ವಿದ್ಯಾಮಾತಾ ಪೌಂಡೇಶನ್‌ನಿಂದ ಆಶಾ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಇಂತಹ ಹೃದಯ ಶ್ರೀಮಂತಿಕೆ ಎಲ್ಲರಿಗೂ ಬರಲಿ – ಸಂಜೀವ ಮಠಂದೂರು

ಪುತ್ತೂರು: ವಿದ್ಯಾಮಾತಾ ಪೌಂಡೇಶನ್ ವತಿಯಿಂದ ತಾಲೂಕಿನ ಆಶಾ ಕಾರ್ಯಕರ್ತರಿಗೆ ನೀಡುವ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಶಾಸಕರ ವಾರ್ ರೂಮ್‌ಗೆ ಹಸ್ತಾಂತರಿಸಲಾಯಿತು.

ವಿದ್ಯಾಮಾತಾ ಪೌಂಡೇಶನ್‌ನ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅಳಕೆಮಜಲು ಮತ್ತು ಸ್ಥಾಪಕ ಅಧ್ಯಕ್ಷ ಭಾಗ್ಯೇಶ್ ರೈ ಅವರು ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಶಾಸಕ ಸಂಜೀವ ಮಠಂದೂರಿಗೆ ಹಸ್ತಾಂತರಿಸಿದರು. ಬಳಿಕ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಬಹಳಷ್ಟು ಉತ್ತಮವಾಗಿ ಸಹಕಾರ ನೀಡುತ್ತಿದ್ದಾರೆ. ಇಂತಹ ಹೃದಯ ಶ್ರೀಮಂತಿಕೆ ಇನ್ನಷ್ಟು ಜನರಿಗೆ ಬರಲಿ ಎಂದರು. ಇದೇ ಸಂದರ್ಭದಲ್ಲಿ ನಮ್ಮ ಸಹಕಾರ ಸದಾ ಇದೆ. ಅಗತ್ಯವಿದಲ್ಲಿ ನಾವು ಇನ್ನೂ ಸಹಕಾರ ನೀಡಲಿದ್ದೇವೆ ಎಂದು ಭಾಗ್ಯೇಶ್ ರೈ ಭರವಸೆ ನೀಡಿದರು. ಶಾಸಕರ ವಾರ್‌ರೂಮ್‌ನ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ವಿಶ್ವನಾಥ ಕುಲಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಸಮಾಜಮುಖಿಯಾಗಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿ ಕೆಲಸ ನಿರ್ವಹಿಸುತ್ತಿರುವ ವಿದ್ಯಾಮಾತ ಪೌಂಡೇಶನ್ ಈಗಿನ ತುರ್ತು ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಕೋವಿಡ್ ನಿರ್ಮೂಲನೆಗೆ ಮತ್ತು ಕೋವಿಡ್ ವಿರುದ್ದ ಹೋರಾಟದಲ್ಲಿ ಪ್ರಥಮ ಪಂಕ್ತಿಯಲ್ಲಿ ನಿಲ್ಲುವ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಅನ್ನು ಶಾಸಕರ ವಾರ್ ರೂಮ್ ಮೂಲಕ ನೀಡಿದ್ದೇವೆ. ಅದೇ ರೀತಿ ಪುತ್ತೂರು ನಗರ, ತಿಂಗಳಾಡಿ, ಸರ್ವೆ, ಕೊಳ್ತಿಗೆ, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಸಂಪ್ಯ ಮತ್ತು ಬೆಳ್ಳಾರೆ ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಿದ್ದೇವೆ – ಭಾಗ್ಯೇಶ್ ರೈ, ಸ್ಥಾಪಕ ಅಧ್ಯಕ್ಷರು ವಿದ್ಯಾಮಾತಾ ಪೌಂಡೇಶನ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.