ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ-ಎಸ್.ಡಿ.ಪಿ.ಐ ಆರೋಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೇಂದ್ರ ಸರಕಾರದ ಪೌರತ್ವ ಅರ್ಜಿ ಆಹ್ವಾನ ವಿರೋಧಿಸಿ ಆರ್ಯಾಪು ವಲಯ ವ್ಯಾಪ್ತಿಗಳಲ್ಲಿ ಪ್ರತಿಭಟನೆ, ಪೋಸ್ಟರ್ ಪ್ರದರ್ಶನ

ಪುತ್ತೂರು: ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಂದ ಪೌರತ್ವಕ್ಕಾಗಿ ಗುಜರಾತ್, ರಾಜಸ್ಥಾನ, ಛತ್ತೀಸ್‌ಘಡ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ೧೩ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಿದ ಕೇಂದ್ರ ಗೃಹ ಸಚಿವಾಲಯದ ನಡೆಯ ವಿರುದ್ಧ ಎಸ್.ಡಿ.ಪಿ.ಐ ಆರ್ಯಾಪು ವಲಯ ವ್ಯಾಪ್ತಿಗಳಾದ ಸಂಟ್ಯಾರ್, ಸಂಪ್ಯ, ಬೆಟ್ಟಂಪಾಡಿ, ವಳತ್ತಡ್ಕ ಹಾಗೂ ಅಮ್ಮಂಜದಲ್ಲಿ ಸಾಂಕೇತಿಕ ಪ್ರತಿಭಟನೆ ಜೂ.೧ರಂದು ನಡೆಯಿತು. ಪ್ರಸಕ್ತ ಸಂದರ್ಭದಲ್ಲಿ ದೇಶವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಅದರ ಬಗ್ಗೆ ಗಮನಕೊಡಬೇಕಾದ ಕೇಂದ್ರ ಸರ್ಕಾರ ಧರ್ಮದ ಆದಾರದಲ್ಲಿ ವಿಭಜಿಸುವ ಇಲ್ಲ ಸಲ್ಲದ ಕಾನೂನುಗಳನ್ನು ಜಾರಿಗೆ ತಂದು ಜನರಿಗೆ ಮತ್ತಷ್ಟು ತೊಂದರೆಯನ್ನು ನೀಡುತ್ತಿದೆ. ಎಲ್ಲ ವಿಷಯಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿರುವ ಬಿಜೆಪಿ ಸರಕಾರ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಪ್ರಯತ್ನವನ್ನು ಮಾಡುತ್ತಿದೆ. ಕೊರೋನಾ ನಿರ್ಮೂಲನೆ ಮಾಡಲು ವಿಫಲವಾಗಿರುವ ಮೋದಿ ಸರಕಾರ ತನ್ನ ವೈಫಲ್ಯವನ್ನು ಮರೆಮಾಚಲು ಇದೀಗ ಸಿ.ಎ.ಎ. ಕಾಯ್ದೆ ಜಾರಿ ವಿಚಾರದಲ್ಲಿ ಅರ್ಜಿ ಆಹ್ವಾನಿಸಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ದೇಶದ ಪರಿಸ್ಥಿತಿ ಹದಗೆಟ್ಟಿದೆ:
ದಿನದಿಂದ ದಿನಕ್ಕೆ ಇಂಧನ ಬೆಲೆಗಳು ಏರುತ್ತಿವೆ, ಸರಕುಗಳ ಬೆಲೆ ಗಗನಕ್ಕೇರುತ್ತಿದೆ. ಕೊರೋನಾ ವೈರಸ್ ದೇಶಾದ್ಯಂತ ಸಾಕಷ್ಟು ಸಾವು-ನೋವಿಗೆ ಕಾರಣವಾಗಿ ಜನರು ತತ್ತರಿಸುವಂತೆ ಮಾಡಿದೆ. ಕೋವಿಡ್ ಸೋಂಕಿತರಿಗೆ ಸರಿಯಾದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಕೊರೋನಾದಿಂದ ಮೃತಪಟ್ಟ ಅನೇಕ ಮೃತ ದೇಹಗಳನ್ನು ನದಿಗಳಿಗೆ ಎಸೆಯಲಾಗುತ್ತಿದೆ. ದೇಶದ ಆರ್ಥಿಕತೆ ನೆಲಕಚ್ಚಿದ್ದು ಜಿಡಿಪಿ ದಾಖಲೆ ಮಟ್ಟದಲ್ಲಿ ಕುಸಿದಿದೆ. ಕೀನ್ಯಾದಂತಹ ಬಡ ಆಫ್ರಿಕನ್ ದೇಶಗಳಿಂದ ಸಹಾಯ ಪಡೆಯುವ ಪರಿಸ್ಥಿತಿ ನಮ್ಮ ಭಾರತಕ್ಕೆ ಒದಗಿ ಬಂದಿರುವುದು ಭಾರತಕ್ಕೆ ಅವಮಾನ ಮತ್ತು ದುರಂತವಾಗಿದೆ ಎಂದು ಎಸ್.ಡಿ.ಪಿ.ಐ ಆರ್ಯಾಪು ವಲಯಾಧ್ಯಕ್ಷ ಬಶೀರ್ ವಾಗ್ಲೆ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.