ಇ ಫೌಂಡೇಶನ್ ಇಂಡಿಯಾದಿಂದ ಅರ್ಹ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಾಮಾರಿ ಕೋವಿಡ್ 2ನೇ ಅಲೆಯ ಲಾಕ್‌ಡೌನ್‌ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳ ಬೇಡಿಕೆ ಮೇರೆಗೆ ಇ ಫೌಂಡೇಶನ್ ಇಂಡಿಯಾ ವತಿಯಿಂದ ಅಗತ್ಯ ಆಹಾರ ಸಾಮಗ್ರಿಗಳನ್ನು ಪುತ್ತೂರು ಅಸುಪಾಸಿನ ಆಯ್ದ ಕುಟುಂಬಗಳಿಗೆ ವಿತರಿಸಲಾಯಿತು.

ಬನ್ನೂರು, ಸಾಲ್ಮರ, ಬಲ್ನಾಡು, ಮುಕ್ವೆ ಮುಂತಾದ ಕಡೆಗಳಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಬಡ ಹಾಗೂ ಮದ್ಯಮ ವರ್ಗದ ಸುಮಾರು ೬೦ ಆಯ್ದ ಅರ್ಹ ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ. ಸದಾ ಸಮಾಜ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರುವ ಇ ಫೌಂಡೇಶನ್ ಇಂಡಿಯಾ ಸಂಸ್ಥೆ ಬಡವರಿಗೆ ಆಹಾರದ ಕಿಟ್, ಧನ ಸಹಾಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಇತ್ತೀಚೆಗೆ ರಂಜಾನ್ ತಿಂಗಳಿನಲ್ಲಿ ಪುತ್ತೂರು ಆಸುಪಾಸಿನ ಆಸ್ಪತ್ರೆಗಳಲ್ಲಿ ರೋಗಿಗಳ ಜತೆ ಉಳಿದುಕೊಳ್ಳುವ ಸುಮಾರು ೧೪೭೨ ಮಂದಿಗೆ ಇಫ್ತಾರ್ ಹಾಗೂ ಸಹರಿ ವ್ಯವಸ್ಥೆ ಮಾಡಿದ್ದಲ್ಲದೇ ಈದುಲ್ ಫಿತರ್ ಹಬ್ಬವನ್ನು ಆಸ್ಪತ್ರೆ ಸಿಬ್ಬಂದಿಗಳಿಗೆ ಸಿಹಿ ಹಂಚಿ ಆಚರಿಸಿದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿತ್ತು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.