ಕಡಬದಲ್ಲಿ ಸಿಆರ್‌ಸಿ ಕಾಲೋನಿಗೆ ಅಬಕಾರಿ ದಾಳಿ – ಮದ್ಯ ವಶಕ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮನೆಯ ಹಿಂಬಂದಿ ಮಾರಟಕ್ಕೆಂದು ಅಕ್ರಮವಾಗಿ ಶೇಖರಣೆ ಮಾಡಿದ ಮದ್ಯವನ್ನು ಪುತ್ತೂರು ಅಬಕಾರಿ ಪೊಲೀಸರು ಪತ್ತೆ ಮಾಡಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆದ ಘಟನೆ ಕಡಬದ ಸಿಆರ್‌ಸಿ ಕಾಲೋನಿಯ ಮನೆಯೊಂದರ ಹಿಂಬದಿ ನಡೆದಿದೆ.

ಕಡಬ ಸಿಆರ್‌ಸಿ ಕಾಲೋನಿಯ ಗುಣಶೇಖರ ಎಂಬವರ ಮನೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮನೆಯ ಹಿಂಬದಿಯ ಪೊದರಿನಲ್ಲಿ 180 ಮಿಲಿಯ 28 ಮದ್ಯ ತುಂಬಿದ ಪ್ಯಾಕೇಟ್‌ಗಳು ಪತ್ತೆಯಾಗಿತ್ತು. ಈ ವೇಳೆ ಅರೋಪಿ ಗುಣಶೇಖರ ಪರಾರಿಯಾಗಿದ್ದು, ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣದಾಖಲಿಸಿದ್ದಾರೆ. ಅಬಕಾರಿ ಉಪಧೀಕ್ಷಕ ಶಿವಪ್ರಸಾದ್ ಅವರ ಆದೇಶದ ಮೇರೆಗೆ ಪುತ್ತೂರು ವಲಯ ಕಚೇರಿ ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ ಪೈ, ಉಪನಿರೀಕ್ಷಕ ಅಂಗಾರ ಪಿ, ಮತ್ತು ಸಿಬ್ಬಂದಿಗಳಾದ ವಿಜಯ ಕುಮಾರ್,ಎಲ್ಲಪ್ಪ, ವಾಹನ ಚಾಲಕ ಸಚಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.