ಮುಂಡೂರು 1ನೇ ವಾರ್ಡ್ ಗ್ರಾ.ಪಂ ಸದಸ್ಯರಿಂದ ವಿನೂತನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಗರ್ಭಿಣಿಯರಿಗೆ ಪ್ರೊಟೀನ್ ಪೌಡರ್, ಹಾಲು ವಿತರಣೆ

ಪುತ್ತೂರು: ಕೋವಿಡ್‌ನಿಂದ ತತ್ತರಿಸಿರುವ ಪ್ರಸಕ್ತ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವ ಮುಂಡೂರು ಗ್ರಾ.ಪಂ ಜನಪ್ರತಿನಿದಿಗಳು ತಮ್ಮ ವಾರ್ಡ್‌ನಲ್ಲಿರುವ ಗರ್ಭಿಣಿ ಮಹಿಳೆಯರಿಗೆ ಪ್ರೊಟೀನ್ ಪೌಡರ್ ಮತ್ತು ಪ್ರತಿ ಗರ್ಭಿಣಿಯರಿಗೆ 2 ಲೀಟರ್ ಹಾಲು ನೀಡುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾ.ಪಂ ಅಧ್ಯಕ್ಷರು ಪ್ರತಿನಿಧಿಸುವ ಮುಂಡೂರು 1ನೇ ವಾರ್ಡ್‌ನಲ್ಲಿ ಕಾರ್ಯಕ್ರಮ ನಡೆಯಿತು. ಪ್ರೊಟೀನ್ ಪೌಡರನ್ನು ಗ್ರಾ.ಪಂ ಸದಸ್ಯರಾದ  ಅಶೋಕ್ ಪುತ್ತಿಲ ಮತ್ತು ಬಾಲಕೃಷ್ಣ ಪೂಜಾರಿ ನೀಡಿದರೆ, ಸದಸ್ಯೆ ಅರುಣಾ ಕಣ್ಣರ್ನೂಜಿಯವರು 35 ಲೀಟರ್ ಹಾಲನ್ನು ನೀಡಿದರು. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅವರು ಪ್ರೊಟೀನ್ ಪೌಡರ್ ಮತ್ತು ಹಾಲನ್ನು ಅರ್ಹ ಫಲನುಭವಿಗಳಿಗೆ ವಿತರಿಸಿದರು. ಆಶಾ ಕಾರ್ಯಕರ್ತೆ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಶರ್ಮಿಳಾ ಉಪಸ್ಥಿತರಿದ್ದರು. ತಮ್ಮ ವಾರ್ಡಿನಲ್ಲಿರುವ ಎಲ್ಲಾ ಗರ್ಭಿಣಿಯರು ಕೂಡ ಅರೋಗ್ಯವನ್ನು ಕಾಪಾಡಿಕೊಂಡು ಜಾಗ್ರತೆಯಿಂದ ಇರಬೇಕೆಂಬ ಇರಾದೆ ನಮ್ಮದಾಗಿದೆ ಎಂದು ಗ್ರಾ.ಪಂ ಸದಸ್ಯರು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ. ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಅನಿಲ್ ಕಣ್ಣರ್ನೂಜಿ, ಶ್ರೀರಾಮ ಗೆಳೆಯರ ಬಳಗದ ಶ್ರೀಧರ ನಾಯ್ಕ್, ಧನಂಜಯ ನಾಯ್ಕ್, ಅಶೋಕ್ ನಾಯ್ಕ್ ಹಾಗೂ ಪುರಂದರ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.