ಇಂದಿರಾ ಕ್ಯಾಂಟೀನ್ ನಲ್ಲಿ ಊಟ ನೀಡಲು ಸಮಸ್ಯೆಯಾಗುವುದಾದರೆ ಕಾಂಗ್ರೆಸ್ ನಿಂದ ಎಂಟು ಕ್ವಿಂಟಾಲ್ ಅಕ್ಕಿ ನೀಡುತ್ತೇವೆ: ಸಂತೋಷ್ ಭಂಡಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಇಂದಿರಾ ಕ್ಯಾಂಟೀನ್ 8 ಊಟದ ಕುರಿತು ಬಿಜೆಪಿ ಪತ್ರಿಕಾ ಮಾಧ್ಯಮ ಕರೆಸಿ ಪತ್ರಿಕಾಗೋಷ್ಠಿ ನಡೆಸುತ್ತಿದೆ.ನಮ್ಮ ನಾಯಕಿ ಶಕುಂತಲಾ ಶೆಟ್ಟಿಯವರ ಹೇಳಿಕೆಯನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ,ಇಂದಿರಾ ಕ್ಯಾಂಟೀನ್ನಲ್ಲಿ ಊಟ ಒದಗಿಸಲು ಸಮಸ್ಯೆಯಾದರೆ, ಬಡವರಿಗೆ ಊಟ ಕೊಡಲು ಕಷ್ಟ ಆಗುವುದಿದ್ದಾರೆ ಶಾಸಕರು ಪತ್ರ ನೀಡಿ ಅನುಮತಿ ನೀಡಿದರೆ ನಾವು ಕಾಂಗ್ರೆಸ್ ಮೂಲಕ 8 ಕ್ವಿಂಟಾಲ್ ಅಕ್ಕಿ ನೀಡುತ್ತೇವೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಚಾಲಕ ಚಿಲ್ಮೆತ್ತಾರು ಸಂತೊಷ್ ಭಂಡಾರಿ ಹೇಳಿದರು.ಅವರು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 “ಯುಟಿ ಖಾದರ್ ಉಸ್ತುವಾರಿ ಸಚಿವರಾಗಿದ್ದಾಗ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಪ್ರೊಟೋಕಾಲ್ ಮೂಲಕ ಕರೆದಿದ್ದರು. ಆದರೆ ಶಾಸಕರು ಈ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಯಾಕೆಂದರೆ ಶಾಸಕರಿಗೆ ಬಡವರಿಗೆ ಊಟ ನೀಡುವ ವ್ಯವಸ್ಥೆಯ ಕುರಿತು ಮನಸ್ಸಿರಲಿಲ್ಲ ಹಾಗಾಗಿ ಅವರು ಭಾಗವಹಿಸಿರಲಿಲ್ಲ ಜೊತೆಗೆ ನಗರಸಭಾ ಸದಸ್ಯೆ ವಿದ್ಯಾ ಗೌರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅದಕ್ಕಾಗಿ ಅವರಿಗೆ ಪಕ್ಷದಿಂದ ವಾರ್ನಿಂಗ್ ರೂಪದಲ್ಲಿ ಶೋಕಾಸ್ ನೋಟೀಸ್ ನೀಡಲಾಗಿದೆ ಎಂಬ ಮಾಹಿತಿ ನಮಗೆ ದೊರೆತಿದೆ,ಹೀಗಾಗಿ ಪ್ರಾರಂಭದಲ್ಲೇ ಇಂದಿರಾ ಕ್ಯಾಂಟೀನ್ ಕುರಿತು ಬಿಜೆಪಿಗರಿಗೆ ಆಸಕ್ತಿ,ಅಭಿಮಾನ ಇರಲಿಲ್ಲ ಎಂಬುದು ತಿಳಿಯುತ್ತದೆ.ಇಂತಹರಿಗೆ ಶಕುಂತಲಾ ಶೆಟ್ಟಿಯ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ,ಶಕುಂತಲಾ ಶೆಟ್ಟಿ ಬಣ್ಣದ ರಾಜಕೀಯ ಇಲ್ಲದ ವ್ಯಕ್ತಿ ಸಂಜೀವ ಮಟಂದೂರು ಮೂರು ವರ್ಷದಲ್ಲಿ ಕೇವಲ 7 ಕೋಟಿ ಹಣ ತಂದಿದ್ದೇವೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದೀರಿ ಹೀಗೆ ಹೇಳಲು ನಾಚಿಕೆಯಾಗುವುದಿಲ್ಲವೇ ಶಕುಂತಳಾ ಶೆಟ್ಟಿಯವರು ಸಿದ್ದರಾಮಯ್ಯನವರ ಸರಕಾರದ ಮೂಲಕ ಒಂದು ಸಾವಿರ ಕೋಟಿಗಿಂತಲೂ ಹೆಚ್ಚಿನ ಹಣವನ್ನು ಪುತ್ತೂರಿನ ಅಭಿವೃದ್ದಿಗೆ ತಂದಿದ್ದಾರೆ ಆದರೆ ಬಿಜೆಪಿಯ ಶಾಸಕರು ಶಕುಂತಲಾ ಶೆಟ್ಟಿ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಅವರು ರಿಬ್ಬನ್ ಕಟ್ ಮಾಡುವ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ಶಕುಂತಲಾ ಶೆಟ್ಟಿಯವರನ್ನು ದೂರುವ ಬದಲು ಕೊರೋನ ನಿಯಂತ್ರಿಸಲು ಬೇಕಾದ ಕ್ರಮಗಳನ್ನು ರಾಜಕೀಯ ರಹಿತವಾಗಿ ಮಾಡಿ ಎಂದರು.

