ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಚಾಲಕರ ಹಸಿವು ನೀಗಿಸುತ್ತಿರುವ ತಂಡ – ನೆಲ್ಯಾಡಿಯಲ್ಲಿ ಲಾರಿ ಚಾಲಕರಿಗೆ ನಿರಂತರ ಮಧ್ಯಾಹ್ನದ ಊಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಲಾಕ್‌ಡೌನ್ ಸಂದರ್ಭದಲ್ಲಿ ಮಧ್ಯಾಹ್ನದ ಊಟ ಸಿಗದೆ ತೊಂದರೆಗೆ ಸಿಲುಕಿರುವ ನೂರಾರು ಮಂದಿ ಲಾರಿ ಚಾಲಕರಿಗೆ ಮಧ್ಯಾಹ್ನದ ಊಟ ಒದಗಿಸುವ ಮೂಲಕ ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರ ನೇತೃತ್ವದ ತಂಡ ಕಳೆದ ೧೭ ದಿನಗಳಲ್ಲಿ ಚಾಲಕರ ಹಸಿವು ನೀಗಿಸುವ ಕೆಲಸ ಮಾಡಿದೆ.

 

 

ಕೊರೋನಾ ೨ನೇ ಅಲೆ ಅಬ್ಬರ ಎಲ್ಲೆಡೆ ಅಬ್ಬರಿಸುತ್ತಿದೆ. ಇದರ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಆದರೆ ಅಗತ್ಯ ವಸ್ತುಗಳ ಸಾಗಾಟ ಮಾಡುವ ನೂರಾರು ಲಾರಿಗಳು ದಿನಂಪ್ರತಿ ರಾಷ್ಟ್ರೀಯ ಹೆದ್ದಾರಿ ಮೂಲಕ ಓಡಾಟ ನಡೆಸುತ್ತಲೇ ಇವೆ. ಹೆದ್ದಾರಿಯುದ್ದಕ್ಕೂ ಹೋಟೆಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿರುವುದರಿಂದ ಲಾರಿ ಚಾಲಕರು ನೀರು, ಅನ್ನಾಹಾರವಿಲ್ಲದೇ ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡು ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರ ನೇತೃತ್ವದ ತಂಡ ಕಳೆದ ೧೭ ದಿನಗಳ ಅವಧಿಯಲ್ಲಿ ಪ್ರತಿದಿನವೂ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ ಚಾಲಕರಿಗೆ ಆಹಾರ, ನೀರು ಒದಗಿಸುವ ಮೂಲಕ ಅವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಅಬ್ದುಲ್ ಜಬ್ಬಾರ್‌ರವರು ತನ್ನ ಸ್ನೇಹಿತರ ಜೊತೆ ಸೇರಿ ಲಾರಿ ಚಾಲಕರಿಗೆ ಅನ್ನ, ಸಾಂಬಾರು ನೀಡುತ್ತಿದ್ದರು. ಬಳಿಕ ಇವರ ಸಾಮಾಜಿಕ ಸೇವೆಗೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಹಿಂದಿನ ಧರ್ಮಗುರು ಫಾ.ಆದರ್ಶ್ ಜೋಸೆಫ್, ಈಗಿನ ಧರ್ಮಗುರು ಫಾ.ಬಿನೋಯ್, ಸಹಾಯಕ ಧರ್ಮಗುರು ಫಾ.ನೊಬಲ್, ನೆಲ್ಯಾಡಿ ಮಾತಾಲ್ಯಾಬ್‌ನ ಜೋಸ್ ಕೆ.ಜೆ., ಜೋಜೋ ನೆಲ್ಯಾಡಿಯವರು ಕೈಜೋಡಿಸಿದರು. ದಾನಿಗಳ ಸಹಕಾರ ಪಡೆದುಕೊಂಡ ಇವರ ತಂಡ ಲಾಕ್‌ಡೌನ್ ಜಾರಿಗೊಂಡ ಬಳಿಕ ನಿರಂತರ ೧೭ ದಿನ ಲಾರಿ ಚಾಲಕರಿಗೆ ಮಧ್ಯಾಹ್ನದ ಊಟ ಒದಗಿಸಿದೆ. ಮಧ್ಯಾಹ್ನ ೧೨ ಗಂಟೆಯಿಂದ ೧ ಗಂಟೆ ತನಕ ನೆಲ್ಯಾಡಿ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ ಚಾಲಕರಿಗೆ ಅನ್ನ, ಸಾಂಬಾರು ಉಚಿತವಾಗಿ ವಿತರಿಸಿದೆ. ಪ್ರತಿದಿನ ೫೦ ರಿಂದ ೭೫ ಮಂದಿ ಚಾಲಕರಿಗೆ ಊಟ ನೀಡಲಾಗುತ್ತಿತ್ತು. ಈ ಮೂಲಕ ಲಾಕ್‌ಡೌನ್ ಸಂದರ್ಭದಲ್ಲಿ ಸರಿಯಾಗಿ ಊಟ ಸಿಗದೆ ತೊಂದರೆಗೆ ಸಿಲುಕುತ್ತಿದ್ದ ಲಾರಿ ಚಾಲಕರ ಹಸಿವು ನೀಗಿಸುವ ಕೆಲಸ ಮಾಡಿರುವ ಇವರ ಸಾಮಾಜಿಕ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ರೋಗಿಗಳಿಗೂ ಊಟ:
ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೂ ಅಬ್ದುಲ್ ಜಬ್ಬಾರ್ ನೇತೃತ್ವದ ತಂಡ ೫ ದಿನ ಮಧ್ಯಾಹ್ನದ ಊಟ ಒದಗಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಅದೆಷ್ಟೋ ಜನರು ನಾನಾ ರೀತಿಯಲ್ಲಿ ತೊಂದರೆಗೆ ಸಿಲುಕಿದ್ದಾರೆ. ಇಂತವರಿಗೆ ವಿವಿಧ ಸಂಘಟನೆಗಳು ನೆರವು ನೀಡುತ್ತಿವೆ. ಜನರ ನೋವಿಗೆ ಸ್ಪಂದಿಸುವ ಮೂಲಕ ಮಾನವೀಯತೆ ತೋರುತ್ತಿರುವುದು, ಜನರ ಸಂಕಷ್ಟಕ್ಕೆ ನೆರವು ನೀಡುತ್ತಿರುವುದು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ೧೭ ದಿನ ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ ಚಾಲಕರಿಗೆ ಮಧ್ಯಾಹ್ನದ ಊಟ ನೀಡಲಾಗಿದೆ. ಹೋಟೆಲ್‌ವೊಂದರಲ್ಲಿ ಅನ್ನ, ಸಾಂಬಾರು ತಯಾರಿಸಿ ಪ್ರತಿದಿನ ೫೦ ರಿಂದ ೭೫ ಮಂದಿಗೆ ಮಧ್ಯಾಹ್ನದ ಊಟ ನೀಡಿದ್ದೇವೆ. ಇದಕ್ಕೆ ನೆಲ್ಯಾಡಿಯ ಹಲವು ದಾನಿಗಳು ಸಹಕಾರ ನೀಡಿದ್ದಾರೆ – ಅಬ್ದುಲ್ ಜಬ್ಬಾರ್ ಉಪಾಧ್ಯಕ್ಷರು, ಗ್ರಾ.ಪಂ.ನೆಲ್ಯಾಡಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.