆ ಬರೆಯಲು ನಿರ್ಣಯ
* ಡೆಂಗ್ಯೂ ಜ್ವರದ ಬಗ್ಗೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು
* ಅಪಾಯಕಾರಿ ಮರ ತೆರವುಗೊಳಿಸಿ

ಕಾಣಿಯೂರು: ಬೆಳಂದೂರು ಗ್ರಾ. ಪಂ ಸಾಮಾನ್ಯ ಸಭೆಯು ಗ್ರಾ. ಪಂ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಅವರ ಅಧ್ಯಕ್ಷತೆಯಲ್ಲಿ ಗ್ರಾ. ಪಂ ಸಭಾಂಗಣದಲ್ಲಿ ನಡೆಯಿತು.

ಮನೆ ಹಾಗೂ ಕಟ್ಟಡ ತೆರಿಗೆ ಪರಿಷ್ಕ ರಣೆಯ ಬಗ್ಗೆ ಪ್ರಭಾರ ಪಿಡಿಓ ನಾರಾಯಣರವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಪಂಚಾಯತ್ ಅಭಿವೃದ್ಧಿಯ ದೃಷ್ಟಿಯಿಂದ ಮನೆ ತೆರಿಗೆ ಪರಿಷ್ಕ ರಣೆ ಮಾಡುವುದು ಒಳ್ಳೆಯದು. ತೆರಿಗೆ ಪರಿಷ್ಕರಣೆ ನಡೆಯದೇ ಹಲವು ವರ್ಷ ನಡೆದಿದ್ದು, ಮೇಲಾಧಿಕಾರಿಗಳು ನನ್ನಲ್ಲಿ ಕೇಳ್ತಾರೆ ಎಂದವರು ಈ ಬಗ್ಗೆ ಸದಸ್ಯರು ಸಹಕಾರ ನೀಡಬೇಕು ಎಂದರು. ಈ ಬಗ್ಗೆ ಸದಸ್ಯರೆಲ್ಲರೂ ಅಭಿಪ್ರಾಯ ತಿಳಿಸಿ ಎಂದು ಅಧ್ಯಕ್ಷ ಲೋಹಿತಾಕ್ಷರವರು ಹೇಳಿದಾಗ ಮಾತಾಡಿದ ಸದಸ್ಯ ಜಯಂತ ಅಬೀರ ಕೊರೋನಾ ಮಾರಕ ರೋಗ ವ್ಯಾಪಕ ಹರಡುತ್ತಿರುವ ಈ ಸಮಯದಲ್ಲಿ ತೆರಿಗೆ ಪರಿಷ್ಕರಣೆ ಮಾಡುವುದು ಸೂಕ್ತವಾದ ಸಮಯವಲ್ಲ ಎಂದರು. ಸದಸ್ಯ ವಿಠಲ ಗೌಡ ಅಗಳಿ ಮಾತನಾಡಿ, ತೆರಿಗೆ ಪರಿಷ್ಕರಣೆ ಮಾಡಲು ನಮ್ಮ ವಿರೋಧವಿಲ್ಲ. ಆದರೆ ಏಕಾಏಕಿ ಜಾಸ್ತಿ ಮಾಡುವುದು ಸರಿಯಲ್ಲ ಎಂದರು. ಸದಸ್ಯ ರವಿಕುಮಾರ್ ಕೆಡೆಂಜಿ ಮಾತನಾಡಿ, ತೆರಿಗೆ ಜಾಸ್ತಿ ಮಾಡುವ ಬಗ್ಗೆ ವಿರೋಧವಿಲ್ಲ ಆದರೆ ತೆರಿಗೆ ಜಾಸ್ತಿ ಮಾಡುವ ದರದ ನಿಖರವಾದ ಮಾಹಿತಿ ನೀಡಬೇಕು ಎಂದರು. ತೆರಿಗೆ ಪರಿಷ್ಕರಣೆ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತೀರ್ಮಾನಿಸ ಲಾಯಿತು.