ಕೋವಿಡ್ ಕೇರ್ ಸೆಂಟರ್ಗೆ ಊಟ ಸರಬರಾಜಿನ ಅವ್ಯವಸ್ಥೆಯ ತನಿಖೆ ಮಾಡಿ ನಮ್ಮ ಪಕ್ಷದ ನಾಯಕರು ಈ ಹಿಂದೆ ಕೋವಿಡ್ ಕೇರ್ ಸೆಂಟರ್ರ್ಗೆ ಆಹಾರ ಸರಬರಾಜಿನ ವಿಷಯದಲ್ಲಿ ಅವ್ಯವಸ್ಥೆ ಆಗಿದೆ ಎಂದು ಆರೋಪ ಮಾಡಿದ್ದರು ಆದರೆ ಈ ಕುರಿತು ಬಿಜೆಪಿಯವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಮೊದಲು ಅದರ ತನಿಖೆ ನಡೆಸಿ ಎಂದ ಸಂತೋಷ್ ಭಂಡಾರಿ ಕಾಂಗ್ರೆಸ್ ಜನರಿಗೆ ತೊಂದರೆಯಾದಾಗ ಅವರಿಗೆ ಸಮಸ್ಯೆಗಳು ಬಂದಾಗ ಸರ್ಕಾರವನ್ನು ಎಚ್ಚರಪಡಿಸುವ ಕೆಲಸ ಮಾಡುತ್ತದೆ.ಕೊರೋನ ಸಂದರ್ಭದಲ್ಲಿ ಬಿಜೆಪಿಯವರೂ ಇದೇ ರೀತಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಅದು ಬಿಟ್ಟು ಸಮಸ್ಯೆಗನ್ನೇ ರಾಜಕೀಯಕ್ಕಾಗಿ ಉಪಯೋಗಿಸುವುದು ಬೇಡ ಎಂದರು.

ಕಾಂಗ್ರೆಸ್ ನಲ್ಲಿ ಬಂಡಾಯದ ರಾಜಕೀಯ ಇಲ್ಲ ಬದಲಾಗಿ ಪ್ರಶ್ನಿಸುವ ಅವಕಾಶ ಇದೆ
ಬಿಜೆಪಿ ನಾಯಕರು ಕಾಂಗ್ರೆಸ್ ನಲ್ಲಿ ಆರಕ್ಕಿಂತಲೂ ಹೆಚ್ಚಿನ ಬಂಡಾಯ ಇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ ಆದರೆ ನಮ್ಮಲ್ಲಿ ಬಂಡಾಯ ಇದೆ ಅಂತ ನಿಮಗೆ ಹೇಗೆ ಗೊತ್ತು ನಮಗೇ ಗೊತ್ತಿಲ್ಲದ ವಿಚಾರ ನಿಮಗೆ ಹೇಗೆ ಗೊತ್ತು ಎಂದ ಸಂತೋಷ್ ಭಂಡಾರಿ ನಮ್ಮಲ್ಲಿ ಬಂಡಾಯ ಇಲ್ಲ ಬದಲಾಗಿ ಇದು ಪಕ್ಷದ ಕಾರ್ಯಕರ್ತನಿಗಿರುವ ಸ್ವಾತಂತ್ರ್ಯ, ತನ್ನ ಅನಿಸಿಕೆಯನ್ನು ಅಭಿಪ್ರಾಯವನ್ನು ಪಕ್ಷದೊಳಗೆ ಚರ್ಚಿಸುವ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷದಲ್ಲಿದೆ ಇದನ್ನೇ ಬಂಡಾಯ ಎಂದು ಬಿಜೆಪಿ ಬಣ್ಣ ಹಚ್ಚುತ್ತಿದೆ ಸಾರುತ್ತಿದೆ.ಆದರೆ ಬಿಜೆಪಿಯಲ್ಲಿ ತನ್ನದೇ ಪಕ್ಷದ ನಾಯಕರು ತಪ್ಪು ಮಾಡಿದರೂ ಹೊಗಳಬೇಕಾದ ಅನಿವಾರ್ಯತೆ ಇದೆ.ತಪ್ಪು ಎತ್ತಿ ಹಿಡಿಯುವ ಅವಕಾಶ ಇಲ್ಲ ಜೊತೆಗೆ ಮಾತನಾಡಿದರೆ ಪಕ್ಷದಿಂದ ಉಚ್ಛಾಟನೆಯ ಭಯದಲ್ಲಿ ಬದುಕಬೇಕಾಗುತ್ತದೆ ಒಟ್ಟಿನಲ್ಲಿ ನೀವು ಸ್ವಾತಂತ್ರ್ಯ ಇಲ್ಲದೆ ರಾಜಕೀಯ ನಡೆಸಬೇಕಾಗುತ್ತದೆ.ನಿಮಗೇ ಮಾತನಾಡುವ ಸ್ವಾತಂತ್ರ್ಯ ಇಲ್ಲದವರು ಜನರೀಗೇನು ಸ್ವಾತಂತ್ರ್ಯ ನೀಡುತ್ತೀರಿ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆರ್.ಜಿ.ಪಿ.ಎಸ್. ನಗರ ಸಂಚಾಲಕರಾದ ಕೇಶವ ಪಡೀಲ್,ಜಾನ್ ಸಿರಿಲ್ ನೆಕ್ಕರೆ,ಸನತ್.ರೈ ಎಳ್ನಾಡು,ಹಬೀಬ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.