ಉಪ್ಪಿನಂಗಡಿ: ಪೊಲೀಸ್ ದೌರ್ಜನ್ಯ ವಿರುದ್ಧ ದೂರು ನೀಡಿದ್ದಕ್ಕೆ ದ್ವೇಷ ಸಾಧನೆ – ಆಧ್ಯತಾ ಪಟ್ಟಿಯಲ್ಲಿರುವ ಸೇವಾ ಕಚೇರಿಯನ್ನೇ ಬಂದ್ ಮಾಡಲು ಪೊಲೀಸ್ ಆದೇಶ..!!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತರಿಂದ ಎಸ್.ಪಿ.ಗೆ ದೂರು.
  • ಹಲವರಿಗೆ ವ್ಯಾಪಾರಕ್ಕೆ ಅವಕಾಶ, ಕೆಲವರ ವಿರುದ್ಧ ಕೇಸು.
  • ಬಟ್ಟೆ ಅಂಗಡಿಯಾತನಿಂದ 30 ಸಾವಿರ “ದಂಡ”..?

ಉಪ್ಪಿನಂಗಡಿ: ಪೊಲೀಸ್ ದೌರ್ಜನ್ಯದ ವಿರುದ್ದ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದಾರೆ ಎಂಬ ಆಕ್ರೋಶದಲ್ಲಿ ಆದ್ಯತಾ ಸೇವಾ ಪಟ್ಟಿಯಲ್ಲಿರುವ ಟೆಲಿಕಾಂ ಸೇವೆಯ ಕಚೇರಿಯನ್ನು ಮುಚ್ಚಿಸಲು ಪೊಲೀಸ್ ಅಧಿಕಾರಿಯೋರ್ವ ಆದೇಶಿಸಿ, ಹಗೆ ಸಾಧನೆ ತೋರುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿರುದ್ಧ ಉಪ್ಪಿನಂಗಡಿಯ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಉಪ್ಪಿನಂಗಡಿ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಕ್ಕೆ ಖಾಸಗಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯ ಸೇವೆ ಒದಗಿಸುತ್ತಿರುವ ಪ್ರಶಾಂತ್ ಡಿ”ಕೋಸ್ತರವರು, ಈ ಬಾರಿಯ ಲಾಕ್‌ಡೌನ್ ಅವಧಿಯಲ್ಲಿ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಪೊಲೀಸ್ ದೌರ್ಜನ್ಯವನ್ನು ಪೊಲೀಸ್ ಇಲಾಖಾ ವರಿಷ್ಠರ ಹಾಗೂ ಪತ್ರಿಕಾ ಮಾಧ್ಯಮದ ಗಮನಕ್ಕೆ ತಂದಿದ್ದರು. ಇದನ್ನೇ ನೆಪಮಾಡಿ ಹಗೆ ಸಾಧನೆಗೆ ಇಳಿದ ಪ್ರೊಬೆಷನರಿ ಎಸ್.ಐ. ಮೇ. ೩೧ ಮತ್ತು ಜೂ. ೧ರಂದು ಕಚೇರಿ ಮುಂದೆ ಬಂದು “ನೀವು ನಮ್ಮನ್ನು ಸಾರ್ವಜನಿಕವಾಗಿ ಮರ್ಯಾದೆ ಕಳೆದಿರುವಿರಿ” ಎಂದು ಆರೋಪಿಸಿ ನಿಂದಿಸಿ ಮಾತನಾಡಿ, “ನಿಮ್ಮ ಟೆಲಿಕಾಂ ಸೇವೆಯನ್ನು ಆದ್ಯತೆಯ ಸೇವೆ ಎಂದು ಮಾನ್ಯ ಮಾಡಲು ಸಾಧ್ಯವಿಲ್ಲ ಕಚೇರಿಯನ್ನು ಬಂದ್ ಮಾಡಬೇಕೆಂದು” ತಾಕೀತು ಮಾಡಿರುತ್ತಾರೆ ಎಂದು ಪ್ರಶಾಂತ್ ಡಿ’ಕೋಸ್ತ ನೀಡಿರುವ ದೂರಿನಲ್ಲಿ ಆಪಾಧಿಸಿದ್ದಾರೆ. ಮತ್ತು ಸರ್ಕಾರದ ನಿಯಮವಳಿಯಲ್ಲಿ ಟೆಲಿಕಾಂ ಸೇವೆ ಆದ್ಯತಾ ಸೇವಾ ವಿಭಾಗದಲ್ಲಿದ್ದರೆ ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಅವರು ಎಸ್.ಪಿ.ಗೆ ನೀಡಿರುವ ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.