ಶಾಂತಿಮೊಗರು ಕ್ರಾಸಿಂಗ್ ಬಳಿ ಸರ್ಕಲ್ ಮಾಡಿ ಹೈ ಮಾಸ್ಟ್ ಲೈಟ್ ಮತ್ತು ಸಿಸಿಕ್ಯಾಮರ ಅಳವಡಿಸಲು ಅನುಮತಿಗೆ ಮನವಿ. ಶಾಂತಿಮೊಗರು ಕ್ರಾಸಿಂಗ್ ಬಳಿ ತುಂಬಾ ಅಪಘಾತಗಳು ಸಂಭವಿಸುತ್ತಿದ್ದು,ವಾಹನ ಸವಾರರು ಕೂಡ ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುವುದರಿಂದ ಭಯದ ವಾತಾವರಣ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಸರ್ಕಲ್ ಮಾಡಿ ಅದರಲ್ಲಿ ಹೈ ಮಾಸ್ಟ್ ಲೈಟ್ ಮತ್ತು ಸಿಸಿಕ್ಯಾಮರ ಅಳವಡಿಸಲು ಹಾಗೂ ಅದರ ಸಂಪೂರ್ಣ ಖರ್ಚನ್ನು ತಿರಂಗ ವಾರಿಯರ್ಸ್ ಕುದ್ಮಾ ರು ಸಂಘಟನೆಯು ನಿರ್ಧರಿಸಿದ್ದು, ಅವಕಾಶ ನೀಡುವಂತೆ ಅನುಮತಿಗಾಗಿ ನೀಡಿದ ಮನವಿಯನ್ನು ಸಭೆಯಲ್ಲಿ ಓದಲಾಯಿತು. ಈ ಬಗ್ಗೆ ಅನುಮತಿ ನೀಡುವಂತೆ ನಿರ್ಣಯ ಕೈಗೊಳ್ಳಲಾಯಿತು.

ಡೆಂಗ್ಯೂ ಜ್ವರಕ್ಕೂ ಮುಂಜಾಗೃತ ಕ್ರಮಕೈಗೊಳ್ಳಬೇಕು

ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡುವ ಕಾರ್ಯ ತುರ್ತಾಗಿ ಆಗಬೇಕಾಗಿದೆ ಎಂದು ಸದಸ್ಯ ಜಯಂತ ಅಬೀರ ಹೇಳಿದರು.
ಸದಸ್ಯೆ ಕುಸುಮ ಮಾತನಾಡಿ, ಅಂಕಜಾಲು ಕಾಲೋನಿಯಲ್ಲಿ ತ್ಯಾಜ್ಯಗಳು ಇದ್ದು ಗಬ್ಬು ವಾಸನೆ ಬರುತ್ತಿದೆ ಎಂದಾಗ ಅಂಕಜಾಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸದಸ್ಯ ಮೋಹನ್ ಅಗಳಿ ಹೇಳಿದರು.

ದಾರಿ ದೀಪ ಸರಿಪಡಿಸಿ

ಬೈತಡ್ಕದಿಂದ ಕುದ್ಮಾರು ರವರೆಗೆ ಇರುವ ದಾರಿ ದೀಪಗಳನ್ನು ಅಗತ್ಯವಾಗಿ ಸರಿಪಡಿಸಲು ಕ್ರಮಕೈಗೊಳ್ಳಬೇಕು. ಮತ್ತು ಅಗತ್ಯವಿರುವ ಕಾಲೋನಿಗಳಿಗೆ ಸೋಲಾರ್ ದೀಪ ಅಳವಡಿಸುವಂತೆ ಸದಸ್ಯರು ತಿಳಿಸಿದರು.

ರಾಜೀವಗಾಂಧಿ ಸಭಾಂಗಣದ ಜಾಗವನ್ನು ಪಂಚಾಯತ್ ಗೆ ಬರೆಯಲು ನಿರ್ಣಯ

ಬೆಳಂದೂರಿನ ಕೆಲೆಂಬೀರಿ ಎಂಬಲ್ಲಿರುವ ರಾಜೀವ ಗಾಂಧಿ ಸಭಾಂಗಣ ಹಾಗೂ ಪಳ್ಳತ್ತಾರು ಅಂಗನವಾಡಿ ಕೇಂದ್ರಕ್ಕೆ ಸಂಬಂಧ
ಪಟ್ಟ ಜಾಗವನ್ನು ಪಂಚಾಯತ್ ಗೆ ಬರೆದುಕೊಳ್ಳಲು ಪಿಡಿಓ ನಾರಾಯಣ ಅವರು ಸಭೆಯಲ್ಲಿ ಹೇಳಿದಾಗ ಸದಸ್ಯರು ಸಹಮತ ವ್ಯಕ್ತ ಪಡಿಸಿ, ಈ ಬಗ್ಗೆ ನಿರ್ಣಯ ಕೈ ಗೊಳ್ಳಲಾಯಿತು.

