ಪುಟಾಣಿಗಳಿಗೆ ಮೈದಾನಕ್ಕೆ ಬಾರದಂತೆ ಬೆದರಿಕೆ: ಪೊಲೀಸ್ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಸಾರ್ವಜನಿಕ ಮೈದಾನದಲ್ಲಿ ಗುಂಪೊಂದು ಆಟವಾಡುತ್ತಿದ್ದಾಗ ಆ ಮೈದಾನಕ್ಕೆ ಸೈಕಲ್ ಸವಾರಿ ಮಾಡಿಕೊಂಡು ತೆರಳಿದ ಇಬ್ಬರು ಪುಟಾಣಿಗಳನ್ನು ಆ ಗುಂಪು ಮೈದಾನಕ್ಕೆ ಬಾರದಂತೆ ಬೆದರಿಸಿದ್ದಲ್ಲದೆ, ಮಕ್ಕಳನ್ನು ಅಲ್ಲಿಂದ ಓಡಿಸಿದ ಘಟನೆ ೩೪ ನೆಕ್ಕಿಲಾಡಿಯ ಮೈಂದಡ್ಕ ಮೈದಾನದಲ್ಲಿ ಮೇ ೩೧ರಂದು ಸಂಜೆ ನಡೆದಿದ್ದು, ಈ ಬಗ್ಗೆ ಮಕ್ಕಳ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಫ್ರಾನ್ಸಿಸ್ ಅನಿಲ್ ಮಿನೇಜಸ್, ನನ್ನ ಮನೆಯ ಸಮೀಪದ ರಸ್ತೆಯ ಇನ್ನೊಂದು ಬದಿ ನಾನು ಕೃಷಿ ಮಾಡಿಕೊಂಡು ಬರುತ್ತಿರುವ ನನ್ನ ಖದೀಮ ವರ್ಗದ ಖುಮ್ಕಿ ಜಾಗವಿರುತ್ತದೆ. ಅದರ ಬದಿಯಲ್ಲಿಯೇ ಮೈಂದಡ್ಕ ಎಂಬಲ್ಲಿ ಸಾರ್ವಜನಿಕ ಆಟದ ಮೈದಾನವಿರುತ್ತದೆ. ನಿನ್ನೆ ಸಂಜೆ ನನ್ನ ಖುಮ್ಕಿ ಜಾಗದಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಕರೆದುಕೊಂಡು ಬರಲು ತನ್ನ ಏಳರ ಹರೆಯದ ಮಗ ಹಾಗೂ ೧೨ರ ಹರೆಯದ ಮಗಳು ಸೈಕಲ್‌ನಲ್ಲಿ ತೆರಳಿದ್ದಾರೆ. ದನವನ್ನು ನಮ್ಮ ಮನೆಯ ಬಳಿ ಅಟ್ಟಿ, ಬಳಿಕ ಅವರು ಸೈಕಲ್ ಸವಾರಿ ಮಾಡುತ್ತಾ ಸಾರ್ವಜನಿಕ ಮೈದಾನಕ್ಕೆ ತೆರಳಿದ್ದಾರೆ. ಆಗ ಅಲ್ಲಿ ಮಂಜು, ಹರೀಶ್ಚಂದ್ರ, ಸುದರ್ಶನ್, ಬಾಬು ಮೂಲ್ಯ, ಮಂಜು, ಲೋಕೇಶ್ ದರ್ಬೆ ಸೇರಿದಂತೆ ಸುಮಾರು ೩೦ರಷ್ಟು ಮಂದಿಯಿದ್ದ ಗುಂಪು ಆಟವಾಡುತ್ತಿತ್ತು. ಆ ಗುಂಪಿನಲ್ಲಿದ್ದವರು ಸಾರ್ವಜನಿಕ ಮೈದಾನಕ್ಕೆ ತೆರಳುವ ದಾರಿಯನ್ನು ಬಂದ್ ಮಾಡಿ, ಅದಕ್ಕೆ ಅಡ್ಡವಾಗಿ ಗಿಡಗಳನ್ನು ನೆಟ್ಟಿದ್ದರು. ಈ ಗಿಡಗಳ ಮಧ್ಯೆ ಮಕ್ಕಳು ಸೈಕಲ್ ಬಿಟ್ಟುಕೊಂಡು ಬಂದರೆಂದು ಕೋಪಗೊಂಡ ಅಲ್ಲಿ ಆಟವಾಡುತ್ತಿದ್ದ ಗುಂಪಿನ ಕೆಲವರು ತನ್ನ ಮಕ್ಕಳನ್ನು ಇನ್ನು ಮೈದಾನಕ್ಕೆ ಬಂದರೆ ಜಾಗೃತೆ ಎಂದು ಬೆದರಿಸಿ ಅಲ್ಲಿಂದ ಅಟ್ಟಿಸಿದ್ದಾರೆ. ಅಲ್ಲದೇ, ಮಕ್ಕಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಅವರು ಭಯಭೀತರಾಗುವಂತೆ ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕ ಮೈದಾನದ ದಾರಿಯನ್ನು ಬಂದ್ ಮಾಡಿ ಪರಿಸರದಲ್ಲಿ ಶಾಂತಿ- ಸೌಹಾರ್ದತೆ ಕೆಡಲು ಕಾರಣವಾಗುವ ಖಾಸಗಿ ವ್ಯಕ್ತಿಗಳ ಮೇಲೆಯೂ ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.