ಹಲವರಿಗೆ ವ್ಯಾಪಾರಕ್ಕೆ ಅವಕಾಶ, ಕೆಲವರ ವಿರುದ್ಧ ಕೇಸು:
ಈ ಮಧ್ಯೆ ಬಂದಂತಹ ಮುಸ್ಲಿಂ ರಂಜಾನ್ ಹಬ್ಬದ ಸಮಯದಲ್ಲಿ ಮೇ. ೧ರ ಬಳಿಕ ೧೨ರ ತನಕ ಸುಮಾರು ೧೨ ದಿನಗಳ ಕಾಲ ಕೆಲವೊಂದು ಬಟ್ಟೆ ಅಂಗಡಿಯಲ್ಲಿ ಹೊರಗೆ ಬಾಗಿಲು ಹಾಕಿಕೊಂಡೇ ಒಳಗಡೆ ವ್ಯಾಪಾರ ನಡೆದಿದ್ದು, ಮಾಹಿತಿ ಪಡೆಯುವ ಪೊಲೀಸರು ಕೇಸು ಹಾಕಿ ಬೀಗ ಜಡಿಯುವ ಬೆದರಿಕೆ ಹಾಕಿ ಬಳಿಕ ಮಧ್ಯವರ್ತಿಗಳ ಮೂಲಕ ದಿನಕ್ಕೆ ದರ ನಿಗದಿ ಪಡಿಸಿ ಭಾರೀ ಮೊತ್ತದ ಹಣ ಪಡೆದುಕೊಂಡು ಅಂತಹವರಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಹಣ ಕೊಡದವರ ಮೇಲೆ ಕೇಸು, ಸಭ್ಯ ವರ್ತಕರಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಮಾತನಾಡುವುದು ಮಾಡುತ್ತಿದ್ದು, ಈ ಬಗ್ಗೆಯೂ ಠಾಣೆಯ ಪೊಲೀಸ್ ಅಧಿಕಾರಿಯ ನಡೆಯನ್ನು ಆಕ್ಷೇಪಿಸಿ ವರ್ತಕ ಸಂಘ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ಸಲ್ಲಿಸಿದ್ದರು. ಈ ಕಾರಣದಿಂದಲೂ ಇದೀಗ ಪೊಲೀಸರಿಂದ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂಬ ಆರೋಪ ವರ್ತಕ ಸಂಘದ ವಲಯದಲ್ಲಿ ಆರೋಪ ವ್ಯಕ್ತವಾಗಿದೆ.

ಬಟ್ಟೆ ಅಂಗಡಿಯಾತನಿಂದ 30 ಸಾವಿರ “ದಂಡ”..?
ಮೇ. ೨೯ರಂದು ಇಲ್ಲಿನ ಶಾಲಾ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯ ಒಳಗಡೆ ಗ್ರಾಹಕರು ಇದ್ದು, ವ್ಯಾಪಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ವ್ಯಕ್ತವಾಗಿತ್ತು. ಅದರಂತೆ ಪೊಲೀಸರು ಅಂಗಡಿ ಮುಂದೆ ನಿಂತು ಬಳಿಕ ಒಳಗೆ ಹೋಗಿದ್ದು, ಅಲ್ಲಿ ಗ್ರಾಹಕರು ಇದ್ದ ಬಗ್ಗೆ ವಿಡಿಯೋ ಮಾಡಲ್ಪಟ್ಟಿತ್ತು ಮತ್ತು ಅಂಗಡಿಯಾತನನ್ನು ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಸಂಜೆಯ ತನಕ ಅಂಗಡಿಯಾತನನ್ನು ಠಾಣೆಯಲ್ಲಿ ಕೂರಿಸಲಾಗಿ ಆ ಬಳಿಕದ ಬೆಳವಣಿಗೆಯಲ್ಲಿ ಆತನಿಂದ ೩೦ ಸಾವಿರ ರೂಪಾಯಿ “ದಂಡ” ಸ್ವೀಕಾರ ಮಾಡಲಾಗಿದೆ ಎಂದು ಹೇಳಲಾಗಿತ್ತು.

ವ್ಯಾಪಾರ ಮಾಡಿರಲಿಲ್ಲ, ಮಳೆ ನೀರು ತೆಗೆದಿದ್ದು:
ಆದರೆ “ಒಳಗೆ ವ್ಯಾಪಾರ ಹೊರಗೆ ಪೊಲೀಸರು” ತಲೆ ಬರಹದಲ್ಲಿ ಬಹುತೇಕ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪೊಲೀಸರು “ಅಲ್ಲಿ ವ್ಯಾಪಾರ ನಡೆಯುತ್ತಿರಲಿಲ್ಲ, ಅಂಗಡಿಯ ಒಳಗಡೆ ಮಳೆ ನೀರು ನಿಂತಿತ್ತು, ಅದನ್ನು ಒರೆಸುತ್ತಿದ್ದರು” ಎಂದು ಸಬೂಬು ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಉಪ್ಪಿನಂಗಡಿ ಠಾಣೆಯಲ್ಲಿರುವ ಕೆಲವೊಂದು ಪೊಲೀಸರ ವರ್ತನೆಯಿಂದಾಗಿ ಠಾಣೆಯ ನಿಷ್ಠಾವಂತ ಪೊಲೀಸ್ ಸಿಬ್ಬಂದಿಗಳು ಬೆತ್ತಲಾಗುತ್ತಿದ್ದಾರಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರಲಾರಂಭಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.