ಅಪಾಯಕಾರಿ ಮರ ತೆರವುಗೊಳಿಸಲು ನಿರ್ಣಯ

ಬರೆಪ್ಪಾಡಿ ಗ್ರಾಮಕರಣಿಕರ ಕಚೇರಿ ಹತ್ತಿರ ಅಪಾಯಕಾರಿ ಮರಗಳಿದ್ದು ತೆರವುಗೊಳಿಸುವ ಕಾರ್ಯ ಆಗಬೇಕಾಗಿದೆ ಎಂದು ಗ್ರಾ. ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ ಹೇಳಿದರು. ಅಧ್ಯಕ್ಷ ಲೋಹಿತಾಕ್ಷರವರು ಮಾತನಾಡಿ ದೊಡ್ಡ ಗಾತ್ರದ ಮರದ ಹತ್ತಿರವೇ ವಿದ್ಯುತ್ ಟಿ.ಸಿ ಲೈನ್ ಗಳಿದ್ದು ಅಪಾಯ ಖಂಡಿತ ಇದೆ. ಮರವನ್ನು ತೆರವುಗೊಳಿಸುವ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಬರೆಯಬೇಕು ಎಂದರು.

ಸ್ವಚ್ಛತ್ತೆಗೆ ಆಧ್ಯತೆ ನೀಡಿ ತಳ್ಳು ಗಾಡಿಯಲ್ಲಿ ತರಕಾರಿ ಮಾರಾಟ ಮಾಡಿ
ಪಂಚಾಯತ್ ವ್ಯಾಪ್ತಿಯಲ್ಲಿ ತರಕಾರಿ ಮಾರಾಟ ಮಾಡುವ ಬಗ್ಗೆ ಬಂದ ಅರ್ಜಿಯ ಬಗ್ಗೆ ಪ್ರಸ್ತಾಪಗೊಂಡು, ಈಗಾಗಲೇ ತಳ್ಳು ಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಸರ್ಕಾರದ ಒಪ್ಪಿಗೆ ಇದೆ ಎಂದು ಸದಸ್ಯ ವಿಠಲ ಅಗಳಿ ಹೇಳಿದರು. ತಳ್ಳು ಗಾಡಿಯಲ್ಲಿ ತರಕಾರಿ ಮಾತ್ರ ಮಾರಾಟ ಮಾಡಬೇಕು. ಅಲ್ಲದೆ ಸ್ವಚ್ಛತ್ತೆಯ ಬಗ್ಗೆಯು ಅವರು ಗಮನಹರಿಸಬೇಕು ಎಂದು ಅಧ್ಯಕ್ಷ ಲೋಹಿತಾಕ್ಷ ಹೇಳಿದರು. ಸರಿಯಾದ ನಿಯಮಗಳನ್ನು ಪಾಲಿಸಿಕೊಂಡು, ಸ್ವಚ್ಛತ್ತೆಯ ಆಧ್ಯತೆಯನ್ನು ನೀಡಬೇಕು ಎಂದು ಸದಸ್ಯ ರವಿಕುಮಾರ್ ಕೆಡೆಂಜಿ ಹೇಳಿದರು.

ಸ್ವಚ್ಛತ್ತೆಯನ್ನು ಕಾಪಾಡಿಕೊಂಡು ಒಂದು ತಿಂಗಳವರೆಗೆ ತಳ್ಳು ಗಾಡಿಯಲ್ಲಿ ಮಾರಾಟ ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಗ್ರಾ. ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ಉಮೇಶ್ವರಿ ಅಗಳಿ, ಪ್ರವೀಣ್ ಕೆರೆನಾರು, ರವಿಕುಮಾರ್ ಕೆಡೆಂಜಿ, ಜಯಂತ್ ಅಬೀರ, ವಿಠಲ ಗೌಡ ಅಗಳಿ, ಜಯರಾಮ್ ಬೆಳಂದೂರು, ಮೋಹನ್ ಅಗಳಿ, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ, ಹರಿಣಾಕ್ಷಿ ಬನಾರಿ, ಕುಸುಮ ಅಂಕಜಾಲು, ಪಾರ್ವತಿ ಮರಕ್ಕಡ ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ ಅವರು ಸಭೆ ನಿರ್ವಹಿಸಿದರು. ಸಿಬ್ಬಂದಿ ಗೀತಾ ಇಲಾಖೆ ಸುತ್ತೋಲೆ, ಸಾರ್ವಜನಿಕ ಮನವಿ ಓದಿದರು. ಸಿಬ್ಬಂದಿಗಳಾದ ಹರ್ಷಿತ್ ಕೂರ, ಸಂತೋಷ್, ಮಮತಾರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.